MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ

ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ

ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ, ಈ ವಿಶೇಷ ಕಾರು ಉಡುಗೊರೆ ವಿಶ್ವಕಪ್ ಗೆಲುವಿನ ಪರ್ಫಾಮೆನ್ಸ್‌ಗೆ ಅಲ್ಲ. ಇದು ಕಳೆದ ವರ್ಷದ ಪ್ರದರ್ಶನಕ್ಕೆ ಈಗ ಸಿಕ್ಕ ಉಡುಗೊರೆಯಾಗಿದೆ. 

2 Min read
Author : Chethan Kumar
Published : Feb 24 2026, 06:34 PM IST
Share this Photo Gallery
  • FB
  • TW
  • Linkdin
  • Whatsapp
16
ವೈಭವ್‌ಗೆ ಬಂತು ದುಬಾರಿ ಕಾರು
Image Credit : tata motors

ವೈಭವ್‌ಗೆ ಬಂತು ದುಬಾರಿ ಕಾರು

ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಕೌಶಲ್ಯ, ಪ್ರತಿಭೆ ಬಗ್ಗೆ ಚರ್ಚೆ ನಡೆಯುತ್ತಿದೆ. 15ರ ಪೋರನ ಅಬ್ಬರದ ಬ್ಯಾಟಿಂಗ್‌ಗೆ ದಿಗ್ಗಜರು ಮನಸೋತಿದ್ದಾರೆ. 2026ರ ಅಂಡರ್ 19 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ವೈಬವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ಕೊಟ್ಟಿದ್ದರು. ಇದೀಗ ವೈಬವ್ ಸೂರ್ಯವಂಶಿಗೆ ದುಬಾರಿ ಮೌಲ್ಯದ ಕಾರು ಉಡುಗೊರೆಯಾಗಿ ಬಂದಿದೆ.

26
ಕಳೆದ ವರ್ಷದ ಉಡುಗೊರ ಈಗ ಲಭ್ಯ
Image Credit : tata motors

ಕಳೆದ ವರ್ಷದ ಉಡುಗೊರ ಈಗ ಲಭ್ಯ

ವೈಭವ್ ಸೂರ್ಯವಂಶಿ ಅಂಡರ್ 19 ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಗಿಫ್ಟ್ ಇದಲ್ಲ. ಇದು 2025ರಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಗಿಫ್ಟ್, ಆದರೆ ಕಾರು ಉಡುಗೊರೆಯಾಗಿ ಕೈ ಸೇರುವಾಗ ವಿಳಂಬವಾಗಿದೆ ಮಾತ್ರ. ಅಷ್ಟಕ್ಕೂ ವೈಭವ್ ಸೂರ್ಯವಂಶಿ ಈ ಗಿಫ್ಟ್ ಬಂದಿರೋದು 2025ರಲ್ಲಿ ಐಪಿಎಲ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಉಡುಗೊರೆ.

Related Articles

Related image1
10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ ಚಕ್ಕರ್ ಹಾಕಿದ್ದರ ಬಗ್ಗೆ ಪ್ರಿನ್ಸಿಪಾಲ್ ಹೇಳಿದ್ದೇನು? ಆಗ ವಾರ್ನಿಂಗ್, ಈಗ?
Related image2
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!
36
ಐಪಿಎಲ್ ಪ್ರದರ್ಶನಕ್ಕೆ ಟಾಟಾ ಕರ್ವ್ ಕಾರು ಉಡುಗೊರೆ
Image Credit : Getty

ಐಪಿಎಲ್ ಪ್ರದರ್ಶನಕ್ಕೆ ಟಾಟಾ ಕರ್ವ್ ಕಾರು ಉಡುಗೊರೆ

2025ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದರು. ಭರ್ಜರಿ ಸೆಂಚುರಿ, ಗರಿಷ್ಠ ಸ್ಟ್ರೈಕ್ ರೇಟ್ ಸೇರಿದಂತೆ ಹಲವು ದಾಖಲೆ ಬರೆದಿದ್ದರು. ಇದರ ಪರಿಣಾಮ ವೈಭವ್ ಸೂರ್ಯವಂಶಿ ಟಾಟಾ ಮೋಟಾರ್ಸ್ ಕರ್ವ್ ಕಾರು ಉಡುಗೊರೆಯಾಗಿ ಪಡೆದಿದ್ದರು. ಇದೀಗ ಟಾಟಾ ಮೋಟಾರ್ಸ್ ವೈಭವ್‌ಗೆ ಕಾರು ನೀಡಿದೆ.

46
ವೈಭವ್ ಸೂರ್ಯವಂಶಿಗಿಲ್ಲ ಲೈಸೆನ್ಸ್
Image Credit : our own

ವೈಭವ್ ಸೂರ್ಯವಂಶಿಗಿಲ್ಲ ಲೈಸೆನ್ಸ್

ವೈಭವ್ ಸೂರ್ಯವಂಶಿ ಟಾಟಾ ಕರ್ವ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಇದರ ಟಾಪ್ ಮಾಡೆಲ್ ಬೆಲೆ 22 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆದರೆ ವೈಭವ್ ಸೂರ್ಯವಂಶಿ ವಯಸ್ಸು ಕೇವಲ 15. ಭಾರತದಲ್ಲಿ ಕಾರು ಸೇರಿದಂತೆ ಮೋಟಾರು ವಾಹನ ಲೈಸೆನ್ಸ್ ಪಡೆಯಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಹೀಗಾಗಿ ಕಾರು ಸಿಕ್ಕರೂ ವೈಭವ್‌ಗೆ ಡ್ರೈವ್ ಮಾಡುವಂತಿಲ್ಲ.

56
ಸ್ಟ್ರೈಕರ್ ಆಫ್ ದಿ ಟೂರ್ನಿ
Image Credit : RR Twitter

ಸ್ಟ್ರೈಕರ್ ಆಫ್ ದಿ ಟೂರ್ನಿ

2025ರ ಐಪಿಎಲ್ ಟೂರ್ನಿಯಲ್ಲಿ ವೈಭವ್ 35 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬೆರೆದಿದ್ದರು. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತೀ ಕಿರಿಯ, ಭಾರತೀಯನ ಅತೀ ವೇಗದ ಶತಕ ಸೇರಿದಂತೆ ಹಲವು ದಾಖಲೆ ನಿರ್ಮಾಣವಾಗಿತ್ತು. ಇದೇ ಟೂರ್ನಿಯಲ್ಲಿ ವೈಭವ್ 206.56 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಪರಿಣಾಮ ಸ್ಟ್ರೈಕರ್ ಆಫ್ ದಿ ಟೂರ್ನಿ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯಲ್ಲಿ ಕರ್ವ್ ಕಾರು ಪಡೆದಿದ್ದಾರೆ.

66
ಬಿಳಿ ಬಣ್ಣದ ಕಾರು
Image Credit : Google

ಬಿಳಿ ಬಣ್ಣದ ಕಾರು

ಬಿಳಿ ಬಣ್ಣದ ಕರ್ವ್ ಕಾರನ್ನು ವೈಭವ್ ಉಡುಗೊರೆಯಾಗಿ ಪಡೆದಿದ್ದಾರೆ. ವೈಭವ್ ಸೂರ್ಯವಂಶಿ ಪೋಷಕರು ಸೇರಿದಂತೆ ಆಪ್ತರು ಈ ಸಮಾರಂಭದಲ್ಲಿ ಹಾಜರಿದ್ದರು. ವೈಭವ್ ಸೂರ್ಯವಂಶಿಗೆ ಕಾರು ಉಡುಗೊರೆ ಮಾಹಿತಿ ಸಿಕ್ಕ ಬೆನ್ನಲ್ಲೇ ಹಲವು ಅಭಿಮಾನಿಗಳು ಜಮಾಯಿಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವೈಭವ್ ಸೂರ್ಯವಂಶಿ
ಕಾರುಗಳು
ಟಾಟಾ ಮೋಟಾರ್ಸ್

Latest Videos
Recommended Stories
Recommended image1
ಸಚಿನ್ ತೆಂಡೂಲ್ಕರ್‌ಗೆ ಮಾಡಿದ್ದ ಅನ್ಯಾಯ ಒಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್; 22 ವರ್ಷಗಳ ಬಳಿಕ ರಹಸ್ಯ ಬಹಿರಂಗ!
Recommended image2
ರಣಜಿಯಲ್ಲಿ ಅಮೋಘ ಪ್ರದರ್ಶನ, ಕನ್ನಡಿಗರಿಗೆ ಕದ ತೆರೆಯುತ್ತಾ ಟೀಮ್‌ ಇಂಡಿಯಾ?
Recommended image3
'ಇದು ಸೋಲಲ್ಲ, ಭಾರತಕ್ಕೆ ಆದ ಅವಮಾನ': ಟೀಮ್ ಇಂಡಿಯಾ ಹೀನಾಯ ಸೋಲಿಗೆ ಪಾಕ್ ಮಾಜಿ ಆಟಗಾರರ ಕುಚೋದ್ಯ!
Related Stories
Recommended image1
10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ ಚಕ್ಕರ್ ಹಾಕಿದ್ದರ ಬಗ್ಗೆ ಪ್ರಿನ್ಸಿಪಾಲ್ ಹೇಳಿದ್ದೇನು? ಆಗ ವಾರ್ನಿಂಗ್, ಈಗ?
Recommended image2
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved