ಐಪಿಎಲ್ 2025: ಲೀಗ್ ಅಂತ್ಯದ ವೇಳೆಗೆ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್ಸ್
2025ರ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಪ್ಲೇ ಆಫ್‌ಗೆ ಕ್ಷಣಗಣನೆ ಶುರುವಾಗಿದೆ. ಲೀಗ್ ಹಂತದ ಅಂತ್ಯಕ್ಕೆ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್ಸ್ ಯಾರು ನೋಡೋಣ ಬನ್ನಿ

IPL 2025 ರಲ್ಲಿ ಬ್ಯಾಟರ್‌ಗಳ ಅಬ್ಬರ
ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ ಪ್ಲೇಆಫ್ ಹಂತಕ್ಕೆ ಬಂದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟರ್‌ಗಳದ್ದೇ ಅಬ್ಬರ.
ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಸ್
ಈ ಸೀಸನ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ನಿಕೋಲಸ್ ಪೂರನ್(ಲಖನೌ ಸೂಪರ್ ಜೈಂಟ್ಸ್)
ಲಕ್ನೋ ಸೂಪರ್ ಜೈಂಟ್ಸ್‌ನ ನಿಕೋಲಸ್ ಪೂರನ್ 14 ಪಂದ್ಯಗಳಲ್ಲಿ 40 ಸಿಕ್ಸರ್ ಬಾರಿಸಿದ್ದಾರೆ. ಲಖನೌ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.
2. ಮಿಚೆಲ್ ಮಾರ್ಷ್(ಲಖನೌ ಸೂಪರ್ ಜೈಂಟ್ಸ್)
ಲಖನೌ ಸೂಪರ್ ಜೈಂಟ್ಸ್‌ನ ಮಿಚೆಲ್ ಮಾರ್ಷ್ 14 ಪಂದ್ಯಗಳಲ್ಲಿ 37 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
3. ಸೂರ್ಯಕುಮಾರ್ ಯಾದವ್(ಮುಂಬೈ ಇಂಡಿಯನ್ಸ್)
ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ 14 ಪಂದ್ಯಗಳಲ್ಲಿ 32 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ಲೇ ಆಫ್‌ನಲ್ಲೂ ಸೂರ್ಯ ಅಬ್ಬರಿಸುವ ಸಾಧ್ಯತೆಯಿದೆ.
4. ಶ್ರೇಯಸ್ ಅಯ್ಯರ್(ಪಂಜಾಬ್ ಕಿಂಗ್ಸ್)
ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ 14 ಪಂದ್ಯಗಳಲ್ಲಿ 31 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಯ್ಯರ್, ಇದೀಗ ಆರ್‌ಸಿಬಿ ಎದುರು ಮೊದಲ ಕ್ವಾಲಿಫೈಯರ್‌ಗೆ ಸಜ್ಜಾಗುತ್ತಿದ್ದಾರೆ.
5. ಅಭಿಷೇಕ್ ಶರ್ಮಾ(ಸನ್‌ರೈಸರ್ಸ್ ಹೈದರಾಬಾದ್)
ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ 14 ಪಂದ್ಯಗಳಲ್ಲಿ 28 ಸಿಕ್ಸರ್ ಬಾರಿಸಿದ್ದಾರೆ. ಸನ್‌ರೈಸರ್ಸ್ ಕೂಡಾ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.