- Home
- Entertainment
- Cine World
- ಗ್ಲಾಸ್ ಪೀಸ್‌ಗಳನ್ನೇ ಬಟ್ಟೆ ಮಾಡಿಕೊಂಡ ನಟಿ ಉರ್ಫಿ; ಹೇಗೆ ಕುಳಿತುಕೊಳ್ಳುತ್ತೀರಿ ಎಂದ ನೆಟ್ಟಿಗರು
ಗ್ಲಾಸ್ ಪೀಸ್‌ಗಳನ್ನೇ ಬಟ್ಟೆ ಮಾಡಿಕೊಂಡ ನಟಿ ಉರ್ಫಿ; ಹೇಗೆ ಕುಳಿತುಕೊಳ್ಳುತ್ತೀರಿ ಎಂದ ನೆಟ್ಟಿಗರು
ವಿಚಿತ್ರ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಉರ್ಫಿ ಇನ್ಸ್ಟಾಗ್ರಾಮ್ ನಲ್ಲಿ 3 ಮಿಲಿಯನ್ ಫಾಲೋವರ್ಸ್ ಪಡೆದರು. ಈ ಖುಷಿಯನ್ನು ಉರ್ಫಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

ವಿಚಿತ್ರ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಉರ್ಫಿ ಇನ್ಸ್ಟಾಗ್ರಾಮ್ ನಲ್ಲಿ 3 ಮಿಲಿಯನ್ ಫಾಲೋವರ್ಸ್ ಪಡೆದರು. ಈ ಖುಷಿಯನ್ನು ಉರ್ಫಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.
ಉರ್ಫಿ ಆಯೋಜನೆ ಮಾಡಿದ್ದ ಪಾರ್ಟಿಯಲ್ಲಿ ರಾಖಿ ಸಾವಂತ್ ಕೂಡ ಕಾಣಿಸಿಕೊಂಡಿದ್ದರು. ಅಕ್ಷಿತ್ ಸುಖಿಜಾ, ಪ್ರಿಯಾಂಕ್ ಶರ್ಮಾ ಮತ್ತು ಇನ್ನು ಅನೇಕರು ಕಾಣಿಸಿಕೊಂಡಿದ್ದರು. ಮುಂಬೈನ ಒಂದು ಕ್ಲಬ್ ನಲ್ಲಿ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಅನೇಕ ಸಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಉರ್ಫಿ ಬಟ್ಟೆ ಎಲ್ಲರ ಗಮನ ಸೆಳೆಯಿತು.
ಉರ್ಫಿ ಜಾವೇದ್ ಗ್ಲಾಸ್ ಪೀಸ್‌ಗಳನ್ನೇ ಬಟ್ಟೆಯಾಗಿ ಧರಿಸಿದ್ದರು. ಈ ಬಟ್ಟೆ ಬರೋಬ್ಬರಿ 20 ಕೆಜಿ ಇದೆಯಂತೆ. ಉರ್ಫಿಯ ಗ್ಲಾಸ್ ಬಟ್ಟೆ ನೋಡಿ ನೆಟ್ಟಿಗರು ಹೇಗೆ ಕುಳಿತುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ ಪಾರ್ಟಿಯಲ್ಲಿ ಇದೇ ಬಟ್ಟೆ ಧರಿಸಿ ಡಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಗ್ಲಾಸ್ ಧರಿಸಿ ಹೇಗೆ ಓಡಾಡಿದರು ಎನ್ನುವುದು ಅಭಿಮಾನಿಗಳ ಕುತೂಹಲ ಆಗಿದೆ.
3 ಮಿಲಿಯನ್ ಫಾಲೋವರ್ಸ್ ಹೊಂದಿದ ಖುಷಿಯನ್ನು ಉರ್ಫಿ ಕೇಕ್ ಕತ್ತರಿಸಿ ಆಚರಣೆ ಮಾಡಿದರು. ಅನೇಕ ಟಿವಿ ಸೆಲೆಬ್ರಿಟಿಗಳು ಉರ್ಫಿಗೆ ಸಾಥ್ ನೀಡಿದ್ದರು. ಪಾರ್ಟಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿದರು. ಉರ್ಫಿಯ ಪಾರ್ಟಿ ಫೋಟೋಗಳು ವೈರಲ್ ಆಗಿವೆ.
ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಉರ್ಫಿಯ ಹಾಟ್ ಅವತಾರ ಕಂಡು ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದಾರೆ.
ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.
ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉರ್ಫಿ ಜನ ಏನು ಹೇಳುತ್ತಾರೆ ಎನ್ನುವುದು ನನಗೆ ಮ್ಯಾಟರ್ ಆಗಲ್ಲ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.