Virat Kohli ಮಾತ್ರವಲ್ಲ, RCB ಈ ಆಟಗಾರರ ಪತ್ನಿಯರು ಕೂಡ ಸುಂದರಿಯರು!
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15 ನೇ ಋತುವಿನ 22 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ನಡೆಯಲಿದೆ. ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿವೆ. ಈ ಬಾರಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಎರಡೂ ತಂಡಗಳ ನಾಯಕರೂ ಬದಲಾಗಿದ್ದಾರೆ. RCB ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಎಲ್ಲರಿಗೂ ತಿಳಿದಿದೆ. ಅವರು ಮಾತ್ರ ತಂಡದ ಬೇರೆ ಆಟಗಾರರ ಪತ್ನಿಯರು ಬಹಳ ಸುಂದರವಾಗಿದ್ದಾರೆ. ಇಲ್ಲಿದೆ ಆರ್‌ಸಿಬಿ ಆಟಗಾರರ ಪತ್ನಿಯರ ಪರಿಚಯ.

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್:
ಆರ್‌ಸಿಬಿ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ತಿಂಗಳು ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾದರು. ವಿನಿ ಅವರು ವೃತ್ತಿಯಲ್ಲಿ ಆಸ್ಟ್ರೇಲಿಯಾದಲ್ಲಿ ಫರ್ಮಾಸಿಸ್ಟ್ ಆಗಿದ್ದಾರೆ ಮತ್ತು ತಮಿಳು ಕುಟುಂಬದಿಂದ ಬಂದವರು.
ಫಾಫ್ ಡು ಪ್ಲೆಸಿಸ್ ಮತ್ತು ಇಮರಿ ವಿಸ್ಸರ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 2013 ರಿಂದ ಇಮರಿ ವಿಸ್ಸರ್ ಅವರನ್ನು ವಿವಾಹವಾಗಿದ್ದಾರೆ. ಇಮಾರಿ ದಕ್ಷಿಣ ಆಫ್ರಿಕಾದ ಸಂಸದ ಕರಿನ್ ಅವರ ಪುತ್ರಿ ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುತ್ತಾರೆ. ಫಾಫ್ ಮತ್ತು ಇಮರಿ ಅವರಿಗೆ ಜೋಯ್ ಮತ್ತು ಅಮೆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಜೇಸನ್ ಬೆಹ್ರೆನ್ಡಾರ್ಫ್ ಮತ್ತು ಜುವೆಲ್ ಹಟ್:
ಆರ್‌ಸಿಬಿ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್ ಜುವೆಲ್ ಹಟ್ ಅವರನ್ನು 2014 ರಿಂದ ವಿವಾಹವಾಗಿದ್ದಾರೆ. ತುಂಬಾ ಸುಂದರವಾಗಿರುವ ಜುವೆಲ್ ವೃತ್ತಿಯಲ್ಲಿ ಸ್ಟೈಲಿಸ್ಟ್ ಆಗಿದ್ದಾರೆ.
ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್:
RCB ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 2018 ರಲ್ಲಿ ಸ್ಕ್ವಾಷ್ ಸ್ಟಾರ್ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು. ಈ ವರ್ಷ ಇಬ್ಬರಿಗೆ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಗಂಡು ಮಕ್ಕಳಾದರು. ಈ ಹಿಂದೆ ದಿನೇಶ್ ತನ್ನ ಬಾಲ್ಯದ ಗೆಳತಿ ನಿಕಿತಾರನ್ನು ಮದುವೆಯಾಗಿದ್ದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2017 ರಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ವಾಮಿಕಾ ಎಂಬ ಮಗಳಿದ್ದಾಳೆ. ಅವರು ಕ್ರಿಕೆಟ್ ಮತ್ತು ಬಾಲಿವುಡ್‌ನ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.