ನಾಲ್ಕು ಬಾರಿ ಮದುವೆಯಾಗಿದ್ದ ಬಾಲಿವುಡ್‌ ನಟ ವಿನೋದ್‌ ಮೆಹ್ರಾ!

First Published Feb 14, 2021, 2:22 PM IST

ಬಾಲಿವುಡ್ ನಟ ವಿನೋದ್ ಮೆಹ್ರಾ ಜೀವಂತವಾಗಿದ್ದರೆ 76 ವರ್ಷ ವಯಸ್ಸಾಗಿರುತಿತ್ತು. ಫೆಬ್ರವರಿ 13, 1945 ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ವಿನೋದ್ ಮೆಹ್ರಾ ತಮ್ಮ ಪ್ರೊಫೋಷನಲ್‌ ಲೈಫ್‌ಗಿಂತ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದರು. ವಿನೋದ್ ಮೆಹ್ರಾ ಒಟ್ಟು 4 ವಿವಾಹಗಳನ್ನು ಆಗಿದ್ದರು. ಆದರೆ ಇದರಲ್ಲಿ ಒಬ್ಬರಿಗೆ ಎಂದಿಗೂ ಹೆಂಡತಿಯ ಸ್ಥಾನಮಾನ ದೊರೆಯಲಿಲ್ಲ. ವಿನೋದ್ ಮೆಹ್ರಾ ಅವರು ಅಕ್ಟೋಬರ್ 30, 1990 ರಂದು ಹೃದಯಾಘಾತದಿಂದ ನಿಧನರಾದರು. ವಿನೋದ್ ಮರಣ ಹೊಂದಿದಾಗ, ಅವರ ಮಗಳು ಸೋನಿಯಾಳ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಳು.