- Home
- Sports
- Cricket
- ಇಷ್ಟು ಸಖತ್ ಆಗಿ ಕ್ರಿಕೆಟ್ ಆಡ್ತಿದ್ರೂ, ಬೆಂಗಳೂರಿನಲ್ಲಿ ತನಗಿರೋ ಕಾಯಿಲೆ ಬಗ್ಗೆ ಹೇಳಿದ Virat Kohli!
ಇಷ್ಟು ಸಖತ್ ಆಗಿ ಕ್ರಿಕೆಟ್ ಆಡ್ತಿದ್ರೂ, ಬೆಂಗಳೂರಿನಲ್ಲಿ ತನಗಿರೋ ಕಾಯಿಲೆ ಬಗ್ಗೆ ಹೇಳಿದ Virat Kohli!
Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರು ಇಂದು ಕೂಡ ಟಾಪ್ ಲೆವೆಲ್ ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.

20 ವರ್ಷಗಳಿಂದ ಕ್ರಿಕೆಟ್ ಆಟ ಆಡ್ತಿದ್ದಾರೆ
ಬೆಂಗಳೂರಿನಲ್ಲಿ ನಡೆದ RCB ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿತ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರು ತಮಗಿರುವ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. 20 ವರ್ಷಗಳಿಂದ ಕ್ರಿಕೆಟ್ ಲೋಕದಲ್ಲಿ ಟಾಪ್ ಲೆವೆಲ್ ಪ್ರದರ್ಶನ ಕೊಟ್ಟರೂ ಈ ಸಮಸ್ಯೆ ಕಾಡಿತ್ತು ಎಂದು ಅವರು ಹೇಳಿದ್ದಾರೆ.

ಇಂಪೋಸ್ಟರ್ ಸಿಂಡ್ರಮ್ ಇದೆ!
"ಕ್ರಿಕೆಟರ್ ಆಗಿ ನೀವು ಪ್ರಜ್ಞಾವಂತರಾಗಿ ಅಥವಾ ಕೀಳರಿಮೆಯ ಮಧ್ಯದ ಒಂದು ಲೈನ್‌ನಲ್ಲಿ ಓಡಾಡುತ್ತೀರಿ. ನೀವು ಮಾಡಿದ ಕೆಲಸ ನಿಮಗೆ ಸಾಕಾಗೋದಿಲ್ಲ. ಇಂಪೋಸ್ಟರ್ ಸಿಂಡ್ರಮ್ ಯಾವಾಗಲೂ ಇದ್ದೇ ಇರುತ್ತದೆ" ಎಂದು ಅವರು ಹೇಳಿದ್ದಾರೆ.
ನಾನು ಕೆಟ್ಟದಾಗಿ ಆಡಿದ್ರೆ ಅವರು ಏನ್ ಅನ್ಕೋತಾರೆ?
"ಇಂದು ಕೂಡ, ನಾನು ನೆಟ್‌ಗೆ ಹೋದಾಗ ಹೊಸಬರು ಕ್ರಿಕೆಟ್ ನೋಡುತ್ತಿರುತ್ತಾರೆ ಎಂದು ಯೋಚನೆ ಮಾಡುತ್ತೇನೆ. ನಾನು ಕೆಟ್ಟದಾಗಿ ಆಡಿದರೆ, ಇಪ್ಪತ್ತು ವರ್ಷಗಳಿಂದ ಆಟ ಆಡುತ್ತಿರುವ ಆಟಗಾರ ಇವರೇನಾ ಎಂದುಕೊಳ್ತಾರೆ ಎಂದು ನಾನು ಯೋಚನೆ ಮಾಡ್ತೀನಿ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2020-2022 ರಲ್ಲಿ ಕಷ್ಟ ಆಗಿತ್ತು
ಮಾಜಿ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಮಾನಸಿಕವಾಗಿ ಗಟ್ಟಿಯಾಗಲು ತುಂಬ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕ್ಯಾಪ್ಟನ್ ಆಗಿ ಇಂಡಿಯಾ ಟೀಂ ನಡೆಸುವಾಗ ಮಾನಸಿಕವಾಗಿ ನಾನು ಕುಗ್ಗಿಹೋಗಿದ್ದೆ, ಅದರಲ್ಲಿಯೂ 2020-2022 ರಲ್ಲಿ ಕಷ್ಟ ಆಗಿತ್ತು ಎಂದು ಅವರು ಹೇಳಿದ್ದಾರೆ.
ವರ್ಕ್ ಲೋಡ್ ತಗೊಬೇಡಿ!
"ಹೈಯೆಸ್ಟ್ ಲೆವೆಲ್‌ನಲ್ಲಿ ರಾಹುಲ್ ಅವರು ಕೂಡ ಇದನ್ನು ಅರ್ಥ ಮಾಡಿಕೊಂಡಿದ್ದರು. ನಾಲ್ಕು ವರ್ಷ ವಿಕ್ರಮ್ ಕೂಡ ನಿಭಾಯಿಸಿದ್ದರು. ನಾನು ಮಾನಸಿಕವಾಗಿ ಹೇಗೆ ಆಗಿದ್ದೇನೆ ಎಂದು ಅವರು ಅರ್ಥ ಮಾಡಿಕೊಂಡಿದ್ದರು, ಮಾನಸಿಕವಾಗಿ ನನ್ನನ್ನು ಆರೈಕೆ ಮಾಡಿದರು. ನನ್ನ ಕ್ರಿಕೆಟ್‌ನ್ನು ನಾನು ಎಂಜಾಯ್ ಮಾಡೋ ಹಾಗೆ ಅವರು ಮಾಡಿದರು. ಕ್ಯಾಪ್ಟನ್‌ಗಳು ಯಾವಾಗಲೂ ಟೀಂ ಬಗ್ಗೆ ಯೋಚನೆ ಮಾಡುತ್ತಾರೆಯೇ ವಿನಃ ತಮ್ಮ ಬಗ್ಗೆ ಯೋಚಿಸೋದಿಲ್ಲ. ಕಳೆದ ಒಂಭತ್ತು ವರ್ಷಗಳಲ್ಲಿ ನೀನು ಹೇಗಿದ್ದೀಯಾ ಎಂದು ಯಾರೂ ಕೇಳಿಲ್ಲ. ಹೊಸಬರಿಗೂ ಕೂಡ ಕೆಲಸದ ಒತ್ತಡದ ಬಗ್ಗೆ ಅಷ್ಟು ಯೋಚನೆ ಮಾಡಿ, ಲಿಮಿಟ್ ಸತ್ಯ ಅರ್ಥ ಮಾಡಿಕೊಳ್ಳಿ" ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

