2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?
ಆಂಟೇರಿಯೊ(ಕೆನಡಾ): 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳುತ್ತಿದ್ದು ಇದೀಗ 13ನೇ ತಂಡವಾಗಿ ಕೆನಡಾ ತಂಡವು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕೆನಡಾ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ.
ಈ ಮೂಲಕ ಒಟ್ಟು 13 ತಂಡಗಳು ಟೂರ್ನಿಗೆ ಪ್ರವೇಶ ಪಡೆದಂತಾಗಿದ್ದು, ಇನ್ನು 7 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್‌ಗೆ ಕಾಲಿಡಲಿವೆ.
ಕಳೆದ ವರ್ಷವೂ ಟಿ20 ವಿಶ್ವಕಪ್ ಆಡಿದ್ದ ಕೆನಡಾ ಈ ಬಾರಿ ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಸತತ 5 ಗೆಲುವು ಸಾಧಿಸಿತು. ಕೊನೆ ಪಂದ್ಯದಲ್ಲಿ ಬಹಾಮಾಸ್ ವಿರುದ್ಧ ಜಯಗಳಿಸಿ ಟೂರ್ನಿ ಪ್ರವೇಶಿಸಿದೆ.
ಈಗಾಗಲೇ ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ದ.ಆಫ್ರಿಕಾ, ಅಮೆರಿಕ, ವೆಸ್ಟ್‌ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ. ಉಳಿದ 7 ತಂಡಗಳು ವಿವಿಧ ಖಂಡಗಳ ಅರ್ಹತಾ ಸುತ್ತಿನಲ್ಲಿ ಗೆದ್ದು ಟೂರ್ನಿಗೆ ಪ್ರವೇಶಿಸಲಿವೆ.
2024ರಲ್ಲಿ ನಡೆದ ಕಳೆದ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.