ಐಸಿಸಿ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ, ಫೆ.15ಕ್ಕೆ ಭಾರತ-ಪಾಕ್ ಪಂದ್ಯ
ಐಸಿಸಿ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ, ಫೆ.15ಕ್ಕೆ ಭಾರತ-ಪಾಕ್ ಪಂದ್ಯ, ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾ.8ರಂದು ಫೈನಲ್ ಪಂದ್ಯ ನಡೆಯಲಿದೆ.

ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2026ರ ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಶ್ರೀಲಂಕಾ ಹಾಗೂ ಭಾರತ ಆತಿಥ್ಯವಹಿಸಿರುವ ಈ ಟೂರ್ನಿ ಫೆಬ್ರವರಿ 7 ರಿಂದ ಆರಂಭಗೊಳ್ಳಲಿದೆ. ಫೆಬ್ರವರಿ 15 ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಇನ್ನು ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.
ಕೊಲೊಂಬೋದಲ್ಲಿ ಭಾರತ ಪಾಕ್ ಪಂದ್ಯ
ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಸಮಸ್ಯೆಯಿಂದ ಇಂಡೋ -ಪಾಕ್ ಪಂದ್ಯ ಕೊಲೊಂಬೊದಲ್ಲಿ ನಡೆಯಲಿದೆ. ಫೆಬ್ರವರಿ 15 ರಂದು ರೋಚಕ ಪಂದ್ಯ ನಡೆಯಲಿದೆ. ಸಂಜೆ 7 ಗಂಟೆ ಈ ಪಂದ್ಯ ನಡೆಯಲಿದೆ. ಶ್ರೀಲಂಕಾ ಹಾಗೂ ಭಾರತದಲ್ಲಿ ಪಂದ್ಯಗಳು ನಡೆಯಲಿದೆ. ಬದ್ಧವೈರಿಗಳ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
ಭಾರತದ ಐದು ಕ್ರೀಡಾಂಗಣದಲ್ಲಿ ಪಂದ್ಯ
ಭಾರತದ ಐದು ಹಾಗೂ ಶ್ರೀಲಂಕಾದ 3 ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿದೆ. ಮಾ.8ರ ಫೈನಲ್ ಪಂದ್ಯ ಅಹಮ್ಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಸೆಮಿಫೈನಲ್ ಪಂದ್ಯ ಕೋಲ್ಕತಾ ಹಾಗೂ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.
ಫೆಬ್ರವರಿ 7ಕ್ಕೆ ಭಾರತಕ್ಕೆ ಮೊದಲ ಪಂದ್ಯ
ಫೆಬ್ರವರಿ 7 ರಿಂದ 20 ವರೆಗೆ ಒಟ್ಟು 40 ಗ್ರೂಪ್ ಹಂತದ ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ ಹೋರಾಟ ಮಾಡಲಿದೆ. ಈ ಪಂದ್ಯ ಕೊಲಂಬೊಬದಲ್ಲಿ ನಡೆಯಲಿದೆ. ಇದೇ ದಿನ ಮುಂಬೈನಲ್ಲಿ ಭಾರತ ಹಾಗೂ ಯುಎಸ್‌ಎ ಹೋರಾಟ ನಡೆಸಲಿದೆ. ಪಾಕಿಸ್ತಾನ ವಿರುದ್ದ ಪಂದ್ಯಕ್ಕೂ ಮೊದಲು ಭಾರತ ಯುಎಸ್‌ಎ ಹಾಗೂ ಫೆಬ್ರವರಿ 12ರಂದು ನಮೀಬಿಯಾ ವಿರುದ್ದ ಹೋರಾಟ ನಡೆಸಲಿದೆ.
ಫೆಬ್ರವರಿ 7ಕ್ಕೆ ಭಾರತಕ್ಕೆ ಮೊದಲ ಪಂದ್ಯ
ಟಿ20 ಚಾಂಪಿಯನ್ ಭಾರತ
ಫೆ.18 ರಂದು ಭಾರತ ಹಾಗೂ ನೆದರ್ಲೆಂಡ್ ಹೋರಾಟ ಮಾಡಲಿದೆ. ಈ ಪಂದ್ಯ ಅಹಮ್ಮದಾಬಾದ್‌ನಲ್ಲಿ ನಡೆಯಲಿದೆ. ಭಾರತದ ಬಹುತೇಕ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ನಡೆಯಲಿದೆ. 2024ರಲ್ಲಿ ಭಾರತ ಟಿ20 ಚಾಂಪಿಯನ್ ಆಗಿದೆ. ಇದೀಗ ಸತತ 2ನೇ ಬಾರಿಗೆ ಟ್ರೋಫಿ ಗೆಲ್ಲುವ ವಿಶ್ವಾಸ ಟೀಂ ಇಂಡಿಯಾಗಿದೆ.
ಟಿ20 ಚಾಂಪಿಯನ್ ಭಾರತ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

