- Home
- Entertainment
- Cine World
- Box Office Kings: ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿದ ನಟ ಯಾರು?
Box Office Kings: ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿದ ನಟ ಯಾರು?
ದಕ್ಷಿಣ ಭಾರತದ ನಾಲ್ಕು ಸಿನಿಮಾ ಇಂಡಷ್ಟ್ರಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಅತಿ ಹೆಚ್ಚು ಇಂಡಸ್ಟ್ರಿ ಹಿಟ್ ನೀಡಿ ಗೆದ್ದ ನಟರು ಯಾರು? ಇಲ್ಲಿದೆ ಪೂರ್ತಿ ಮಾಹಿತಿ.

ಪ್ರತಿ ವರ್ಷ ಒಂದಲ್ಲ ಒಂದು ನಟರು ಸೂಪರ್ ಹಿಟ್ ಸಿನಿಮಾಗಳನ್ನು (industry hit films) ನೀಡುತ್ತಲೇ ಇರುತ್ತಾರೆ. ಆದರೆ ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿರುವ ನಟರು ಯಾರು? ಇಲ್ಲಿದೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾ ಇಂಡಸ್ಟ್ರಿ ಕುರಿತಾದ ಮಾಹಿತಿ.
ಬಾಲಿವುಡ್
ಬಾಲಿವುಡ್‌ನಲ್ಲಿ ಅತಿ ಹೆಚ್ಚು ಇಂಡಸ್ಟ್ರಿ ಹಿಟ್‌ಗಳನ್ನು ಹೊಂದಿರುವ ಭಾರತೀಯ ನಟ ಧರ್ಮೇಂದ್ರ (Dharmendra). ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ 74 ಸಿನಿಮಾಗಳು ಹಿಟ್ ಆಗಿವೆ. ಅವರ ವೃತ್ತಿಜೀವನವು ಐದು ದಶಕಗಳಿಗೂ ಹೆಚ್ಚು ಕಾಲ ಇದ್ದು, ಇವರು ಸುಮಾರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಾಲಿವುಡ್
ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು ರಜನಿಕಾಂತ್ (Rajnikanth)ಇವರು ಸುಮಾರು 16 ಇಂಡಷ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿ ಗೆದ್ದಿದ್ದರು. ಇಂದಿಗೂ ತಮ್ಮ ಹೊಸ ಹೊಸ ಸಿನಿಮಾಗಳ ಮೂಲಕ ಮತ್ತೆ ಮತ್ತೆ ಹಿಟ್ ಸಿನಿಮಾ ನೀಡುತ್ತಿದ್ದಾರೆ.
ಮಾಲಿವುಡ್
ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿದವರು ಸೂಪರ್ ಸ್ಟಾರ್ ಮಮ್ಮೂಟಿ (Mammootty). ಇವರು 12 ಇಂಡಸ್ಟ್ರಿ ಹಿಟ್ ನೀಡಿದ್ದಾರೆ. ಇನ್ನು ಮತ್ತೊಬ್ಬ ಸ್ಟಾರ್ ನಟ ಮೋಹನ್ ಲಾಲ್ (Mohanlal)10 ಹಿಟ್ ಸಿನಿಮಾ ನೀಡಿದ್ದಾರೆ.
ಟಾಲಿವುಡ್
ತೆಲಗು ಸಿನಿಮಾಗಳಲ್ಲಿ ಅತಿ ಹೆಚ್ಚು ಇಂಡಸ್ಟ್ರಿ ಹಿಟ್ ನೀಡಿದವರು ಚಿರಂಜೀವಿ (Chiranjeevi). ಇವರ ಖಾತೆಯಲ್ಲಿ ಸುಮಾರು 9 ಹಿಟ್ ಸಿನಿಮಾಗಳಿವೆ. ಚಿರಂಜೀವಿ ಇಂದಿಗೂ ಜನರ ಫೇವರಿಟ್ ನಟ.
ಸ್ಯಾಂಡಲ್’ವುಡ್
ಇನ್ನು ಕೊನೆಯದಾಗಿ ನಮ್ಮ ಚಂದನವನದಲ್ಲಿ ಅತ್ಯಂತ ಹೆಚ್ಚು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವವರು ಡಾ. ರಾಜ್ ಕುಮಾರ್ (Dr. Rajkumar). ಅವರ ಎಲ್ಲಾ ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ನಿಜಾ. ಆದರೆ ಇಂಡಸ್ಟ್ರಿ ಹಿಟ್ ಅಂತ ಬಂದ್ರೆ ಅಣ್ಣಾವ್ರು ಸುಮಾರು 15 ಹಿಟ್ ಸಿನಿಮಾ ನೀಡಿದ್ದಾರೆ.