ಐಪಿಎಲ್ 2025: ಈ ಸಲ ಚಾಂಪಿಯನ್ ಆಗುವ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು?
ಐಪಿಎಲ್ 2025ರ ಚಾಂಪಿಯನ್ ತಂಡಕ್ಕೆ ಕೋಟಿಗಟ್ಟಲೆ ರೂಪಾಯಿ ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡ ಕೂಡ ಖಾಲಿ ಕೈಯಲ್ಲಿ ಹೋಗೋದಿಲ್ಲ, ಅವರಿಗೂ ಭರ್ಜರಿ ಬಹುಮಾನ. ಸೂಪರ್ ಪರ್ಫಾರ್ಮೆನ್ಸ್ ಕೊಟ್ಟ ಪ್ಲೇಯರ್ಸ್‌ಗೂ ದುಡ್ಡಿನ ಸುರಿಮಳೆ.

ಗೆದ್ದವರಿಗೆ ದುಡ್ಡಿನ ಮಳೆ
ಐಪಿಎಲ್ 2025ರ ವಿಜೇತ ತಂಡಕ್ಕೆ ಕೋಟಿ ಕೋಟಿ ಹಣ. ರನ್ನರ್ ಅಪ್, ಟಾಪ್3 ಮತ್ತು 4 ತಂಡಗಳಿಗೂ ಬಹುಮಾನ. ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್ ಗೆದ್ದವರಿಗೂ ಲಕ್ಷ ಲಕ್ಷ ರೂಪಾಯಿ.

ಐಪಿಎಲ್ 2025 ಭರ್ಜರಿ ಆರಂಭ
ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಸೀಸನ್ ಶುರುವಾಗಿದೆ. ಈಗಾಗಲೇ 30 ಪಂದ್ಯಗಳು ಮುಗಿದಿವೆ. ಈ ಸೀಸನ್‌ನಲ್ಲಿ ರೋಚಕ ಪಂದ್ಯಗಳು ನಡೆದಿವೆ.
ಫೈನಲ್ ಯಾವಾಗ?
ಐಪಿಎಲ್ 2025ರ ಫೈನಲ್ ಮೇ 25ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ. ಯಾವ ತಂಡಗಳು ಫೈನಲ್ ತಲುಪುತ್ತವೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ದುಡ್ಡಿನ ಸುರಿಮಳೆ
ಐಪಿಎಲ್‌ನಲ್ಲಿ ಈ ಸಲವೂ ಪ್ಲೇಯರ್ಸ್ ಮೇಲೆ ದುಡ್ಡಿನ ಸುರಿಮಳೆಯೇ. ಪ್ರತಿ ಪಂದ್ಯದ ನಂತರ ಚೆನ್ನಾಗಿ ಆಡಿದವರಿಗೆ ಬಹುಮಾನ ಕೊಡಲಾಗುತ್ತದೆ.
ಐಪಿಎಲ್ 2025 ಬಹುಮಾನ
ಐಪಿಎಲ್ 2025ರ ಬಹುಮಾನ ಮೊತ್ತ ಕಳೆದ ಸೀಸನ್‌ನಷ್ಟೇ ಇರಲಿದೆ. ಚಾಂಪಿಯನ್ ತಂಡಕ್ಕೆ 20 ಕೋಟಿ, ರನ್ನರ್ ಅಪ್‌ಗೆ 12.5 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳಲಿವೆ.
ಮೂರನೇ ಮತ್ತು ನಾಲ್ಕನೇ ತಂಡಗಳಿಗೂ ಬಹುಮಾನ
ಇನ್ನು ಐಪಿಎಲ್ ಪ್ಲೇ ಆಫ್ ಪ್ರವೇಶಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನ ಪಡೆದ ತಂಡಕ್ಕೆ 7 ಕೋಟಿ, 4ನೇ ಸ್ಥಾನ ಪಡೆದ ತಂಡಕ್ಕೆ 6.5 ಕೋಟಿ ರೂ. ಬಹುಮಾನ ಸಿಗಲಿದೆ.
ಆರೆಂಜ್ & ಪರ್ಪಲ್ ಕ್ಯಾಪ್ ಬಹುಮಾನ
ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಜೊತೆಗೆ 10 ಲಕ್ಷ ರೂ. ಹೆಚ್ಚು ವಿಕೆಟ್ ಪಡೆದವರಿಗೆ ಪರ್ಪಲ್ ಕ್ಯಾಪ್ ಜೊತೆಗೆ 10 ಲಕ್ಷ ರುಪಾಯಿ ಸಿಗಲಿದೆ.
ಎಮರ್ಜಿಂಗ್ ಪ್ಲೇಯರ್‌ಗೂ ಬಹುಮಾನ
ಈ ಸೀಸನ್‌ನಲ್ಲೂ ಎಮರ್ಜಿಂಗ್ ಪ್ಲೇಯರ್‌ಗೆ 10 ಲಕ್ಷ ರೂ. ಬಹುಮಾನ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದ ಆಟಗಾರರಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿ ನೀಡಲಾಗುತ್ತದೆ.