- Home
- Sports
- Cricket
- ಇಮ್ರಾನ್ ಖಾನ್‌ಗೆ ಚಿಕಿತ್ಸೆ ಕೊಡಿಸಿ: ಕಪಿಲ್, ಗವಾಸ್ಕರ್ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ
ಇಮ್ರಾನ್ ಖಾನ್‌ಗೆ ಚಿಕಿತ್ಸೆ ಕೊಡಿಸಿ: ಕಪಿಲ್, ಗವಾಸ್ಕರ್ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಭಾರತದ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿದಂತೆ ವಿಶ್ವದ 14 ಕ್ರಿಕೆಟ್ ದಿಗ್ಗಜರು ಪಾಕ್ ಸರ್ಕಾರಕ್ಕೆ ಪತ್ರ ಬರೆದು, ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡುವಂತೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಸರ್ಕಾರಕ್ಕೆ ಪತ್ರ
ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪಾಕ್ ಮಾಜಿ ಪ್ರಧಾನಿ, ದಿಗ್ಗಜ ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಭಾರತದ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿದಂತೆ ವಿಶ್ವದ 14 ಕ್ರಿಕೆಟ್ ದಿಗ್ಗಜರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
14 ವರ್ಷ ಜೈಲು ಶಿಕ್ಷೆ
1992ರಲ್ಲಿ ಪಾಕಿಸ್ತಾನ ಏಕದಿನ ವಿಶ್ವಕಪ್ ಗೆದ್ದಾಗ ಇಮ್ರಾನ್ ನಾಯಕರಾಗಿದ್ದರು. 2018ರಿಂದ 2022ರ ವರೆಗೆ ಪಾಕಿಸ್ತಾನ ಪ್ರಧಾನಿಯಾಗಿದ್ದ ಅವರು, 2023ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಶೇ.85ರಷ್ಟು ಕಣ್ಣಿನ ದೃಷ್ಠಿ
ಸದ್ಯ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಜೈಲಧಿಕಾರಿಗಳ ನಿರ್ಲಕ್ಷ್ಯದಿಂದ ಶೇ.85ರಷ್ಟು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವಿಶ್ವದ ವಿವಿಧ ಕ್ರಿಕೆಟ್ ತಂಡಗಳ ಮಾಜಿ ನಾಯಕರು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!
ವೈದ್ಯಕೀಯ ಆರೈಕೆ ನೀಡಬೇಕೆಂದು ಆಗ್ರಹ
‘ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ ಅವರ ದೃಷ್ಠಿ ಕ್ಷೀಣಿಸುತ್ತಿರುವುದು ಕಳವಳ ಉಂಟು ಮಾಡಿದೆ. ಅವರ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ತಜ್ಞರ ತಂಡದಿಂದ ವೈದ್ಯಕೀಯ ಆರೈಕೆ ನೀಡಬೇಕೆಂದು ಆಗ್ರಹಿಸುತ್ತೇವೆ’ ಎಂದಿದ್ದಾರೆ.
ಈ ಪತ್ರಕ್ಕೆ ಮೈಕೆಲ್ ಅಥರ್ಟನ್, ಅಲಾನ್ ಬಾರ್ಡರ್, ಮೈಕೆಲ್ ಬ್ರಿಯಾರ್ಲಿ, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಸ್ಟೀವ್ ವಾ ಮತ್ತು ಜಾನ್ ರೈಟ್ ಕೂಡಾ ಸಹಿ ಮಾಡಿದ್ದಾರೆ.
ಇದನ್ನೂ ಓದಿ: ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

