- Home
- Sports
- Cricket
- 2025ರಲ್ಲಿ ಅತಿಹೆಚ್ಚು ಹಣ ಗಳಿಸಿದ ಟಾಪ್ 7 ಕ್ರಿಕೆಟಿಗರಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ವಿದೇಶಿ ಆಟಗಾರ
2025ರಲ್ಲಿ ಅತಿಹೆಚ್ಚು ಹಣ ಗಳಿಸಿದ ಟಾಪ್ 7 ಕ್ರಿಕೆಟಿಗರಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ವಿದೇಶಿ ಆಟಗಾರ
ಬೆಂಗಳೂರು: 2025ರ ಕೊನೆಯ ಹಂತದಲ್ಲಿ ನಾವಿದ್ದೇವೆ. ಕ್ರಿಕೆಟ್‌ನಲ್ಲಿ ನಮಗೆ ಈ ವರ್ಷ ಹಲವು ಅವಿಸ್ಮರಣೀಯ ಕ್ಷಣಗಳು ಸಿಕ್ಕಿವೆ. ಬನ್ನಿ ನಾವಿಂದು 2025ರಲ್ಲಿ ಅತಿಹೆಚ್ಚು ಹಣ ಸಂಪಾದನೆ ಮಾಡಿದ ಟಾಪ್ 7 ಆಟಗಾರರು ಯಾರು ನೋಡೋಣ ಬನ್ನಿ.

7. ಪ್ಯಾಟ್ ಕಮಿನ್ಸ್:
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ವರ್ಷ 60-75 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಐಪಿಎಲ್ ಸಂಬಳ(18 ಕೋಟಿ ರುಪಾಯಿ), ಕ್ರಿಕೆಟ್ ಆಸ್ಟ್ರೇಲಿಯಾ ಸಂಬಳ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಸೇರಿವೆ.
6. ಶ್ರೇಯಸ್ ಅಯ್ಯರ್:
ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 2025ರಲ್ಲಿ 70ರಿಂದ 85 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. ಐಪಿಎಲ್ ಸಂಬಳ, ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಹಾಗೂ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಅಯ್ಯರ್ ಇಷ್ಟೊಂದು ಹಣ ಸಂಪಾದಿಸಿದ್ದಾರೆ.
5. ಹಾರ್ದಿಕ್ ಪಾಂಡ್ಯ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಈ ವರ್ಷ 80-100 ಕೋಟಿ ರುಪಾಯಿ ಸಂಪಾದಿಸಿರಬಹುದು ಎಂದು ಅಂದಾಜಿಸಲಾಗಿದೆ. ಐಪಿಎಲ್ ಕಾಂಟ್ರ್ಯಾಕ್ಟ್, ಸ್ಪಾನ್ಸರ್‌ಶಿಪ್, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಪಾಂಡ್ಯ ಕೋಟಿ ಕೋಟಿ ರುಪಾಯಿ ಸಂಪಾದಿಸಿದ್ದಾರೆ.
4. ಜಸ್ಪ್ರೀತ್ ಬುಮ್ರಾ
ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಈ ವರ್ಷ 90 ರಿಂದ 110 ಕೋಟಿ ರುಪಾಯಿ ಸಂಪಾದಿಸಿರಬಹುದು ಎಂದು ಅಂದಾಜಿಸಲಾಗಿದೆ. ಬುಮ್ರಾ ಬಿಸಿಸಿಐ ಎ+ ಕಾಂಟ್ರ್ಯಾಕ್ಟ್ ಹೊಂದ್ದಿದ್ದು, ಮುಂಬೈ ಇಂಡಿಯನ್ಸ್ ನಿಂದಲೂ ಕೋಟಿ ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.
3. ರಿಷಭ್ ಪಂತ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ವರ್ಷ 110ರಿಂದ 120 ಕೋಟಿ ರುಪಾಯಿ ಸಂಪಾದಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ 27 ಕೋಟಿ ರುಪಾಯಿ ಪಡೆದ ಪಂತ್, ಪ್ರಖ್ಯಾತ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮಾಡುವ ಮೂಲಕ ಕೋಟಿಗಟ್ಟಲೇ ಹಣ ಸಂಪಾದಿಸಿದ್ದಾರೆ.
2. ರೋಹಿತ್ ಶರ್ಮಾ:
ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಈ ವರ್ಷ 150ರಿಂದ 180 ಕೋಟಿ ರುಪಾಯಿ ಸಂಪಾದಿಸಿದ್ದಾರೆ. ಮುಂಬೈ ಇಂಡಿಯನ್ಸ್ 23 ಕೋಟಿ ಹಾಗೂ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ 7 ಕೋಟಿ ಗಳಿಸಿರುವ ಹಿಟ್‌ಮ್ಯಾನ್, ಪ್ರೀಮಿಯಮ್ ಎಡೋರ್ಸ್‌ಮೆಂಟ್‌ನಿಂದ ಕೋಟಿಗಟ್ಟಲ್ಲೇ ಸಂಪಾದಿಸಿದ್ದಾರೆ.
1. ವಿರಾಟ್ ಕೊಹ್ಲಿ:
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಈ ವರ್ಷ 250ರಿಂದ 300 ಕೋಟಿ ರುಪಾಯಿ ಸಂಪಾದಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್‌ಗೆ ವಿದಾಯ ಘೋಷಿಸಿದ್ದರೂ ಕೊಹ್ಲಿ ಗಳಿಕೆ ಕಮ್ಮಿಯಾಗಿಲ್ಲ. ಕೊಹ್ಲಿ 30ಕ್ಕೂ ಹೆಚ್ಚು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮಾಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

