- Home
- Sports
- Cricket
- ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ ಪ್ರಕಟ; ಬಿಸಿಸಿಐ ನಂ.1, ಲಂಕಾ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ ಪ್ರಕಟ; ಬಿಸಿಸಿಐ ನಂ.1, ಲಂಕಾ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ಬೆಂಗಳೂರು: ಕ್ರಿಕೆಟ್ ಆಡುವ ಪ್ರತಿಯೊಂದು ದೇಶವು ತನ್ನದೇ ಆದ ಕ್ರಿಕೆಟ್ ಬೋರ್ಡ್ ಹೊಂದಿದೆ. ಈ ಪೈಕಿ ಭಾರತದ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿದೆ. ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಯಾವುವು? ಪಾಕಿಸ್ತಾನ, ಶ್ರೀಲಂಕಾ ಎಷ್ಟನೇ ಸ್ಥಾನದಲ್ಲಿವೆ ಎಂದು ನೋಡೋಣ.

ಭಾರತದ ಬಿಸಿಸಿಐ, ಪಾಕಿಸ್ತಾನದ ಪಿಸಿಬಿ, ಆಸ್ಟ್ರೇಲಿಯಾದ ಕ್ರಿಕೆಟ್ ಆಸ್ಟ್ರೇಲಿಯಾ ಹೀಗೆ ಕ್ರಿಕೆಟ್ ಆಡುವ ಪ್ರತಿಯೊಂದು ದೇಶವು ತನ್ನದೇ ಆದ ಕ್ರಿಕೆಟ್ ಬೋರ್ಡ್ ಹೊಂದಿವೆ. ಈ ಎಲ್ಲಾ ಬೋರ್ಡ್‌ಗಳು ಐಸಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
ಭಾರತದ ಬಿಸಿಸಿಐ, ಪಾಕಿಸ್ತಾನದ ಪಿಸಿಬಿ, ಆಸ್ಟ್ರೇಲಿಯಾದ ಕ್ರಿಕೆಟ್ ಆಸ್ಟ್ರೇಲಿಯಾ ಹೀಗೆ ಕ್ರಿಕೆಟ್ ಆಡುವ ಪ್ರತಿಯೊಂದು ದೇಶವು ತನ್ನದೇ ಆದ ಕ್ರಿಕೆಟ್ ಬೋರ್ಡ್ ಹೊಂದಿವೆ. ಈ ಎಲ್ಲಾ ಬೋರ್ಡ್‌ಗಳು ಐಸಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
ಇನ್ನು ಜಗತ್ತಿನ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನ್ನುವ ಕೀರ್ತಿ ಭಾರತದ ಬಿಸಿಸಿಐ ಬಳಿ ಇದೆ. ಬಿಸಿಸಿಐ 18,760 ಕೋಟಿ ರುಪಾಯಿ ಸಂಪತ್ತು ಹೊಂದಿದೆ.
ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 492 ಕೋಟಿ ರುಪಾಯಿ ಸಂಪತ್ತು ಹೊಂದಿದೆ.
ನೆರೆಯ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಳಿ ಬರೋಬ್ಬರಿ 458 ಕೋಟಿ ರುಪಾಯಿ ಸಂಪತ್ತು ಇದ್ದು, ಒಟ್ಟಾರೆ ಶ್ರೀಮಂತ ಕ್ರಿಕೆಟ್ ಬೋರ್ಡ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ಭಾರತದ ಮತ್ತೊಂದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ 425 ಕೋಟಿ ರುಪಾಯಿ ಸಂಪತ್ತು ಹೊಂದಿದ್ದು, 5ನೇ ಸ್ಥಾನದಲ್ಲಿದೆ.
ಮೂರನೇ ಆವೃತ್ತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಬಳಿ 392 ಕೋಟಿ ರುಪಾಯಿ ಸಂಪತ್ತು ಇದ್ದು, ಆರನೇ ಸ್ಥಾನದಲ್ಲಿದೆ.
ಇನ್ನು ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ 317 ಕೋಟಿ ರುಪಾಯಿ ಸಂಪತ್ತು ಹೊಂದಿದ್ದು, ಒಟ್ಟಾರೆ ಶ್ರೀಮಂತ ಕ್ರಿಕೆಟ್ ಬೋರ್ಡ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ದ್ವೀಪರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಬಳಿ 166 ಕೋಟಿ ಸಂಪತ್ತು ಇದ್ದು, 8ನೇ ಸ್ಥಾನದಲ್ಲಿದೆ.
ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬಳಿ 125 ಕೋಟಿ ರುಪಾಯಿ ಸಂಪತ್ತು ಹೊಂದಿದ್ದು, ಒಂಬತ್ತನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಬಳಿ ಕೇವಲ 75 ಕೋಟಿ ರುಪಾಯಿ ಸಂಪತ್ತು ಇದ್ದು, ಒಟ್ಟಾರೆ ಶ್ರೀಮಂತ ಕ್ರಿಕೆಟ್ ಬೋರ್ಡ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.