ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, 10 ಸೆಕೆಂಡ್ ಆ್ಯಡ್ ರೇಟ್ ಎಷ್ಟು?
ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, ಪಂದ್ಯ ಪ್ರಸಾರದ ವೇಳೆ ಬರುವ 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದರೆ ಅಚ್ಚರಿಯಾಗುವುದು ಖಚಿತ, ಶೇಕಡಾ 90ರಷ್ಟು ಜಿಗಿತ ಕಂಡಿದೆ.

ಗಗನಕ್ಕೇರಿದ ಜಾಹೀರಾತು ಬೆಲೆ
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ರೋಚಕ ಹೋರಾಟ ನಡೆಯಲಿದೆ. ಭಾರತ ವಿರುದ್ದ ಆಡಲ್ಲ ಎಂದು ಹೇಳೇ ಚಾಳಿ ಮುಂದುವರಿಸಿದ್ದ ಪಾಕಿಸ್ತಾನ ಬಳಿಕ ಯೂಟರ್ನ್ ಹೊಡೆದಿತ್ತು. ರೋಚಕ ಪಂದ್ಯದ ಕುತೂಹಲ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಪಂದ್ಯ ಪ್ರಸಾರದ ನಡುವಿನ ಜಾಹೀರಾತು ಬೆಲೆ ಗಗನಕ್ಕೇರಿದೆ.
10 ಸೆಕೆಂಡ್ ಜಾಹೀರಾತು ಬೆಲೆ
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಬದ್ಧವೈರಿಗಳ ಕದನ. ಇದೇ ಕಾರಣದಿಂದ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚು, ಬೇಡಿಕೆ ಹೆಚ್ಚು, ಹೂಡಿಕೆಯೂ ಹೆಚ್ಚು. ಹೀಗಾಗಿ ಐಸಿಸಿ ಹೇಗಾದರೂ ಮಾಡಿ ಇಂಡೋ ಪಾಕ್ ಪಂದ್ಯ ಹಲವು ಭಾರಿ ಮುಖಾಮುಖಿಯಾಗುವಂತೆ ಮಾಡುತ್ತದೆ. ಈ ಬಾರಿಯ ಟಿ20 ವಿಶ್ವಕಪ್ ಭಾರತ ಪಾಕಿಸ್ತಾನ ಪಂದ್ಯದ ನಡುವೆ ಪ್ರಸಾರವಾಗು ಜಾಹೀರಾತು ಬೆಲೆ 10 ಸೆಕೆಂಡ್‌ಗೆ 70 ಲಕ್ಷ ರೂಪಾಯಿಗೆ ತಲುಪಿದೆ.
2024ರ ಟಿ20 ವಿಶ್ವಕಪ್ ಬೆಲೆಗಿಂತ ಶೇಕಡಾ 90ರಷ್ಟು ಹೆಚ್ಚಳ
2024ರ ಟಿ20 ವಿಶ್ವಕಪ್ ವೇಳೆ ಭಾರತ ಪಾಕಿಸ್ತಾನ ನಡುವಿನ ಪಂದ್ಯದ ನಡುವಿನ ಜಾಹೀರಾತು ಬೆಲೆ 10 ಸೆಕೆಂಡ್‌ಗೆ 40 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. ಇತರ ಪಂದ್ಯಗಳ ನಡುವೆ ಜಾಹೀರಾತು ಪ್ರದರ್ಶನಕ್ಕೆ 20 ರಿಂದ 25 ಲಕ್ಷ ರೂಪಾಯಿ ಇದ್ದರೆ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ 40 ಲಕ್ಷ ರೂಪಾಯಿ ಇತ್ತು. ಈ ಬಾರಿ 70 ಲಕ್ಷ ರೂಪಾಯಿಗೆ ತಲುಪಿದೆ.
2000 ಕೋಟಿ ರೂಪಾಯಿ ಆದಾಯ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಬರೋಬ್ಬರಿ 2000 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಈ ಪೈಕಿ ಹೆಚ್ಚಿನ ಆದಾಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಿಂದಲೇ ಬರುತ್ತಿದೆ. ಶೇಕಡಾ 50 ರಿಂದ 60 ರಷ್ಟು ಆದಾಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಿಂದ ಬರಲಿದೆ.
ವಿಮಾನ ದರ ಭಾರಿ ಏರಿಕೆ
ಇಂಡೋ ಪಾಕ್ ಪಂದ್ಯದಿಂದ ವಿಮಾನ ದರದಲ್ಲೂ ಭಾರಿ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಕೊಲೊಂಬೊ ಪ್ರಯಾಣದ ವಿಮಾನ ಟಿಕೆಟ್ ದರ ಶೇಕಡಾ 300ರಷ್ಟು ಹೆಟ್ಟಾಗಿದೆ. ಅತ್ತ ಕೊಲೊಂಬೋದಲ್ಲಿ ಹೊಟೆಲ್ ಸೇರಿದಂತೆ ಕೊಠಡಿಗಳು, ಹೋಮ್ ಸ್ಟೇ, ರೆಸಾರ್ಟ್ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ.
7 ಗಂಟೆಗೆ ಪಂದ್ಯ ಆರಂಭ
ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ಪಂದ್ಯ ಇಂದು (ಫೆ.15) 7ಗಂಟೆಗೆ ಆರಂಭಗೊಳ್ಳಲಿದೆ. ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯ ನಡೆಯಲಿದೆ. ಮಳೆ ಸಾಧ್ಯತ ಕಡಿಮೆ. ಆದರೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹಮಾಮಾನ ಇಲಾಖೆ ವದಿ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

