- Home
- Entertainment
- Cine World
- ಜಗದೀಪ್ ಧನಕರ್ ರಾಜಕೀಯ ಎಂಟ್ರಿಗೆ ಅಡಿಪಾಯ ಹಾಕಿದ್ದೇ Actor Salman Khan ಕೇಸ್! ಏನದು?
ಜಗದೀಪ್ ಧನಕರ್ ರಾಜಕೀಯ ಎಂಟ್ರಿಗೆ ಅಡಿಪಾಯ ಹಾಕಿದ್ದೇ Actor Salman Khan ಕೇಸ್! ಏನದು?
ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಪ್ ಧನಕರ್ ಅವರು ರಾಜಕೀಯ ಕ್ಷೇತ್ರದಲ್ಲಿ ಗಮನ ಸೆಳೆಯುವ ಮೊದಲು, ಸಾಧಕ ವಕೀಲರಾಗಿದ್ದರು. ಅವರ ವಕೀಲ ವೃತ್ತಿಯ ಸಾಧನೆ ಕುರಿತು ಚರ್ಚೆಯಾಗ್ತಿದೆ.

ದೇಶದ ಎರಡನೇ ಉನ್ನತ ಸಾಂವಿಧಾನಿಕ ಹುದ್ದೆ ಉಪರಾಷ್ಟ್ರಪತಿ ಹುದ್ದೆಗೆ ಏರುವ ಮೊದಲು, ಧನಕರ್ ಒಬ್ಬ ಅನುಭವಿ ವಕೀಲರಾಗಿದ್ದರು. 2018 ರಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಜಾಮೀನು ಪಡೆಯಲು ಧನಕರ್ ಸಹಾಯ ಮಾಡಿದ್ದರು. ಈ ಪ್ರಕರಣ ಇಂದಿಗೂ ಎಲ್ಲರ ಗಮನ ಸೆಳೆದಿದೆ.
ಜೋಧ್‌ಪುರದ ಕಂಕಾನಿ ಗ್ರಾಮದ ಬಳಿ "ಹಮ್ ಸಾಥ್ ಸಾಥ್ ಹೈ" ಸಿನಿಮಾ ಶೂಟಿಂಗ್ ವೇಳೆ ನಡೆದಿತ್ತು. ಆಗ, ಎರಡು ಕಪ್ಪು ಜಿಂಕೆಗಳನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಾಣಿಗಳು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಪ್ರಜಾತಿಗಳಾಗಿವೆ. ಈ ಸಿನಿಮಾದಲ್ಲಿ ನಟಿಸಿದ್ದ ಸಹ ನಟರಾದ ಸೈಫ್ ಅಲಿ ಖಾನ್, ಟಬು, ನೀಲಮ್, ಸೋನಾಲಿ ಬೇಂದ್ರೆಯನ್ನು ಈ ಕೇಸ್‌ನಿಂದ ಖುಲಾಸೆಗೊಳಿಸಲಾಗಿತ್ತು. ಜೋಧ್‌ಪುರದ ಟ್ರಯಲ್ ಕೋರ್ಟ್ ಏಪ್ರಿಲ್ 5, 2018 ರಂದು ಸಲ್ಮಾನ್ ಖಾನ್ ಅವರನ್ನು ದೋಷಿಯೆಂದು ಘೋಷಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಸಲ್ಮಾನ್ ಖಾನ್ ಅವರ ಕಾನೂನು ತಂಡವನ್ನು ದೇವ್ ಆನಂದ್ ಗೆಹ್ಲೋಟ್ ಮುನ್ನಡೆಸಿದ್ದರು, ಮತ್ತು ಧನಕರ್ ಅವರ ಕಾನೂನು ಪರಿಣತಿಯನ್ನು ಜಾಮೀನು ಪ್ರಕ್ರಿಯೆಗಾಗಿ ತಂದರು. ಅವರ ಕಾರ್ಯತಂತ್ರದ ಕಾನೂನು ಹಸ್ತಕ್ಷೇಪ ನಿರ್ಣಾಯಕವಾಯಿತು.
ಏಪ್ರಿಲ್ 7, 2018 ರಂದು ಸಲ್ಮಾನ್ ಖಾನ್‌ಗೆ ಶಿಕ್ಷೆ ವಿಧಿಸಿದ 2 ದಿನಗಳ ಬಳಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರು ಜಾಮೀನು ಮಂಜೂರು ಮಾಡಿದರು. ಸಲ್ಮಾನ್ ಖಾನ್ ಅವರು ಜೋಧ್‌ಪುರ ಸೆಂಟ್ರಲ್ ಜೈಲಿನಲ್ಲಿ 2 ರಾತ್ರಿಗಳನ್ನು ಕಳೆದಿದ್ದರು.
ಕೋರ್ಟ್ ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು, ಏಪ್ರಿಲ್ 7, 2018 ರಂದು ಕೋರ್ಟ್‌ನಲ್ಲಿ ಹಾಜರಾಗಬೇಕು ಎಂಬ ಷರತ್ತಿನ ಜೊತೆಗೆ ರೂ. 50,000 ವೈಯಕ್ತಿಕ ಬಾಂಡ್ ಹಾಗೂ ತಲಾ ರೂ. 25,000 ರ ಎರಡು ಖಾತರಿಗಳ ಮೇಲೆ ಜಾಮೀನು ನೀಡಲಾಯ್ತು.
ಈ ಪ್ರಕರಣದಲ್ಲಿ ಧನಕರ್‌ರ ಪಾಲು, ಕಾನೂನು ಚಾತುರ್ಯ ಎದ್ದು ಕಂಡಿತು. ಇದು ಅವರ ವಕೀಲ ವೃತ್ತಿಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿದ್ದು, ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿತ್ತು. ಆಮೇಲೆ ಅವರು ಪಶ್ಚಿಮ ಬಂಗಾಳದ ಗವರ್ನರ್ ಆಗಿ ಕೆಲಸ ಆರಂಭಿಸಿ, 2022 ರಲ್ಲಿ ಭಾರತದ ಉಪರಾಷ್ಟ್ರಪತಿಯಾದರು.