ಇಳಯರಾಜ ಸಂಗೀತದಲ್ಲಿ ಪಿ ಸುಶೀಲಾ ಹೆಚ್ಚು ಹಾಡುಗಳನ್ನೇಕೆ ಹಾಡಿಲ್ಲ?
ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಗಾಯಕಿ ಪಿ. ಸುಶೀಲ ನಡುವೆ ಅಂತಹ ಒಳ್ಳೆಯ ಸಂಬಂಧವಿಲ್ಲ, ಇದಕ್ಕೆ ಅವರಿಬ್ಬರ ನಡುವೆ ನಡೆದ ಜಗಳ ಕಾರಣ ಎನ್ನಲಾಗುತ್ತಿದೆ. ಹಾಗಿದ್ರೆ ಇವರಿಬ್ಬರ ನಡುವಿನ ಕಿತ್ತಾಟಕ್ಕೆ ಕಾರಣ ಏನು ಇಲ್ಲಿದೆ ಮಾಹಿತಿ.
ತಮಿಳು ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ಗಾಯಕಿಯರಲ್ಲಿ ಪಿ. ಸುಶೀಲ ಪ್ರಮುಖರು. ನಿನ್ನೆಯಷ್ಟೇ ಅವರು ತಮ್ಮ 90ನೇ ವಸಂತಕ್ಕೆ ಕಾಲಿರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಸಂದರ್ಭದಲ್ಲಿ, ಇಳಯರಾಜ ಸಂಗೀತದಲ್ಲಿ ಪಿ. ಸುಶೀಲ ಹೆಚ್ಚು ಹಾಡುಗಳನ್ನು ಹಾಡದಿರಲು ಕಾರಣವೇನು ಎಂಬುದನ್ನು ಈ ಸಂಗ್ರಹದಲ್ಲಿ ನೋಡೋಣ.
ಗಾಯಕಿ ಪಿ. ಸುಶೀಲ
ಇಳಯರಾಜ ಸಂಗೀತ ನಿರ್ದೇಶಕರಾಗುವ ಮುನ್ನ ಕೆಲವು ಸಂಗೀತ ನಿರ್ದೇಶಕರ ಬಳಿ ಗಿಟಾರ್ ವಾದಕರಾಗಿ ಕೆಲಸ ಮಾಡಿದ್ದರು. ವಿ.ಕುಮಾರ್ ಬಳಿ ಕೆಲಸ ಮಾಡುವಾಗ ಪಿ. ಸುಶೀಲ ಒಂದು ಹಾಡು ಹಾಡಲು ಬಂದಿದ್ದರು. ಪಲ್ಲವಿ ಹಾಡಿದ ಸುಶೀಲ ಚರಣ ಹಾಡದೆ ಬಿಟ್ಟಾಗ, ವಿ.ಕುಮಾರ್ ಕಾರಣ ಕೇಳಿದ್ದಾರೆ. ಆಗ ಸುಶೀಲ, ಗಿಟಾರ್ ವಾದಕ ಇಳಯರಾಜ ತನಗೆ ಸೂಚನೆ ನೀಡಿಲ್ಲ ಹಾಗಾಗಿ ಹಾಡಿಲ್ಲ ಎಂದಿದ್ದಾರೆ.
ಸಾಮಾನ್ಯವಾಗಿ ಗಿಟಾರ್ ವಾದಕರು ನನಗೆ ಕಾರ್ಡ್ ಕೊಡ್ತಾರೆ. ಆದರೆ ಇಳಯರಾಜ ಕಾರ್ಡ್ ಕೊಡಲಿಲ್ಲ. ಹಾಗಾಗಿ ನಾನು ಚರಣ ಹಾಡಲು ಸಾಧ್ಯವಾಗಲಿಲ್ಲ ಎಂದು ಪಿ. ಸುಶೀಲ ಹೇಳಿದ್ದಾರೆ. ಇದರಿಂದ ಕೋಪಗೊಂಡ ಇಳಯರಾಜ, ಸುಶೀಲ ತನ್ನ ಮೇಲೆ ಬೇಕಂತಲೇ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಾನು ಇಲ್ಲಿ ಗಿಟಾರ್ ನುಡಿಸಲು ಬಂದಿದ್ದೇನೆ, ಸುಮ್ಮನೆ ಕೂರಲು ಅಲ್ಲ ಎಂದು ಇಳಯರಾಜ ಕೋಪದಿಂದ ಹೇಳಿದ್ದಾರೆ.
ಇಳಯರಾಜ ಮತ್ತು ಪಿ. ಸುಶೀಲ ನಡುವಿನ ಬಿರುಕಿಗೆ ಈ ಜಗಳವೇ ಕಾರಣ ಎನ್ನಲಾಗಿದೆ. ಇದರಿಂದಾಗಿಯೇ ಪಿ. ಸುಶೀಲ ಬದಲಿಗೆ ಇಳಯರಾಜ ಅವರು ಮತ್ತೊಬ್ಬ ಖ್ಯಾತ ಗಾಯಕಿ ಆಗಿರುವ ಎಸ್. ಜಾನಕಿಗೆ ಹೆಚ್ಚು ಹಾಡಲು ಅವಕಾಶ ನೀಡಿದರು ಎನ್ನಲಾಗಿದೆ. ಒಂದು ಹಂತದಲ್ಲಿ ಎಸ್. ಜಾನಕಿ ಇಳಯರಾಜ ಅವರ ಆಸ್ಥಾನ ಗಾಯಕಿ ಎಂದೆನಿಸಿದ್ದರು. ಪಿ. ಸುಶೀಲ ಅವರನ್ನು ಹಿಂದಿಕ್ಕಿ ಎಸ್. ಜಾನಕಿ ಅವರನ್ನು ಮುಂಚೂಣಿ ಗಾಯಕಿಯನ್ನಾಗಿ ಮಾಡಿದ ಕೀರ್ತಿ ಇಳಯರಾಜ ಅವರಿಗೆ ಸಲ್ಲುತ್ತದೆ.