ಲಕ್ಷುರಿ ಕಾರು ಖರೀದಿಸಿ ಬಾಲಿವುಡ್ ನಟಿ ಕೃತಿ ಸನೋನ್ ಮಿಮಿ ಸಕ್ಸಸ್ ಬೆನ್ನಲ್ಲೇ 2 ಕೋಟಿಗೂ ಅಧಿಕ ಬೆಲೆಯ ಕಾರು ಖರೀದಿಸಿದ ಚೆಲುವೆ

ತನ್ನ ಬಿಗ್‌ ಸಕ್ಸಸ್ ಮೂವಿ 'ಮಿಮಿ'ಯ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರೋ ಬಾಲಿವುಡ್ ನಟಿ ಕೃತಿ ಸನೋನ್ ತಮಗೆ ತಾವೇ ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ಟೈಲಿಷ್ ಸ್ವಾಂಕಿ ಮೀನ್ ಯಂತ್ರದ ಹೆಮ್ಮೆಯ ಒಡತಿಯಾಗಿದ್ದಾರೆ ಕೃತಿ.

'ಮಿಮಿ' ಕೃತಿ ಸನನ್‌ಗೆ ಗೇಮ್ ಚೇಂಜರ್ ಸಿನಿಮಾ ಎಂದು ಸಾಬೀತಾಗಿದ್ದಲ್ಲದೆ ಇಂದು ಬಾಲಿವುಡ್‌ನ ಟಾಪ್ ನಟಿಯರಲ್ಲಿ ತಾವೊಬ್ಬರು ಎಂಬುದನ್ನು ಪ್ರೂವ್ ಮಾಡಿದರು. ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್‌ಎಸ್ 600 ಐಷಾರಾಮಿ ಕಾರು ನಟಿಯ ಕಾರ್ ಕಲೆಕ್ಷನ್‌ನಲ್ಲಿ ಸೇರಿಯಾಗಿದೆ.

ಪ್ರಭಾಸ್‌ನ ಮದ್ವೆಯಾಗ್ತೀನಿ ಎಂದ ನಟಿ ಕೃತಿ ಸನೋನ್

ಮಿಮಿ ಯಶಸ್ಸಿನ ನಂತರ, ಕೃತಿ ಸಂತೋಷದ ದಿನಗಳಲ್ಲಿದ್ದಾರೆ. ನಟಿ ತನ್ನ ಪರಿಶ್ರಮದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. 'ಮಿಮಿ' ಯಶಸ್ಸಿನ ನಂತರ, ಉದ್ಯಮವು ಕೃತಿಯ 2.0 ಆವೃತ್ತಿಯನ್ನು ಕಂಡಿದೆ. ಏಕೆಂದರೆ ಅವರನ್ನು ಉದ್ಯಮದ ಉನ್ನತ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

View post on Instagram

ಕೆಲಸದ ವಿಚಾರದಲ್ಲಿ ಕೃತಿ ಸನೋನ್ 'ಆದಿಪುರುಷ', 'ಬಚ್ಚನ್ ಪಾಂಡೆ,' ಭೇದಿಯಾ ',' ಗಣಪಥ್ ',' ಹಮ್ ದೋ ಹಮಾರೇ ದೋ 'ಮತ್ತು ಪೈಪ್‌ಲೈನ್‌ನಲ್ಲಿನ ಇತರ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.