MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Sports
  • Cricket
  • ಪ್ಯಾಂಟ್ ಬಿಚ್ಚಿ ಕೊಡ್ತಿದ್ದ; ವೈಭವ್ ಸೂರ್ಯವಂಶಿ ಬಗ್ಗೆ ರವಿಶಾಸ್ತ್ರಿ ಹೇಳಿಕೆ ವೈರಲ್

ಪ್ಯಾಂಟ್ ಬಿಚ್ಚಿ ಕೊಡ್ತಿದ್ದ; ವೈಭವ್ ಸೂರ್ಯವಂಶಿ ಬಗ್ಗೆ ರವಿಶಾಸ್ತ್ರಿ ಹೇಳಿಕೆ ವೈರಲ್

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಆಗ್ರಹಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿಯೇ ವೈಭವ್ ಆಡಬೇಕಿತ್ತು, ಒತ್ತಡವಿಲ್ಲದ ಯುವ ಆಟಗಾರನನ್ನು ಬೆಂಚ್ ಮೇಲೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

2 Min read
Author : Mahmad Rafik
Published : Jul 02 2026, 04:05 PM IST
Share this Photo Gallery
  • FB
  • TW
  • Linkdin
  • Whatsapp
17
 15 ವರ್ಷದ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ
Image Credit : stockPhoto

15 ವರ್ಷದ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ

ಟೀಂ ಇಂಡಿಯಾದ 15 ವರ್ಷದ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಐರ್ಲೆಂಡ್ ಪ್ರವಾಸದ ವೇಳೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕಿತ್ತು ಎಂದು ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರವಿಶಾಸ್ತ್ರಿ ಅವರು ಭಾರತ vs ಇಂಗ್ಲೆಂಡ್ ಟಿ20 ಸರಣಿಯ ವೀಕ್ಷಕ ವಿವರಣೆಗಾರರಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
0-2 ಅಂತರದಲ್ಲಿ ಸೋಲು
Image Credit : Asianet News

0-2 ಅಂತರದಲ್ಲಿ ಸೋಲು

ನ್ಯಾಷನಲ್ ಟೀಂ ಜೊತೆ ಐರ್ಲೆಂಡ್‌ಗೆ ತೆರಳಿರೋದು ವೈಭವ್ ಸೂರ್ಯವಂಶಿಯವರ ಮೊದಲ ವಿದೇಶ ಪ್ರವಾಸವಾಗಿತ್ತು. ಮೊದಲ ಮ್ಯಾಚ್‌ನಲ್ಲಿಯೇ ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಆಟ ಕಣ್ತುಂಬಿಕೊಳ್ಳಲು ಇಡೀ ಭಾರತ ಕಾದಿತ್ತು. ಆದ್ರೆ ಸೂರ್ಯಾಂಶ್ ಶೆಡ್ಜ್ ಮತ್ತು ಪ್ರಿನ್ಸ್ ಯಾದವ್ ತಮ್ಮ T20I ಚೊಚ್ಚಲ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ರೆ, ವೈಭವ್ ಬೆಂಚ್ ಕಾಯುವಂತಾಗಿತ್ತು. ಅಂತಿಮವಾಗಿ ಟೀಂ ಇಂಡಿಯಾ 0-2 ಅಂತರದಲ್ಲಿ ಸೋತಿತು.

Related Articles

Related image1
ಮತ್ತೆ ವೈಭವ್ ಸೂರ್ಯವಂಶಿ ಕಡೆಗಣನೆ; ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆ ಕೊಟ್ಟ ಸನ್ನಿ!
Related image2
'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು': ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?
37
ರವಿಶಾಸ್ತ್ರಿ ಅಭಿಪ್ರಾಯ
Image Credit : Asianet News

ರವಿಶಾಸ್ತ್ರಿ ಅಭಿಪ್ರಾಯ

ಈ ವೇಳೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ ಜೊತೆ ರವಿ ಶಾಸ್ತ್ರಿ ಅವರು, ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕಿತ್ತು. ಆದಷ್ಟು ಬೇಗ ಟೀಂ ಇಂಡಿಯಾ ಯುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ವೈಭವ್ ಆಟದ ಕುರಿತು ತಮ್ಮ ಅಭಿಪ್ರಾಯವನ್ನು ರವಿಶಾಸ್ತ್ರಿ ವ್ಯಕ್ತಪಡಿಸಿದರು.

47
 ಪ್ಯಾಂಟ್ ತೆಗೆದು ಕೈಯಲ್ಲಿ ಕೊಡುತ್ತಿದ್ದರು
Image Credit : Asianet News

ಪ್ಯಾಂಟ್ ತೆಗೆದು ಕೈಯಲ್ಲಿ ಕೊಡುತ್ತಿದ್ದರು

ಇಂಗ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ ಆಡುತ್ತಾರಾ ಎಂದು ರವಿಶಾಸ್ತ್ರಿ ಅವರನ್ನು ನಿರೂಪಕ ಪ್ರಶ್ನೆ ಮಾಡುತ್ತಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್‌ನಲ್ಲಿಯೇ ಆಟಬೇಕಿತ್ತು. ಐರ್ಲೆಂಡ್ ಮೈದಾನ ಚಿಕ್ಕದಾಗಿರುವ ಕಾರಣ, ವೈಭವ್ ಚೆಂಡುಗಳನ್ನು ಸ್ಟೇಡಿಯಂನಿಂದ ಹೊರಗೆ ಕಳುಹಿಸುತ್ತಿದ್ದರು. ಅಲ್ಲಿಯೇ ತಮ್ಮ ಪ್ಯಾಂಟ್ ತೆಗೆದು ಕೈಯಲ್ಲಿ ಕೊಡುತ್ತಿದ್ದರು ಎಂದು ಹೇಳಿದರು.

57
ಬೆಂಚ್ ಮೇಲೆ ಯಾಕೆ?
Image Credit : BCCI

ಬೆಂಚ್ ಮೇಲೆ ಯಾಕೆ?

ಆದಷ್ಟು ಬೇಗ ವೈಭವ್ ಅವರನ್ನು ಟೀಂ ಇಂಡಿಯಾ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದ ರವಿಶಾಸ್ತ್ರಿ, ಐಪಿಎಲ್‌ನಲ್ಲಿ ಯಾವ ವೇಗದ ಬೌಲರ್‌ನ್ನು ವೈಭವ್ ಸೂರ್ಯವಂಶಿ ಬಿಟ್ಟಿಲ್ಲ. ಯಾಕೆ ಅವರನ್ನು ಬೆಂಚ್ ಮೇಲೆ ಕೂರಿಸುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ ಎಂದರು. ಹಾಗೆಯೇ ಯಾಕೆ ವೈಭವ್ ಸೂರ್ಯವಂಶಿಯನ್ನು ಆಡಿಸಬೇಕೆಂದು ಸಹ ರವಿಶಾಸ್ತ್ರಿ ಹೇಳಿದರು.

67
ಯಾಕೆ ಆಡಿಸಬೇಕು?
Image Credit : Getty

ಯಾಕೆ ಆಡಿಸಬೇಕು?

ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಒತ್ತಡಗಳಿಲ್ಲ. ಯುವ ಆಟಗಾರನಾಗಿರುವ ವೈಭವ್‌ಗೆ ಕೇವಲ 15 ವರ್ಷ, ಅವರಿಗೆ ಯಾವುದೇ ಭಯವಿಲ್ಲ. ಆರಂಭದ 2-3 ಓವರ್‌ಗಳಿಗೆ ಹೋದರೂ ತಂಡದಲ್ಲಿ ಸ್ಥಾನ ಸಿಗುತ್ತದೆ. ಅದಕ್ಕಾಗಿಯೇ ವೈಭವ್ ಸೂರ್ಯವಂಶಿ ಅವರನ್ನು ಆಟವಾಡಿಸಬೇಕುನ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

77
ಶೀಘ್ರದಲ್ಲಿಯೇ ಚೊಚ್ಚಲ ಪ್ರವೇಶ ಸಾಧ್ಯತೆ
Image Credit : Vaibhav Suryavanshi Instagram

ಶೀಘ್ರದಲ್ಲಿಯೇ ಚೊಚ್ಚಲ ಪ್ರವೇಶ ಸಾಧ್ಯತೆ

ಇದೇ ವೇಳೆ ನಿರೂಪಕ, ಪ್ಯಾಂಟ್‌ ತೆಗೆದು ಕೈಯಲ್ಲಿ ಕೊಡೋದು ಅಂದ್ರೆ ಏನರ್ಥ ಎಂದು ರವಿಶಾಸ್ತ್ರಿ ಅವರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಯಾರನ್ನಾದರೂ ಸೋಲಿಸೋದು ಅಥವಾ ಅವರ ಮೇಲೆ ಪ್ರಾಬಲ್ಯ ಸಾಧಿಸುವುದು ಎಂದರ್ಥ ಎಂದು ಹೇಳಿದರು. ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಮೊದಲ T20I ಗೆ ಸಹ ಪ್ರವೇಶಿಸಲಿಲ್ಲ. ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 1 ರನ್‌ಗೆ ಔಟಾದರು. ಸತತ ವೈಫಲ್ಯಗಳ ನಂತರ, ವೈಭವ್ ಶೀಘ್ರದಲ್ಲೇ ತಮ್ಮ ಚೊಚ್ಚಲ ಪ್ರವೇಶ ಮಾಡಬಹುದೆಂಬ ಭರವಸೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವೈಭವ್ ಸೂರ್ಯವಂಶಿ
ಕ್ರಿಕೆಟ್
ಭಾರತ

Latest Videos
Recommended Stories
Recommended image1
14 ವರ್ಷ ಬಳಿಕ ದುಲೀಪ್‌ ಟ್ರೋಫಿ ಫೈನಲ್‌ ತಲುಪಿದ ಪೂರ್ವ ವಲಯ; ಶಮಿ, ಮುಕೇಶ್ ಮಾರಕ ದಾಳಿ!
Recommended image2
4 ಟೆಸ್ಟ್‌ಗಳಲ್ಲೇ 36 ವಿಕೆಟ್‌, ವಿವ್ ರಿಚರ್ಡ್ಸ್‌ಗೇ ಸಿಂಹಸ್ವಪ್ನವಾಗಿದ್ದ ಈ ಬೌಲರ್! ಕುಂಬ್ಳೆ ಬಾರದೇ ಇದ್ದಿದ್ದರೆ...
Recommended image3
4 ವಿಕೆಟ್ ಕಿತ್ತು ಶಮಿ ಕಾಲು ಮುಟ್ಟಿ ನಮಸ್ಕರಿಸಿದ ಮುಕೇಶ್ ಕುಮಾರ್
Related Stories
Recommended image1
ಮತ್ತೆ ವೈಭವ್ ಸೂರ್ಯವಂಶಿ ಕಡೆಗಣನೆ; ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆ ಕೊಟ್ಟ ಸನ್ನಿ!
Recommended image2
'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು': ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved