ಅಯ್ಯೋ..! ಸರಿಯಾಗಿ ಬಟ್ಟೆ ಹಾಕಳಮ್ಮ; ಅರೆಬೆತ್ತಲಾದ ಉರ್ಫಿಗೆ ನೆಟ್ಟಿಗರ ಕ್ಲಾಸ್
ಅರೆಬೆತ್ತಲಾಗಿ ಕ್ಯಾಮರಾ ಮುಂದೆ ಬಂದಿರುವ ಉರ್ಫಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ್ೃ
ನಟಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರ ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಸುದ್ದು ಸುದ್ದಿಯಲ್ಲಿರುವ ನಟಿ. ತನ್ನ ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಹೆಚ್ಚು ಫೇಮಸ್ ಆಗಿದ್ದಾರೆ. ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬರುತ್ತಾರೆ ಉರ್ಫಿ. ವಿಚಿತ್ರವಾದ ಬಟ್ಟೆ ಧರಿಸುವ ಜೊತೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೂ ಕಾಣಿಸಿಕೊಳ್ಳುತ್ತಾರೆ.
ಇದೀಗ ಮತ್ತೆ ಅರೆಬೆತ್ತಲಾಗಿ ಬಂದಿರುವ ಉರ್ಫಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಾಪ್ ಲೆಸ್ ಆಗಿ ಕಾಣಿಸಿಕೊಂಡಿರುವ ಉರ್ಫಿ ಬೆಳಗ್ಗೆಯ ತಿಂಡಿ ತಿನ್ನುತ್ತಿದ್ದಾರೆ. ಟಾಪ್ ಧರಿಸದೇ ಹಾಗೆ ಕುಳಿತಿರುವ ಉರ್ಫಿ ಎದೆಯ ಭಾಗಕ್ಕೆ ಪ್ಲೇಟ್ ಮತ್ತು ಜ್ಯೂಸ್ ಅಡ್ಡ ಹಿಡಿದುಕೊಂಡಿದ್ದಾರೆ.
ಉರ್ಫಿ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಯಾವಾಗಲೂ ಅರೆಬೆತ್ತಲಾಗಿ ಕ್ಯಾಮರಾ ಮುಂದೆ ಬರುವ ಉರ್ಫಿಯನ್ನು ನೋಡಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. 'ನಗ್ನ ಪೋಸ್ ಕೊಡುವುದು ಕೂಡ ಫ್ಯಾಷನ್ ಹಾ' ಎಂದು ಕೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕ್ಯಾಮರಾ ಮ್ಯಾನ್ ಪರಿಸ್ಥಿತಿ ಏನು ಎಂದು ಕೇಳುತ್ತಿದ್ದಾರೆ. ಪ್ಲೇಟ್ ಮತ್ತು ಜ್ಯೂಸ್ ಯಾಕೆ ಹಿಡಿದುಕೊಂಡಿದ್ದೀರಾ ಅದನ್ನು ಕೂಡ ತೆಗೆದು ಬಿಡಿ ಎನ್ನುತ್ತಿದ್ದಾರೆ.
ಅಂದಹಾಗೆ ಉರ್ಫಿ ಯಾವುದೇ ಟ್ರೋಲ್‌ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿಬಾರಿಯೂ ಟ್ರೋಲ್ ಮಾಗುತ್ತಾರೆ. ಆದರೂ ವಿಚಿತ್ರವಾಗಿ ಬಟ್ಟೆ ಧರಿಸುವುದನ್ನು ಬಿಡಲ್ಲ. ಇತ್ತೀಚಿಗಷ್ಟೆ ಉರ್ಫಿ ವಿಚಿತ್ರ ಬಟ್ಟೆ ಧರಿಸಿ ಅರೆಸ್ಟ್ ಆಗಿದ್ದರು. ದುಬೈನಲ್ಲಿ ದೊಡ್ಡ ಸುದ್ದಿಯಾಗಿದ್ದರು.
ವಿಚಿತ್ರ ಬಟ್ಟೆ ಧರಿಸಿದ್ದ ಉರ್ಫಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ಉರ್ಫಿ ಸ್ಪಷ್ಟನೆ ನೀಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು.
'ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ಸುಳ್ಳು. ಬೇರೆ ಯಾವುದೋ ಕಾರಣಕ್ಕೆ ಪೊಲೀಸರು ಶೂಟ್ ನಿಲ್ಲಿಸಲು ಬಂದಿದ್ದರೆ ಅದಕ್ಕೂ ನನ್ನ ಉಡುಪಿಗೂ ಯಾವ ಸಂಬಂಧವಿಲ್ಲ' ಎಂದಿದ್ದರು.
'ಶೂಟಿಂಗ್ ನಡೆಸಲು ನಮಗೆಂದು ಸಮಯ ಕೊಟ್ಟಿದ್ದರು ಆದರೆ ಪ್ರೊಡಕ್ಷನ್ ಟೀಂ ಸಮಯಕ್ಕೆ ಸರಿಯಾಗಿ ಮುಗಿಸದ ಕಾರಣ ನಾವು ಅಲ್ಲಿಂದ ಹೊರಡಬೇಕಿತ್ತು.ಈ ಘಟನೆಗೂ ನನ್ನ ಉಡುಪಿಗೂ ಯಾವ ಸಂಬಂಧವಿಲ್ಲ. ಮರುದಿನ ನಾವು ಚಿತ್ರೀಕರಣ ಶುರು ಮಾಡಿದೆವು ಹೀಗಾಗಿ ಏನೂ ಸಮಸ್ಯೆ ಇಲ್ಲ' ಎಂದು ಉರ್ಫಿ ಕ್ಲಾರಿಟಿ ನೀಡಿದ್ದರು.