ಉರ್ಫಿ ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದರ ಹಿಂದಿದೆಯಂತೆ ದೊಡ್ಡ ಕಾರಣ; ಏನದು ನೋಡಿ
ನಟಿ ಉರ್ಫಿ ಜಾವೆದ್ ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದು ಯಾಕೆ ಎಂದು ಬಹಿರಂಗ ಪಡಿಸಿದ್ದಾರೆ.
ನಟಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರ ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಸುದ್ದು ಸುದ್ದಿಯಲ್ಲಿರುವ ನಟಿ. ತನ್ನ ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಹೆಚ್ಚು ಫೇಮಸ್ ಆಗಿದ್ದಾರೆ. ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬರುತ್ತಾರೆ ಉರ್ಫಿ. ವಿಚಿತ್ರವಾದ ಬಟ್ಟೆ ಧರಿಸುವ ಜೊತೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೂ ಕಾಣಿಸಿಕೊಳ್ಳುತ್ತಾರೆ.
ಅರೆಬೆತ್ತಲಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಒಂದಿಷ್ಟು ವಿವಾದಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಉರ್ಫಿ ವಿರುದ್ಧ ಬಿಜೆಪಿ ಸದಸ್ಯೆಯೊಬ್ಬರು ದೂರು ಕೂಡ ದಾಖಲಿಸಿದ್ದರು. 'ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದರು. ಆದರೆ ಉರ್ಫಿ ಸರಿಯಾಗಿ ತಿರುಗೇಟು ನೀಡಿದ್ದರು. ಬಿಜೆಪಿ ಸದಸ್ಯೆಗೆ ಅಶ್ಲೀಲತೆಯ ಪಾಠ ಮಾಡಿದ್ದರು.
ಉರ್ಫಿ ಫ್ಯಾಷನ್ ಸೆನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದಾ ಅರೆಬೆತ್ತಲಾಗಿ ಕ್ಯಾಮರಾ ಮುಂದೆ ಪೋಸ್ ನೀಡುತ್ತಿರುತ್ತಾರೆ. ಸದಾ ಯಾಕೆ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದು ಎಂದು ಉರ್ಫಿ ಬಹಿರಂಗ ಪಡಿಸಿದ್ದಾರೆ. ಬಟ್ಟೆ ಯಾಕೆ ಹಾಕಲ್ಲ ಎಂದು ಉರ್ಫಿ ಜಾವೆದ್ ವಿವರಿಸಿದ್ದಾರೆ.
ವಿಡಿಯೋ ಮೂಲಕ ಅರೆಬೆತ್ತಲಾಗುವುದರ ಹಿಂದಿನ ಕಾರಣ ಬಹಿರಂಗ ಪಡಿಸಿದ್ದಾರೆ. 'ನನಗೆ ಬಟ್ಟೆ ಎಂದರೆ ಅಕ್ಷರಶಃ ಅಲರ್ಜಿ' ಎಂದು ಉರ್ಫಿ ಹೇಳಿದ್ದಾರೆ. ಉಣ್ಣೆಯ ಬಟ್ಟೆ ಹಾಕಿದ ಬಳಿಕ ದೇಹದಲ್ಲಿ ಬೊಬ್ಬೆ ಬಂತು. ಹಾಗಾಗಿ ಬಟ್ಟೆ ಹಾಕೋದನ್ನು ಬಿಟ್ಟೆ ಎಂದು ಹೇಳಿದ್ದಾರೆ. ಈಗ ನಿಮಗೆ ಗೊತ್ತಾಯಿತಾ ನಾನು ಯಾಕೆ ಬಟ್ಟೆ ಹಾಕಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಇಷ್ಟೆ ಬಟ್ಟೆ ಹಾಕುವುದು ಎಂದು ಹೇಳಿದ್ದಾರೆ.
ಬಿಜೆಪಿ ಸದಸ್ಯೆ ಚಿತ್ರಾ ವಾಘ್ ನಟಿ ಉರ್ಫಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಉರ್ಫಿ ಕಪ್ಪು ಬಣ್ಣದ ಬಗ್ಗೆ ಧರಿಸಿದ್ದ ವಿಡಿಯೋವನ್ನು ಶೇರ್ 'ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ. ಉರ್ಫಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. 'ಒಂದು ಕಡೆ ಮುಗ್ಧ ಹಿಡುಗಿಯರು ಈ ವಿಕೃತಿಗೆ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಹುಡುಗಿ ವಿಕೃತಿಯನ್ನು ಹರಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ. ಉರ್ಫಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿತ್ರಾ ಮುಂಬೈ ಪೊಲೀಸ್ ಆಯುಕ್ತರಿಗೆ ದೂರಿ ನೀಡಿದ್ದಾರೆ.
ಬಿಜೆಪಿ ಸದಸ್ಯೆಗೆ ಉರ್ಫಿ ಸರಿಯಾಗಿ ತಿರುಗೇಟು ನೀಡಿದ್ದರು 'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ (ಖಾಸಗಿ ಭಾಗಗಳು) ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.