ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್, ಪ್ಲೇ ಆಫ್ ಪ್ರವೇಶಕ್ಕೆ ಹೋರಾಟ ತೀವ್ರಗೊಳ್ಳುತ್ತಿರುವಾಗಲೇ ಸಾಲ್ಟ್ ಇಂಗ್ಲೆಂಡ್‌ಗೆ ತೆರಳಿರುವುದು ಆರ್‌ಸಿಬಿ ಆತಂಕ ಹೆಚ್ಚಿಸಿದೆ.

ಸಮಸ್ಯೆಯಲ್ಲಿ ಸಿಲುಕಿತಾ ಆರ್‌ಸಿಬಿ?
ಐಪಿಎಲ್ ಟೂರ್ನಿ ಮಹತ್ವದ ಘಟಕ್ಕ ತಲುಪಿದೆ. ಪ್ಲೇ ಆಫ್ ಲೆಕ್ಕಾಚಾರಗಳು ತೀವ್ರಗೊಳ್ಳುತ್ತಿದೆ. ಕಳೆದ ಪಂದ್ಯದ ಸೋಲಿನಿಂದ ಆರ್‌ಸಿಬಿ ಇದೀಗ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ನಡುವೆ ಆರ್‌ಸಿಬಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಇದೀಗ ಫಿಲ್ ಸಾಲ್ಟ್ ಟೂರ್ನಿ ನಡುವೆ ತವರಿಗೆ ಮರಳಿದ್ದಾರೆ.
ಫಿಲ್ ಸಾಲ್ಟ್ ದಿಢೀರ್ ವಾಪಸ್
ಆರ್‌ಸಿಬಿಗೆ ಉತ್ತಮ ಆರಂಭ ನೀಡುತ್ತಿದ್ದ ಫಿಲ್ ಸಾಲ್ಟ್ ಇಂಜುರಿ ಕಾರಣದಿಂದ ಕಳೆದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೈಬೆರಳಿನ ಗಾಯದಿಂದ ಫಿಲ್ಟ್ ಚೇತರಿಸಿಕೊಂಡಿಲ್ಲ. ಹೀಗಾಗಿ ದಿಢೀರ್ ಸಾಲ್ಟ್ ತವರಿಗೆ ಮರಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಚಿಕಿತ್ಸೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡೆಲ್ಲಿ ಪಂದ್ಯದಲ್ಲಿ ಇಂಜುರಿ, ಬೆತೆಲ್ ಕಂಡುಕೊಂಡಿಲ್ಲ ಲಯ
ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಫೀಲ್ಡಿಂಗ್ ಮಾಡುವ ವೇಳೆ ಇಂಜುರಿಯಾಗಿದ್ದರು. ಬಳಿಕ ಮೂರು ಪಂದ್ಯಗಳಲ್ಲಿ ಸಾಲ್ಟ್ ಅಲಭ್ಯರಾಗಿದ್ದರು. ಫಿಲ್ ಸಾಲ್ಟ್ ಬದಲು ಬೆತೆಲ್ ತಂಡ ಸೇರಿಕೊಂಡಿದ್ದರು. ಆದರೆ ಬೆತೆಲ್ ಇನ್ನೂ ಲಯ ಕಂಡುಕೊಂಡಿಲ್ಲ.
ಲಖನೌ ಸವಾಲು
ಎಪ್ರಿಲ್ 7 ರಂದು ಆರ್‌ಸಿಬಿ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ಸವಾಲು. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಮುಗ್ಗರಿಸಿದ ಆರ್‌ಸಿಬಿಗೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಇದರ ನಡುವೆ ಸಾಲ್ಟ್ ಸದ್ಯಕ್ಕೆ ಲಭ್ಯರಿಲ್ಲ ಅನ್ನೋದು ಖಚಿತಗೊಂಡಿದೆ.
ಅಂಕಪಟ್ಟಿಯಲ್ಲಿ 2ನೇ ಸ್ಥಾನ
ಅಂಕಪಟ್ಟಿಯಲ್ಲಿ ಆರ್‌ಸಿಬಿ ಸದ್ಯ 2ನೇ ಸ್ಥಾನದಲ್ಲಿದೆ. 9 ಪಂದ್ಯದಲ್ಲಿ 6 ಗೆಲುವು ಹಾಗೂ 3 ಸೋಲು ಕಂಡಿದೆ. 12 ಅಂಕ ಸಂಪಾದಿಸಿರುವ ಆರ್‌ಸಿಬಿ ಇದೀಗ ಪ್ಲೇ ಆಫ್ ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ 3 ಹಾಗೂ ರಾಜಸ್ಥಾನ ರಾಯಲ್ಸ್ 4ನೇ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿ 2ನೇ ಸ್ಥಾನ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

