MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್

ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್

ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.

2 Min read
Author : Naveen Kodase
Published : Jul 17 2026, 06:13 PM IST
Share this Photo Gallery
  • FB
  • TW
  • Linkdin
  • Whatsapp
16
ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ
Image Credit : X

ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ

17 ಸೀಸನ್‌ಗಳಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿ ಕೊಡುವಲ್ಲಿ ಕೋಚ್ ಆ್ಯಂಡಿ ಫ್ಲವರ್ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸತತ ಎರಡನೇ ಬಾರಿಗೆ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವಲ್ಲೂ ಫ್ಲವರ್ ಪ್ರಮುಖ ಪಾತ್ರ ವಹಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆ್ಯಂಡಿ ಫ್ಲವರ್‌ಗೆ ಬಿಗ್ ಆಫರ್ ಕೊಟ್ಟ ಇಂಗ್ಲೆಂಡ್
Image Credit : X

ಆ್ಯಂಡಿ ಫ್ಲವರ್‌ಗೆ ಬಿಗ್ ಆಫರ್ ಕೊಟ್ಟ ಇಂಗ್ಲೆಂಡ್

ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿದ ಯಶಸ್ಸನ್ನು ಗಮನಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಜಿಂಬಾಬ್ವೆ ಮೂಲದ ಆ್ಯಂಡಿ ಫ್ಲವರ್‌ಗೆ ಬಿಗ್ ಆಫರ್ ನೀಡಿತ್ತು. ಆದರೆ ಆ್ಯಂಡಿ ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.

Related Articles

Related image1
IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು
Related image2
ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO
36
ಆ್ಯಂಡಿ ಫ್ಲವರ್ ಗೆ ಗಾಳ ಹಾಕಿದ ಇಂಗ್ಲೆಂಡ್‌ಗೆ ನಿರಾಸೆಆ್ಯಂಡಿ ಫ್ಲವರ್
Image Credit : Image Credit: Twitter

ಆ್ಯಂಡಿ ಫ್ಲವರ್ ಗೆ ಗಾಳ ಹಾಕಿದ ಇಂಗ್ಲೆಂಡ್‌ಗೆ ನಿರಾಸೆಆ್ಯಂಡಿ ಫ್ಲವರ್

ಈ ಮೊದಲು ಇಂಗ್ಲೆಂಡ್ ಟೆಸ್ಟ್‌ ತಂಡದ ಹೆಡ್‌ ಕೋಚ್ ಆಗಿ ನ್ಯೂಜಿಲೆಂಡ್ ಮೂಲದ ಬ್ರೆಂಡನ್ ಮೆಕ್ಕಲಂ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆದರೆ ಮೆಕ್ಕಲಂ ಅವರ ಕಾಂಟ್ರ್ಯಾಕ್ಟ್‌ ಮುಕ್ತಾಯವಾದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ಕೋಚ್ ಹುಡುಕಾಟದಲ್ಲಿದೆ. ಇದೀಗ ಆ್ಯಂಡಿ ಫ್ಲವರ್ ಮೇಲೆ ಕಣ್ಣಿಟ್ಟಿದ್ದ ಇಂಗ್ಲೆಂಡ್‌ಗೆ ನಿರಾಸೆ ಎದುರಾಗಿದೆ.

46
ಆರ್‌ಸಿಬಿ, ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿರುವ ಆ್ಯಂಡಿ ಫ್ಲವರ್
Image Credit : ANI

ಆರ್‌ಸಿಬಿ, ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿರುವ ಆ್ಯಂಡಿ ಫ್ಲವರ್

ಸದ್ಯ ಆ್ಯಂಡಿ ಫ್ಲವರ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್‌ಸಿಬಿ ತಂಡಕ್ಕೆ ಹ್ಯಾಟ್ರಿಕ್ ಕಪ್ ಗೆಲ್ಲಿಸಿಕೊಡಲು ಪಣ ತೊಟ್ಟಿರುವ ಫ್ಲವರ್, ಇಂಗ್ಲೆಂಡ್ ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

56
ಇಂಗ್ಲೆಂಡ್ ಆಫರ್ ನಯವಾಗಿ ತಿರಸ್ಕರಿಸಿದ ಆ್ಯಂಡಿ ಫ್ಲವರ್
Image Credit : Getty

ಇಂಗ್ಲೆಂಡ್ ಆಫರ್ ನಯವಾಗಿ ತಿರಸ್ಕರಿಸಿದ ಆ್ಯಂಡಿ ಫ್ಲವರ್

ಈ ಬಗ್ಗೆ ಮಾತನಾಡಿರುವ ಫ್ಲವರ್, 'ನಿಜ ಹೇಳಬೇಕೆಂದರೆ, ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ನಿಜವಾಗಿಯೂ ಒಂದೆರಡು ಒಳ್ಳೆಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತೇನೆ. ನನ್ನ ಸುತ್ತಲೂ ನಿಜವಾಗಿಯೂ ಒಳ್ಳೆಯ ತಂಡಗಳಿವೆ ಮತ್ತು ನನ್ನ ಸುತ್ತಲೂ ಒಳ್ಳೆಯ ಜನರಿದ್ದಾರೆ ಮತ್ತು ನಾನು ಇಂದು ಏನು ಮಾಡುತ್ತಿದ್ದೇನೋ ಅದರಲ್ಲಿ ಖುಷಿ ಇದೆ' ಎಂದು ತಮಗೆ ಬಂದ ಆಫರ್‌ಗೆ ನಯವಾಗಿ ತಿರಸ್ಕರಿಸಿದ್ದಾರೆ.

66
ಈ ಮೊದಲು ಇಂಗ್ಲೆಂಡ್ ಕೋಚ್ ಆಗಿದ್ದ ಆ್ಯಂಡಿ ಫ್ಲವರ್
Image Credit : Getty

ಈ ಮೊದಲು ಇಂಗ್ಲೆಂಡ್ ಕೋಚ್ ಆಗಿದ್ದ ಆ್ಯಂಡಿ ಫ್ಲವರ್

ಈ ಮೊದಲು ಆ್ಯಂಡಿ ಫ್ಲವರ್ 2009ರಿಂದ 2014ರ ವರೆಗೆ ಇಂಗ್ಲೆಂಡ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ತವರು ಹಾಗೂ ತವರಿನಾಚೆ ಆಷಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ಭಾರತದಲ್ಲೂ ಟೆಸ್ಟ್ ಸರಣಿ ಜಯಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಶುಬಮನ್ ಜೊತೆ ಆಡಿ ಗೆಲುವಿನ ರೂವಾರಿಯಾಗಿದ್ದ ಮಾಜಿ ಟೀಂಮೇಟ್ ಅರೆಸ್ಟ್, ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್
Recommended image2
ತೆಂಡೂಲ್ಕರ್ 100 ಶತಕದ ಸೀಕ್ರೆಟ್, ಪಂದ್ಯಕ್ಕೂ ಮುನ್ನ ತಪ್ಪದೇ ಮಾಡ್ತಿದ್ದ ಒಂದು ಕೆಲಸ ಬಿಚ್ಚಿಟ್ಟ ಸಚಿನ್
Recommended image3
ಇಂಗ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಸ್ಟಾರ್ ಆಲ್ರೌಂಡರ್ 3ನೇ ಏಕದಿನ ಪಂದ್ಯದಿಂದ ಔಟ್?
Related Stories
Recommended image1
IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು
Recommended image2
ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved