ಗಾಯಕ Taz Stereo Nation ನಿಧನ: ಭಾರತೀಯ ಮೂಲದ ಬ್ರಿಟೀಷ್ ಸಿಂಗರ್ ಸಾವಿಗೆ ಕಾರಣವೇನು?
ತಾಜ್ ಸ್ಟೀರಿಯೋ ನೇಷನ್ (Taz Stereo Nation ) ಅವರು 54 ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಮೂಲದ ಬ್ರಿಟಿಷ್ ಗಾಯಕ 'ನಾಚಾಂಗೆ ಸಾರಿ ರಾತ್' ಎಂಬ ಸೂಪರ್‌ಹಿಟ್ ಹಾಡನ್ನು ಹಾಡಿದ್ದರು. ಅವರ ನಿಧನ ಸಂಗೀತ ಲೋಕಕ್ಕೆ ಭಾರೀ ನಷ್ಟವಾಗಿದೆ. ಅಷ್ಟಕ್ಕೂ ಯಾರು ಈ ತಾಜ್ ಸ್ಟೀರಿಯೋ ನೇಷನ್ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.
Imaga: Taz Stereo Nation
ಸಂಗೀತ ಜಗತ್ತಿಗೆ ಆಘಾತಕಾರಿ ಸುದ್ದಿಯಾಗಿದೆ. ಅಪ್ರತಿಮ ಗಾಯಕ ಟಾಜ್ ಸ್ಟೀರಿಯೊ ನೇಷನ್ ಅವರ ನಿಧನವನ್ನು ಬಿಬಿಸಿ ಏಷ್ಯಾ ವರದಿ ಮಾಡಿದೆ ಮತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಭಾರತೀಯ ಮೂಲದ ಬ್ರಿಟಿಷ್ ಗಾಯಕ 54 ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಸಾವನ್ನು ದೃಢೀಕರಿಸಿ, ತಾಜ್ ಅವರ ಕುಟುಂಬವು ಶನಿವಾರ ಹೇಳಿಕೆಯನ್ನು ನೀಡಿದೆ. ಅವರು ಹಿಂದೆ ಕೋಮಾದಲ್ಲಿದ್ದರು. ಆದರೆ ಹೊರಬರುವಲ್ಲಿ ಯಶಸ್ವಿಯಾಗಿದ್ದರು.
Imaga: Taz Stereo Nation
ತಾರ್ಸಮೆ ಸಿಂಗ್ ಸೈನಿ ಯಾಗಿ (Tarsame Singh Saini) ಜನಿಸಿದ ಈ ಗಾಯಕರು ಟಾಜ್ ಸ್ಟೀರಿಯೋ ನೇಷನ್ ಎಂದು ಜನಪ್ರಿಯವಾಗಿದ್ದರು. ಇದು ಅವರ ಸ್ಟೇಜ್ ನೇಮ್ ಆಗಿತ್ತು. ಅವರು 'ಟಾಜ್ ಸ್ಟೀರಿಯೋ ನೇಷನ್' ಎಂದು ಜನಪ್ರಿಯರಾಗುವ ಮುಂಚೆ 'ಜಾನಿ ಝೀ' ಎಂದು ಕರೆಯಲ್ಪಡುತ್ತಿದ್ದರು.ತಾಜ್ ಸ್ಟಿರಿಯೊ ನೇಷನ್ ಅವರು ಬ್ರಿಟಿಷ್ ಏಷ್ಯನ್ ಸಂಗೀತ ರಂಗದ ಪ್ರವರ್ತಕರಾಗಿದ್ದರು ಮತ್ತು ಕ್ರಾಸ್ ಕಲ್ಚರಲ್ - ಏಷ್ಯನ್ ಫ್ಯೂಷನ್ ಸಂಗೀತದೊಂದಿಗೆ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಜಾಗವನ್ನು ಮಾಡಿಕೊಂಡಿದ್ದರು.
Imaga: Taz Stereo Nation
ಟಾಜ್ ಸ್ಟೀರಿಯೋ ನೇಷನ್ 1996 ರಲ್ಲಿ ಪ್ರಸಿದ್ಧ 'ಸ್ಟಿರಿಯೊ ನೇಷನ್' ಬ್ಯಾಂಡ್ ಅನ್ನು ರಚಿಸಿದರು. ಇದು ಅವರ ಬ್ಯಾಂಡ್‌ನ ಮನ್ನಣೆಯೊಂದಿಗೆ ಅವರು ಸಹ ಜನಪ್ರಿಯವಾಗಿ ಟಾಜ್ ಸ್ಟೀರಿಯೋ ನೇಷನ್ ಎಂದು ಕರೆಯಲ್ಪಟ್ಟರು. ಗಾಯಕ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲವು ಹಾಡುಗಳನ್ನು ಸಹ ಹಾಡಿದ್ದಾರೆ. ಜಾನ್ ಅಬ್ರಹಾಂ ಅವರ 2019 ರ ಚಲನಚಿತ್ರ ಬಾಟ್ಲಾ ಹೌಸ್‌ನಲ್ಲಿ ನಟಿ ಮೃಣಾಲ್ ಠಾಕೂರ್ ಅವರನ್ನು ಒಳಗೊಂಡಿರುವ 'ಗಲ್ಲನ್ ಗೋರಿಯನ್' ಅವರ ಕೊನೆಯ ಬಾಲಿವುಡ್ ಹಾಡು. ಈ ಡುಯಟ್ ಅನ್ನು ಅವರು ಧ್ವನಿ ಭಾನುಶಾಲಿ ಅವರ ಜೊತೆ ಹಾಡಿದರು. ಅವರು ತಮ್ಮ ಧ್ವನಿಯನ್ನು ನೀಡಿದ ಇತರ ಪ್ರಸಿದ್ಧ ಹಾಡುಗಳೆಂದರೆ 'ಪ್ಯಾರ್ ಹೋ ಗಯಾ' ಮತ್ತು 'ನಾಚಾಂಗೆ ಸಾರಿ ರಾತ್'.
Imaga: Taz Stereo Nation
ತಾಜ್ ಅವರ ಮೊದಲ ಆಲ್ಬಂ 'ಹಿಟ್ ದಿ ಡೆಕ್' ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಆಲ್ಬಂ 1989 ರಲ್ಲಿ ಬಿಡುಗಡೆಯಾಯಿತು ಮತ್ತು 36 ವಾರಗಳ ಕಾಲ UK ಏಷ್ಯನ್ ಪಾಪ್ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಪಾಶ್ಚಾತ್ಯ ಪಾಪ್ ಸಂವೇದನೆಯೊಂದಿಗೆ ಸಾಂಪ್ರದಾಯಿಕ ಏಷ್ಯನ್ ಮಧುರ ಸಮ್ಮಿಳನಕ್ಕೆ ತಾಜ್ ಅವರ ಸಂಗೀತವು ಹೆಸರುವಾಸಿಯಾಗಿದೆ. ಪ್ಯಾರ್ ಹೋ ಗಯಾ, ನಾಚೆಂಗೆ ಸಾರಿ ರಾತ್ ಮತ್ತು ಗಲ್ಲಾನ್ ಗೋರಿಯನ್ ಅವರ ಕೆಲವು ಗಮನಾರ್ಹ ಕೃತಿಗಳು. ಅವರು ಸಾಲ್ಸಾ ಮತ್ತು ಡೋಂಟ್ ಸ್ಟಾಪ್ ಡ್ರೀಮಿಂಗ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು.