ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬೇಬಿ ಪ್ಲಾನಿಂಗ್ ಗುಟ್ಟು ರಟ್ಟಾಯ್ತು!
ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಉದ್ಯಮದ ಅತ್ಯಂತ ಜನಪ್ರಿಯ ಜೋಡಿಗಳ ಪಟ್ಟಿಗೆ ಸೇರಿದ್ದಾರೆ. ಇವರಿಬ್ಬರು ಮದುವೆಯಾದಾಗಿನಿಂದಲೂ ಅಭಿಮಾನಿಗಳು ಅವರು ಯಾವಾಗ ಪೋಷಕರಾಗುತ್ತಾರೆಂದು ಕಾಯುತ್ತಿದ್ದಾರೆ. ಆದರೆ, ಈಗ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳಲಿದೆ. ವಿಕ್ಕಿ ಮತ್ತು ಕತ್ರಿನಾ ಅವರ ಆಪ್ತ ಸ್ನೇಹಿತರೊಬ್ಬರು ಅವರು ಯಾವಾಗ ಮಗುವಿಗೆ ಯೋಜಿಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ಕತ್ರಿನಾ ಕೈಫ್ ಫರ್ಹಾನ್ ಅಖ್ತರ್ ಅವರ 'ಜೀ ಲೇ ಜರಾ' ಚಿತ್ರದ ಶೂಟಿಂಗ್ ಮುಗಿಸಿದ ನಂತರ ಅವರು ಮಗುವನ್ನು ಪ್ಲಾನ್ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಸ್ನೇಹಿತೆ ಬಹಿರಂಗಪಡಿಸಿದ್ದಾರೆ. ಇದೀಗ ಈ ಸುದ್ದಿ ಕೇಳಿದಾಗಿನಿಂದ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ.
ಫರ್ಹಾನ್ ಅಖ್ತರ್ ಅವರ 'ಜೀ ಲೇ ಜರಾ' ಮತ್ತು ವಿಜಯ್ ಸೇತುಪತಿ ಅವರ 'ಮೆರ್ರಿ ಕ್ರಿಸ್‌ಮಸ್' ಚಿತ್ರೀಕರಣ ಮುಗಿದ ನಂತರ ಕತ್ರಿನಾ ತನ್ನ ಮಗುವನ್ನು ಯೋಜಿಸಲು ಪ್ರಾರಂಭಿಸುತ್ತಾರೆ ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಆಪ್ತ ಸ್ನೇಹಿತ ಬಹಿರಂಗಪಡಿಸಿದ್ದಾರೆ.
‘ಜೀ ಲೇ ಝರಾ’ ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲವಾದರೂ ಅದರ ಕೆಲಸಗಳು ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಕತ್ರಿನಾ 'ಮೆರ್ರಿ ಕ್ರಿಸ್ಮಸ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಕತ್ರಿನಾ ಕೈಫ್ ಜೊತೆಗೆ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ 'ಜೀ ಲೇ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಮೂವರೂ ನಟಿಯರು ಮೊದಲ ಬಾರಿಗೆ ಚಿತ್ರ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಜೀ ಲೇ ಜರಾ ಚಿತ್ರದ ಘೋಷಣೆಯನ್ನು ಜೋಯಾ ಅಖ್ತರ್ 2021 ರಲ್ಲಿ ಮಾಡಿದರು. ಈ ಚಿತ್ರದ ಕಥೆಯನ್ನು ಜೋಯಾ ಅಖ್ತರ್ ಬರೆದಿದ್ದು, ಫರ್ಹಾನ್ ಅಖ್ತರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 9, 2021 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ವಿವಾಹವಾದರು. ಈ ಮದುವೆಯಲ್ಲಿ ಇಬ್ಬರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು.
ಕತ್ರಿನಾ ಕೈಫ್ ಅವರು ಶೀಘ್ರದಲ್ಲೇ ಸಲ್ಮಾನ್ ಖಾನ್ ಅವರೊಂದಿಗೆ 'ಟೈಗರ್ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಇಮ್ರಾನ್ ಹಶ್ಮಿ ಕೂಡ ಕಾಣಿಸಿಕೊಳ್ಳಲಿದ್ದಾರೆ.