ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಡೇಟ್ ಮಾಡ್ತಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪ್ರೂಫ್ ಸಿಕ್ಕಿದೆ. ಏರ್ ಪೋರ್ಟ್ ನಲ್ಲಿ ಹಾರ್ದಿಕ್ ಪಾಂಡ್ಯ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ಏನಂತಿದ್ದಾರೆ ಗೊತ್ತಾ? 

ನತಾಶಾ ಸ್ಟಾಂಕೋವಿಕ್ (Natasha Stankovic) ರಿಂದ ದೂರವಾದ್ಮೇಲೆ ಭಾರತೀಯ ಕ್ರಿಕೆಟಿರ್ ಹಾರ್ದಿಕ್ ಪಾಂಡ್ಯ (Hardik Pandya) ಹೆಸ್ರು ಅನೇಕ ಹುಡುಗಿಯರ ಜೊತೆ ಥಳಕು ಹಾಕಿಕೊಂಡಿತ್ತು. ಈಗ ಹಾರ್ದಿಕ್ ಪಾಂಡ್ಯಾ, ಮಹಿಕಾ ಶರ್ಮಾ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಅಲ್ಲಲ್ಲಿ, ಆಗಾಗ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕರ್ವಾ ಚೌತ್ ದಿನ ಹಾರ್ದಿಕ್ ಪಾಂಡ್ಯ ಮತ್ತೆ ಮಹಿಕಾ ಶರ್ಮಾ ಜೊತೆ ಏರ್ಪೋರ್ಟ್ ಗೆ ಬಂದ ವಿಡಿಯೋ ವೈರಲ್ ಆಗಿದೆ. ವಿಶೇಷ ಅಂದ್ರೆ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ, ಮ್ಯಾಜಿಂಗ್ ಡ್ರೆಸ್ ಧರಿಸಿದ್ದು, ಇದು ಎಲ್ಲರ ಕಣ್ಣ, ಕಿವಿ ದೊಡ್ಡದು ಮಾಡಿದೆ. ಇಬ್ಬರ ಮಧ್ಯೆ ಏನೋ ಇದೆ ಅಂತ ಜನರು ಮಾತನಾಡಿಕೊಳ್ತಿದ್ದಾರೆ.

ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ : 

ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ, ದೆಹಲಿ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮಹಿಕಾ ಶರ್ಮಾ ಕಾರಿನಿಂದ ಇಳಿಯೋವರೆಗೂ ಅಲ್ಲಿಯೇ ನಿಂತಿದ್ದ ಹಾರ್ದಿಕ್ ಪಾಂಡ್ಯ, ಮಹಿಕಾ ಶರ್ಮಾ ಕೈ ಹಿಡಿದು ವೆಲ್ ಕಂ ಮಾಡಿದ್ದಾರೆ. ಆ ನಂತ್ರ ಮಹಿಕಾ ಶರ್ಮಾ ಏರ್ಪೋರ್ಟ್ ಒಳಗೆ ಹೋಗಲು ಸಹಾಯ ಮಾಡಿದ ಹಾರ್ದಿಕ್, ಮಹಿಕಾ ಹಿಂದೆಯೇ ಏರ್ ಪೋರ್ಟ್ ಒಳಗೆ ಹೋಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ, ಬ್ಲಾಕ್ ಕಲರ್ ಶರ್ಟ್ ಹಾಗೂ ಪ್ಯಾಂಟ್ ನಲ್ಲಿ ಮಿಂಚಿದ್ದಾರೆ.

WPL ಆಟಗಾರ್ತಿಯರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್; ಆರ್‌ಸಿಬಿ ಯಾರನ್ನೆಲ್ಲಾ ಉಳಿಸಿಕೊಳ್ಳುತ್ತೆ?

ಫ್ಯಾನ್ಸ್ ಗೆ ಇಷ್ಟವಾಗ್ಲಿಲ್ಲ ಜೋಡಿ : 

ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಜೋಡಿಯನ್ನು ಫ್ಯಾನ್ಸ್ ಇಷ್ಟಪಡ್ತಿಲ್ಲ. ಇನ್ನೂ ಟೈಂ ಇದೆ, ಮಹಿಕಾ ಶರ್ಮಾ ಬೇಡ ಅಂತ ಫ್ಯಾನ್ಸ್, ಹಾರ್ದಿಕ್ ಗೆ ಸಲಹೆ ನೀಡಿದ್ದಾರೆ. ನಿಮ್ಮಿಬ್ಬರ ಜೋಡಿ ಚೆನ್ನಾಗಿಲ್ಲ ಎನ್ನುವ ಕಮೆಂಟ್ಸ್ ಬಂದಿದೆ.

ಟೆಸ್ಲಾ ಮಾಡೆಲ್ Y ಕಾರು ಖರೀದಿಸಿದ ರೋಹಿತ್ ಶರ್ಮಾ; ಏನಿದರ ವಿಶೇಷತೆ ಗೊತ್ತಾ?

ಯಾರು ಮಹಿಕಾ ಶರ್ಮಾ ? : 

ಸದ್ಯ ಹಾರ್ದಿಕ್ ಜೊತೆ ಕಾಣಿಸಿಕೊಳ್ತಿರುವ ಮಹಿಕಾ ಶರ್ಮಾ, ಮಾಡೆಲ್ ಮತ್ತು ಆಕ್ಟರ್. ಇನ್ಸ್ಟಾಗ್ರಾಮ್ ನಲ್ಲಿ ಪ್ರಸಿದ್ಧಿಯಾಗಿರುವ ಮಹಿಕಾ ಶರ್ಮಾ, ಫ್ಯಾಷನ್ ಮತ್ತು ಫಿಟ್ನೆಸ್ ಬಗ್ಗೆ ಮಾಹಿತಿ ನೀಡ್ತಿರುತ್ತಾರೆ. ಮಹಿಕಾ ದೆಹಲಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದು, ಅರ್ಥಶಾಸ್ತ್ರ ಮತ್ತು ಹಣಕಾಸು ಅಧ್ಯಯನ ಮಾಡಿದ್ದಾರೆ. ಓದು ಮುಗಿಸಿ ಇಂಟರ್ನ್ಶಿಪ್ ಮಾಡಿದ್ದ ಮಹಿಕಾ ನಂತ್ರ ಮಾಡೆಲಿಂಗ್ ಮತ್ತ ಆಕ್ಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಫ್ರಿಲಾನ್ಸರ್ ಆಗಿ ಕೆಲ್ಸ ಶುರು ಮಾಡಿದ್ದ ಮಹಿಕಾ ಶರ್ಮಾ, ರ್ಯಾಪರ್ ರಾಗ ಮ್ಯೂಜಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ನಂತ್ರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೆ ಜೀವ ತುಂಬಿದ್ದರು. ಇಂಟು ದಿ ಡಸ್ಕ್ ಮತ್ತು ಓಮಂಗ್ ಕುಮಾರ್ ಅವರ ಪಿಎಂ ನರೇಂದ್ರ ಮೋದಿ (2019) ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ಜಾಹಿರಾತುಗಳಲ್ಲಿ ಮಹಿಕಾ ಕಾಣಿಸಿಕೊಂಡಿದ್ದಾರೆ. ತರುಣ್ ತಹಿಲಿಯಾನಿ, ಮನೀಶ್ ಮಲ್ಹೋತ್ರಾ, ಅನಿತಾ ಡೊಂಗ್ರೆ, ರಿತು ಕುಮಾರ್ ಮತ್ತು ಅಮಿತ್ ಅಗರ್ವಾಲ್ ಸೇರಿದಂತೆ ಅನೇಕ ಪ್ರಸಿದ್ಧ ಫ್ಯಾಷನ್ ವಿನ್ಯಾಸಕರ ಪರ ಮಹಿಕಾ ರ್ಯಾಂಪ್ ವಾಕ್ ಮಾಡಿದ್ದಾರೆ. 24 ವರ್ಷದ ಮಹಿಕಾ ಶರ್ಮಾ 2024 ರಲ್ಲಿ ವರ್ಷದ ಮಾಡೆಲ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿದ್ದರು.

ಹಾರ್ದಿಕ್ ಪಾಂಡ್ಯ ವಿಚ್ಛೇದನ ಪಡೆಯುತ್ತಿದ್ದಂತೆ ಅವರು ಜಾಸ್ಮಿನ್ ವಾಲಿಯಾ ಜೊತೆ ಡೇಟ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಇತ್ತು. ಈಗ ಮಹಿಕಾ ಶರ್ಮಾ ಹೆಸರು ಕೇಳಿ ಬರ್ತಿದೆ. ಕರ್ವಾಚೌತ್ ಸಂದರ್ಭದಲ್ಲಿ ಮಹಿಕಾ ಮತ್ತು ಹಾರ್ದಿಕ್ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಜನರು ಹೊಸ ಜೋಡಿ ಒಟ್ಟಿಗೆ ವ್ರತ ಮಾಡ್ತಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.

View post on Instagram