ಅಭಿಷೇಕ್ ಬಚ್ಚನ್‌ರನ್ನು ಪಿಗ್ಗಿ ಜೊತೆ ಕೆಲಸ ಮಾಡದಂತೆ ತಡೆದ ಐಶ್ವರ್ಯಾ ರೈ!
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಪವರ್‌ಫುಲ್ ಕಪಲ್‌ಗಳು. ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪತ್ನಿ ಐಶ್ವರ್ಯಾಗೊಸ್ಕರ ಅಭಿಷೇಕ್ ಪ್ರಿಯಾಂಕಾ ಚೋಪ್ರಾ ಜೊತೆ ಕೆಲಸ ಮಾಡುವುದನ್ನು ನಿರಾಕರಿಸಿದ್ದರು. ಇಲ್ಲಿದೆ ವಿವರ.
ಈ ಕಥೆ ತುಂಬಾ ಹಳೆಯದಲ್ಲ. ವರ್ಷದ ಹಿಂದೆ ಪ್ರಿಯಾಂಕಾ ಚೋಪ್ರಾರ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ ಒಂದು ಪಾತ್ರವನ್ನು ನೀಡಲಾಗಿತ್ತು.
ಸುದ್ದಿಯ ಪ್ರಕಾರ, ಸೋನಾಲಿ ಬೋಸ್ ಚಲನಚಿತ್ರ ದಿ ಸ್ಕೈ ಈಸ್ ಪಿಂಕ್‌ನಲ್ಲಿ ಅಭಿಷೇಕ್‌ಗೆ ನೀಡಿದ ಪಾತ್ರ, ಐಶ್ವರ್ಯಾಗೆ ಇಷ್ಟವಾಗಲಿಲ್ಲ.
ಈ ಚಿತ್ರದಲ್ಲಿ ಅಭಿಷೇಕ್‌ಗೆ ಪ್ರಿಯಾಂಕಾರ ಪತಿ ಪಾತ್ರವನ್ನು ನೀಡಲಾಯಿತು. ಅದು ಐಶ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ ಅಭಿಷೇಕ್ ಪತ್ನಿ ಸಲುವಾಗಿ ಚಿತ್ರ ಮಾಡಲು ನಿರಾಕರಿಸಿದರು.
ಅಭಿಷೇಕ್‌ಗೆ ಚಿತ್ರದಲ್ಲಿ ಹೆಚ್ಚು ಕೆಲಸ ಇರಲಿಲ್ಲ. ಚಿತ್ರಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸುವುದನ್ನು ಐಶ್ ಬಯಸಲಿಲ್ಲ.
ಪತಿ ಅಭಿಷೇಕ್ ಚಿತ್ರಗಳಲ್ಲಿ ಬಲವಾದ ಪಾತ್ರಗಳನ್ನು ಮಾಡಬೇಕೆಂದು ಐಶ್ವರ್ಯ ಬಯಸಿದ್ದರು.
ಈ ಚಿತ್ರ ಹೆಚ್ಚಾಗಿ ತಾಯಿ-ಮಗಳ ಸಂಬಂಧವನ್ನು ಆಧರಿಸಿದೆ. ಆಯೆಷಾ ಚೌಧರಿ ಎಂಬ ಹುಡುಗಿಯ ನಿಜ ಜೀವನವನ್ನು ಆಧರಿಸಿದ ಚಿತ್ರ.
ಆಯೆಷಾಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಯಿಲೆ ಕಾರಣದಿಂದ 18ನೇ ವಯಸ್ಸಿನಲ್ಲಿ ಮರಣ ಹೊಂದಿದಳು.ಆಕೆಗೆ ಯುಕೆನಲ್ಲಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿತ್ತು.
ನಂತರ ಈ ಪಾತ್ರವನ್ನು ಫರ್ಹಾನ್ ಅಖ್ತರ್ ನಿರ್ವಹಿಸಿದ್ದಾರೆ.
ಅಭಿಷೇಕ್ ಮತ್ತು ಪ್ರಿಯಾಂಕಾ ಇದಕ್ಕೂ ಮೊದಲು ದೋಸ್ತಾನಾ, ಬ್ಲಫ್ ಮಾಸ್ಟರ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ
ಅಭಿಷೇಕ್‌ರ ಲುಡೋ ಇತ್ತೀಚೆಗೆ ಬಿಡುಗಡೆಯಾಗಿದ್ದು, ದಿ ಬಿಗ್ ಬುಲ್ ಮತ್ತು ಬಾಸ್ ಬಿಸ್ವಾಸ್ ಅವರ ಮುಂದಿನ ಸಿನಿಮಾಗಳಾಗಿವೆ.
ಪ್ರಸ್ತುತ ಐಶ್ವರ್ಯಾ ಯಾವುದೇ ಬಾಲಿವುಡ್ ಚಿತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ, ಆಕೆ ದಕ್ಷಿಣದ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದು ಸ್ವಲ್ಪ ಭಾಗ ಶೂಟಿಂಗ್ ಮುಗಿದಿದೆ.