Asianet Suvarna News Asianet Suvarna News

ಟೆಸ್ಟ್‌ನಲ್ಲಿ ಆರಂಭಿಕನ ಸ್ಥಾನ ಸಿಕ್ಕರೆ ಅದು ನನ್ನ ಸೌಭಾಗ್ಯ: ಸುಂದರ್‌

ಟೆಸ್ಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗುವ ಅವಕಾಶ ಸಿಕ್ಕಿದರೆ ಆಡಲು ತಾವು ರೆಡಿ ಎನ್ನುವ ಸ್ಪಷ್ಟ ಸಂದೇಶವನ್ನು ಟೀಂ ಇಂಡಿಯಾ ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

I Will Be A Blessing Opening Batting For India In Test Cricket Says Washington Sundar kvn
Author
Chennai, First Published Jan 25, 2021, 2:03 PM IST
  • Facebook
  • Twitter
  • Whatsapp

ಚೆನ್ನೈ(ಜ.25): ಭಾರತ ಕ್ರಿಕೆಟ್‌ ತಂಡದ ಯುವ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟೆಸ್ಟ್‌ ತಂಡದಲ್ಲಿ ಆರಂಭಿಕನ ಸ್ಥಾನ ಸಿಕ್ಕರೆ ಸಂತೋಷದಿಂದ ಆಡುವುದಾಗಿ ಹೇಳಿಕೊಂಡಿದ್ದಾರೆ. 

ಇಲ್ಲಿನ ತಮ್ಮ ನಿವಾಸದಲ್ಲಿ ಪ್ರತಿಷ್ಠಿತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ ಟೆಸ್ಟ್‌ ತಂಡದಲ್ಲಿ ಆರಂಭಿಕನಾಗಿ ಆಡುವ ಅವಕಾಶ ಸಿಕ್ಕರೆ ನನ್ನ ಅದೃಷ್ಟಎಂದು ಭಾವಿಸುತ್ತೇನೆ. ನಮ್ಮ ಪ್ರಧಾನ ಕೋಚ್‌ ರವಿಶಾಸ್ತ್ರಿಯಂತೆ ಸವಾಲನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ. 

ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋಲಲಿದೆ; ಟೀಕಾಕಾರರ ಬಾಯಿ ಮುಚ್ಚಿಸಿದ ಯಂಗಿಸ್ತಾನ್‌..!

21 ವರ್ಷದ ವಾಷಿಂಗ್ಟನ್‌ ಸುಂದರ್‌ ಅಂಡರ್ 19 ಟೂರ್ನಿಯಲ್ಲಿ ಅಗ್ರಶ್ರೇಯಾಂಕಿತ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದ ವಾಷಿಂಗ್ಟನ್ ಸುಂದರ್ ಆ ಬಳಿಕ ಆಫ್‌ಸ್ಪಿನ್‌ ಬೌಲಿಂಗ್‌ನತ್ತ ಹೆಚ್ಚು ಗಮನಹರಿಸಿದ್ದರು. ಬ್ರಿಸ್ಬೇನ್ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಮಹತ್ವದ ಸಂದರ್ಭದಲ್ಲಿ ಸುಂದರ್‌ ತಂಡಕ್ಕೆ ಆಸರೆಯಾಗಿದ್ದರು.

ಗಾಬಾ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 62 ರನ್‌ ಬಾರಿಸಿದ್ದ ಸುಂದರ್, ಎರಡನೇ ಇನಿಂಗ್ಸ್‌ ಒಂದು ಆಕರ್ಷಕ ಸಿಕ್ಸ್ ಸಹಿತ 22 ರನ್‌ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ತಮ್ಮ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದರು. 
 

Follow Us:
Download App:
  • android
  • ios