ಐಪಿಎಲ್‌ನಲ್ಲಿ ಧೂಳೆಬ್ಬಿಸ್ತೇನೆ; ಉಳಿದ ತಂಡಗಳಿಗೆ ಕಾಶ್ಮೀರಿ ವೇಗಿ ಖಡಕ್ ವಾರ್ನಿಂಗ್!
ಬೆಂಗಳೂರು: 2025ರ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಕಾಶ್ಮೀರ ಮೂಲದ ಮಾರಕ ವೇಗಿ ಉಳಿದ ತಂಡಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಐಪಿಎಲ್‌ನಲ್ಲಿ ಧೂಳಿಬ್ಬೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

Image credit: PTI
18ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 10 ತಂಡಗಳು ಬರೋಬ್ಬರಿ 639.15 ಕೋಟಿ ರುಪಾಯಿ ಖರ್ಚು ಮಾಡಿ 182 ಆಟಗಾರರನ್ನು ಖರೀದಿಸಿವೆ.
ತಮ್ಮ ಮಾರಕ ವೇಗದ ಬೌಲಿಂಗ್ ಮೂಲಕವೇ ಕ್ರಿಕೆಟ್ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದಿದ್ದ ಕಾಶ್ಮೀರ ಮೂಲದ ವೇಗಿ ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 75 ಲಕ್ಷ ರುಪಾಯಿ ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಉಮ್ರಾನ್ ಮಲಿಕ್ ಉಳಿದ ಎಲ್ಲಾ 9 ತಂಡಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಉಮ್ರಾನ್ ಮಲಿಕ್ 2021ರಿಂದ 2024ರವರಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಟೈಮ್ಸ್ ಸುದ್ದಿವಾಹಿನಿ ನಡೆಸಿದ ಸಂದರ್ಶನದಲ್ಲಿ ಉಮ್ರಾನ್ ಮಲಿಕ್, 'ಐಪಿಎಲ್‌ನಲ್ಲಿ ನಾನು ಧೂಳೆಬ್ಬಿಸಲು ರೆಡಿಯಾಗಿದ್ದೇನೆ. ನಾನು ಈ ಬಾರಿ ಸಾಕಷ್ಟು ವಿಕೆಟ್ ಕಬಳಿಸುವ ವಿಶ್ವಾಸವಿದೆ. ನಾನು ಕೆಕೆಆರ್ ತಂಡದ ಪರ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
Image credit: PTI
'ವೇಗವಾಗಿ ಬೌಲಿಂಗ್ ಮಾಡುವುದು ನನಗೆ ಒಂದು ರೀತಿ ರೋಮಾಂಚನವನ್ನುಂಟು ಮಾಡುತ್ತದೆ. ಈ ಸಲ ನಾನು 160 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ 150 ಕಿಲೋ ಮೀಟರ್ ವೇಗದಲ್ಲೂ ವಿಕೆಟ್ ಕಬಳಿಸುವ ವಿಶ್ವಾಸ ನನ್ನಲಿದೆ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.
ನಾನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡ ಕೂಡಿಕೊಂಡಿದ್ದಕ್ಕೆ ತುಂಬಾ ಖುಷಿಯಾಗಿದೆ. ನಾನು ಕೆಕೆಆರ್ ಜೆರ್ಸಿ ತೊಡಲು ಸಾಕಷ್ಟು ಉತ್ಸುಕನಾಗಿದ್ದೇನೆ. ಹಾಲಿ ಚಾಂಪಿಯನ್ ತಂಡವನ್ನು ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.