ಪತಿ ಜೊತೆ ಕೆಲಸ ಮಾಡಲು ಇಷ್ಟಪಡಲ್ಲ ನಟಿ ವಿದ್ಯಾ ಬಾಲನ್! ಏನು ರೀಸನ್..?
ವಿದ್ಯಾ ಬಾಲನ್ ಬಾಲಿವುಡ್‌ನ ಮೋಸ್ಟ್ ಟ್ಯಾಲೆಂಟ್ಡ್ ನಟಿ. ಇವರ ಅಭಿನಯ ಹಾಗೂ ಪಾತ್ರಗಳ ಆಯ್ಕೆಯ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾನಾಡಿದ ನಂತರ ವಿದ್ಯಾ ಇತ್ತೀಚಿನ ಸಂದರ್ಶನದಲ್ಲಿ, ಪತಿ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಅವರು ಕೆಲಸ ಮಾಡುವುದನ್ನು ಆವಾಯ್ಡ್ ಮಾಡುವುದಾಗಿ ಹೇಳಿದರು. ಹಾಗೂ ಪ್ರಮುಖ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
ವಿದ್ಯಾ ಬಾಲನ್ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು.
ಕಹಾನಿ, ದಿ ಡರ್ಟಿ ಪಿಕ್ಚರ್, ಪಾ, ಮತ್ತು ನೋ ಒನ್ ಕಿಲ್ಡ್ ಜೆಸ್ಸಿಕಾ ಮುಂತಾದ ಬ್ಲಾಕ್ಬಸ್ಟರ್ ಚಲನಚಿತ್ರಗಳನ್ನು ಅವರು ಹೊಂದಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಜೊತೆ ನಟಿಸಿದ ಮಿಷನ್ ಮಂಗಲ್ ಸಿನಿಮಾ ಹಿಟ್ ಆಗಿದೆ ಜೊತೆಗೆ ವಿದ್ಯಾರ ಅಭಿನಯಕ್ಕೆ ಫ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ.
ಆ ಸಮಯದಲ್ಲಿ ಅವರು ತಮ್ಮ ಪತಿ ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಾಪಕರಾಗಿರುವ ಚಲನಚಿತ್ರಗಳಲ್ಲಿ ಮತ್ತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪಿಂಕ್ವಿಲ್ಲಾ ಜೊತೆ ಸಂದರ್ಶನದಲ್ಲಿ, ವಿದ್ಯಾ ತನ್ನ ಗಂಡನೊಂದಿಗೆ ಏಕೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು.
ಏಕೆಂದರೆ ನನ್ನ ನಿರ್ದೇಶಕ ಮತ್ತು ನಿರ್ಮಾಪಕರೊಂದಿಗೆ ಸಮಸ್ಯೆ ಎದುರಾಗ ಬಹುದು ಮತ್ತು ನಾನು ಅದನ್ನು ವಾದಿಸಬಹುದು. ವಾಸ್ತವವಾಗಿ, ನಾನು ಹೋರಾಡುವುದಿಲ್ಲ, ನಾನು ವಾದಿಸುತ್ತೇನೆ ಮತ್ತು ನಾನು ತರ್ಕಿಸುತ್ತೇನೆ. ಆದರೆ ನಾನು ಸಿದ್ಧಾರ್ಥ್‌ನೊಂದಿಗೆ ಅದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾನು ಸಿದ್ಧಾರ್ಥ್ ಜೊತೆ ಜಗಳವಾಡಬಲ್ಲೆ. ಅದು ತುಂಬಾ ವೈಯಕ್ತಿಕವಾಗಿದ್ದಾಗ, ನಾನು ಅವನೊಂದಿಗೆ ಜಗಳವಾಡುತ್ತೇನೆ' ಎಂದು ಅವರು ಹೇಳಿದರು.
'ನಮ್ಮ ಸಂಬಂಧದ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ನಾನು ಬಯಸುತ್ತೇನೆ. ನಾವಿಬ್ಬರೂ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಾಗಲೂ, ನಾನು ಅವನೊಂದಿಗೆ ಹಣದ ಮಾತುಕತೆ ನಡೆಸಲು ಸಾಧ್ಯವಿಲ್ಲ 'ನೀನು ಹತ್ತು ಪಟ್ಟು ಹೆಚ್ಚು ಪಡೆಯಬೇಕು ಎಂದು ಅವನು ಹೇಳಿದರೆ, ನೀನು ನನ್ನನ್ನು ಕಡಿಮೆ ಅಂದಾಜು ಮಾಡುತ್ತಿದ್ದೀಯಾ? ಎಂದು ನಾನು ಹೇಳುತ್ತೇನೆ. ನಾನು ಆ ಸ್ಪೇಸ್‌ಗೆ ಪ್ರವೇಶಿಸಲು ಬಯಸುವುದಿಲ್ಲ' ಎಂದಿದ್ದಾರೆ 40 ವರ್ಷದ ನಟಿ ವಿದ್ಯಾ
ಅದೇ ಸಂದರ್ಶನದಲ್ಲಿ, ಉದ್ಯಮದಲ್ಲಿ ತಮ್ಮ ಜರ್ನಿಯ ಬಗ್ಗೆ ಮಾತನಾಡಿತ್ತಾ ಇವರಿಗೆ ಸುಗಮ ಪ್ರಯಾಣವಾಗಿಲ್ಲ ಎಂದು ಮತ್ತು ಕಾಸ್ಟಿಂಗ್ ಕೌಚ್ ಕೊಳಕು ಅನುಭವಗಳ ಜೊತೆಗೆ ಅವರು ಎದುರಿಸಬೇಕಾದ ಅನೇಕ ಕಷ್ಟಗಳು ಬಗ್ಗೆ ರೀವಿಲ್ ಮಾಡಿದರು ನಟಿ.
ಶಕುಂತಲಾ ದೇವಿ ಅವರ ಜೀವನಚರಿತ್ರೆಯಲ್ಲಿ ವಿದ್ಯಾ ಕೊನೆಯ ಬಾರಿಗೆ ಕಾಣಿಸಿಕೊಂಡರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ವೆಬ್ ಸೀರಿಸ್‌ನಲ್ಲಿಯೂ ಅವರು ನಟಿಸಲಿದ್ದಾರೆ.