MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಈ ಯುವ ಕ್ರಿಕೆಟಿಗನ ಸಾಧನೆಗೆ ಆರೋಗ್ಯ ಸಮಸ್ಯೆ ಅಡ್ಡ ಬರಲಿಲ್ಲ!

ಈ ಯುವ ಕ್ರಿಕೆಟಿಗನ ಸಾಧನೆಗೆ ಆರೋಗ್ಯ ಸಮಸ್ಯೆ ಅಡ್ಡ ಬರಲಿಲ್ಲ!

ಭಾರತ ತಂಡದ  (Team India) ಯುವ ಆಟಗಾರ ವಾಷಿಂಗ್ಟನ್ ಸುಂದರ್ (Washington Sundar) ಅಕ್ಟೋಬರ್ 5 ರಂದು ತಮ್ಮ 22 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಯುವ ಆಟಗಾರ ಅತಿ ಕಡಿಮೆ ಸಮಯದಲ್ಲಿ ಭಾರತೀಯ ತಂಡದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡರು. ಆದಾಗ್ಯೂ, ಬೆರಳಿನ ಗಾಯದಿಂದಾಗಿ, ಅವರು   ಎರಡನೇ ಹಂತ IPL 2021 ಮತ್ತು T20 ವಿಶ್ವಕಪ್ ಆಡಲು ಸಾಧ್ಯವಾಗುತ್ತಿಲಿಲ್ಲ. ಆದರೆ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಗಬ್ಬಾ ಟೆಸ್ಟ್‌ನಲ್ಲಿ ಅವರು ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಈ ಆಟಗಾರ ಗಂಬೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಇವರ ಸಾಧನೆಗೆ ಅಡ್ಡಿಯಾಗಿಲ್ಲ 

2 Min read
Suvarna News | Asianet News
Published : Oct 07 2021, 07:28 PM IST
Share this Photo Gallery
  • FB
  • TW
  • Linkdin
  • Whatsapp
19

ವಾಷಿಂಗ್ಟನ್ ಸುಂದರ್ 5 ಅಕ್ಟೋಬರ್ 1999 ರಂದು ತಮಿಳುನಾಡಿನಲ್ಲಿ (Tamil Nadu) ಜನಿಸಿದರು. ಅವರು ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಸ್ಪಿನ್ನರ್ (Spinner). ಅವರು ಕ್ರಿಕೆಟ್(Cricket)ನಲ್ಲಿ ತಮ್ಮ ಎರಡೂ ಕೈಗಳನ್ನು ಚೆನ್ನಾಗಿ ಬಳಸುತ್ತಾರೆ.
 
 

29

ವಾಷಿಂಗ್ಟನ್ ಸುಂದರ್   6 ಅಕ್ಟೋಬರ್ 2016 ರಂದು ರಣಜಿ ಟ್ರೋಫಿಯಲ್ಲಿ (Ranaji Trophy) ತಮಿಳುನಾಡು ಪರವಾಗಿ ಪ್ರಥಮ ದರ್ಜೆ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ, 13 ಡಿಸೆಂಬರ್ 2017 ರಂದು, ಅವರು ಶ್ರೀಲಂಕಾ (Srilanka) ವಿರುದ್ಧ ಮೊದಲ ಟಿ 20 ಪಂದ್ಯವನ್ನು ಆಡಿದರು. ಅದೇ ವರ್ಷದಲ್ಲಿ, ಅವರು ಡಿಸೆಂಬರ್ 13 ರಂದು ಶ್ರೀಲಂಕಾ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದರು.
 

39

ಆದಾಗ್ಯೂ, ವಾಷಿಂಗ್ಟನ್‌ನ ಕ್ರಿಕೆಟಿಗನಾಗುವ ಕನಸು ಅಷ್ಟು ಸುಲಭವಾಗಿ ಈಡೇರಲಿಲ್ಲ, ಏಕೆಂದರೆ ಅವರು ಕೇವಲ 4 ವರ್ಷದವರಿದ್ದಾಗ,ಅವರಿಗೆ ಒಂದು ಕಿವಿ ಕೇಳುವುದ್ದಿಲ್ಲ ಎಂದು ತಿಳಿದುಬಂದಿತು. ಅವರು ವರ್ಷಗಳ ಕಾಲ ಚಿಕಿತ್ಸೆ ಪಡೆದರು ಸಹ  ಇಂದಿಗೂ ಅವರು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ.

49

ಸುಂದರ್ ಈ ಕೊರತೆಯನ್ನು ತನ್ನ ಕ್ರಿಕೆಟ್ ದಾರಿಯಲ್ಲಿ ಬರಲು ಬಿಡಲಿಲ್ಲ ಮತ್ತು ಅನೇಕ ಕಷ್ಟಗಳ ನಂತರವೂ ಅವರು ಕ್ರಿಕೆಟ್ ನಲ್ಲಿ ಮುಂದುವರಿಯಲು ನಿರ್ಧರಿಸಿದರು ಮತ್ತು ಭಾರತೀಯ ತಂಡದಲ್ಲಿ ((Indian Cricket Team) ಮತ್ತು ಐಪಿಎಲ್‌ (IPL)ನಲ್ಲಿ ತಮ್ಮ ಪ್ರತಿಬೆಯ ಮೂಲಕ  ಸ್ಥಾನವನ್ನು ಗಳಿಸಿದರು.


 

59

'ಸಹ ಆಟಗಾರರು ಫೀಲ್ಡಿಂಗ್ ಮಾಡುವಾಗ ಅವರೊಂದಿಗೆ ಕೋರ್ಡಿನೇಟ್‌ ಮಾಡುಲು ತೊಂದರೆಯಾಗುತ್ತದೆ ಎಂದು ನನಗೆ ತಿಳಿದಿದೆ, ಆದರೆ ಈ ಕಾರಣದಿಂದಾಗಿ ನನ್ನ ಸಹ ಆಟಗಾರರು ನನಗೆ ಎಂದಿಗೂ ದೂರು ನೀಡಿಲ್ಲ. ನನ್ನ ದೌರ್ಬಲ್ಯದ ಬಗ್ಗೆ ಅವರು ನನಗೆ ಏನನ್ನೂ ಹೇಳುವುದಿಲ್ಲ' ಎಂದು ತನ್ನ ನ್ಯೂನತೆಯ ಬಗ್ಗೆ ಸುಂದರ್ ಹೇಳುತ್ತಾರೆ
 

69

ವಾಷಿಂಗ್ಟನ್ ಸುಂದರ್ ಐಪಿಎಲ್ (IPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಪರ ಆಡುತ್ತಾರೆ, ಆದರೆ ಬೆರಳಿನ ಗಾಯದಿಂದಾಗಿ, ಅವರು ಈ ಬಾರಿಯ ಐಪಿಎಲ್ ನ ಎರಡನೇ ಹಂತದ ಪಂದ್ಯಗಳಲ್ಲಿ ತಂಡದ ಜೊತೆ UAEನಲ್ಲಿ ಇಲ್ಲ.
 

79
washington sundar

washington sundar

ಈ ತಿಂಗಳ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ 20 ವಿಶ್ವಕಪ್‌ಗೆ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಸಿಕ್ಕಿಲ್ಲ. ಅವರ ಸ್ಥಾನದಲ್ಲಿ ಅಕ್ಸರ್ ಪಟೇಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಸುಂದರ್ ಆರೋಗ್ಯವಾಗಿದ್ದಿದ್ದರೆ, ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ತಂಡದಲ್ಲಿ ಅವಕಾಶ ಪಡೆಯುತ್ತಿದ್ದರು.

89

ವಾಷಿಂಗ್ಟನ್ ಸುಂದರ್ ಅವರು 4 ಟೆಸ್ಟ್ ಪಂದ್ಯಗಳಲ್ಲಿ 265 ರನ್ ಮತ್ತು 6 ವಿಕೆಟ್ (Wicket) ಗಳಿಸಿದ್ದಾರೆ. ಇದರೊಂದಿಗೆ, ಅವರು ಒಂದು ಏಕದಿನದಲ್ಲಿ 1 ವಿಕೆಟ್ ಮತ್ತು 20 ಪಂದ್ಯಗಳಲ್ಲಿ 31 ರಲ್ಲಿ 47 ರನ್ ಮತ್ತು 25 ವಿಕೆಟ್ ಪಡೆದಿದ್ದಾರೆ.

99

2017 ರಲ್ಲಿ ಐಪಿಎಲ್ ಕೆರಿಯರ್‌ (Career) ಆರಂಭಿಸಿದ ವಾಷಿಂಗ್ಟನ್ ಸುಂದರ್, ಇದುವರೆಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಅವರು 42 ಐಪಿಎಲ್ ಪಂದ್ಯಗಳಲ್ಲಿ 27 ವಿಕೆಟ್ ಮತ್ತು 217 ರನ್ ಗಳಿಸಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved