ಅರೆಬೆತ್ತಲಾಗಿ ಲಡ್ಡು ತಿನ್ನುತಾ ದೀಪಾವಳಿಗೆ ವಿಶ್ ಮಾಡಿದ ನಟಿ; ಮಿನಿ ಪಾರ್ನ್ ಪೇಜ್ ಎಂದ ನೆಟ್ಟಿಗರು
ದೀಪಾವಳಿಯ ಸಂಭ್ರಮದಲ್ಲಿ ನಟಿ ಉರ್ಫಿ ಅರೆಬೆತ್ತಲಾಗಿ ಅಚ್ಚರಿ ಮೂಡಿಸಿದ್ದಾರೆ. ಅರೆಬೆತ್ತಲಾಗಿರುವ ಉರ್ಫಿ ಲಡ್ಡು ತಿನ್ನುತ್ತಾ ಹಬ್ಬಕ್ಕೆ ವಿಶ್ ಮಾಡಿದ್ದಾರೆ.
ನಟಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ವಿಭಿನ್ನ ಉಡುಗೆ ತೊಡುಗೆ ಮೂಲಕವೇ ಉರ್ಫಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ವಿಚಿತ್ರ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ವಿಚಿತ್ರ ಅವತಾರದಲ್ಲೇ ಕಾಣಿಸಿಕೊಳ್ಳುತ್ತಾರೆ.
ತುಂಡುಡುಗೆಯಲ್ಲಿಯೇ ಹೆಚ್ಚು ಮಿಂಚುವ ಉರ್ಫಿ ನೆಟ್ಟಿಗರ ಕಣ್ಣು ಕುಕ್ಕುತ್ತಿರುತ್ತಾರೆ. ಇದೀಗ ದೀಪಾವಳಿಯ ಸಂಭ್ರಮದಲ್ಲಿ ಅರೆಬೆತ್ತಲಾಗಿ ಅಚ್ಚರಿ ಮೂಡಿಸಿದ್ದಾರೆ. ಅರೆಬೆತ್ತಲಾಗಿರುವ ಉರ್ಫಿ ಲಡ್ಡು ತಿನ್ನುತ್ತಾ ಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಉರ್ಪಿ ಅರೆ ಬೆತ್ತಲಾಗಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಉರ್ಫಿ ಅವತಾರ ಕೊಂಡ ನೆಟ್ಟಿಗರು ಓವರ್ ಆಯ್ತು ಎನ್ನುತ್ತಿದ್ದಾರೆ. ಇನ್ನು ಕೆವಲರು ನಿನ್ನ ಸಾಮಾಜಿಕ ಜಾಲತಾಣದ ಖಾತೆ ಮಿನಿ ಪಾರ್ನ್ ಪೇಜ್ ಆಗಿದೆ ಎನ್ನುತ್ತಿದ್ದಾರೆ. ಇನ್ನು ಅನೇಕರು ಹಬ್ಬದ ಸಮಯದಲ್ಲಾದರೂ ಬಟ್ಟೆ ಧರಿಸು ಎನ್ನುತ್ತಿದ್ದಾರೆ.
ಉರ್ಫಿಯ ವಿಚಿತ್ರ ಅವತಾರ ನೋಡಿ ಅನೇಕರು ದಂಗಾಗಿದ್ದಾರೆ. ಉರ್ಫಿ ಫೋಟೋಗೆ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಯಾವುದಕ್ಕೂ ಹೆಚ್ಚು ತಲೆಕೆಡೆಸಿಕೊಳ್ಳದ ಉರ್ಫಿ ತಾನಾಯ್ತು ತನ್ನ ಸ್ಟೈಲ್ ಆಯ್ತು ಎನ್ನುವ ಹಾಗೆ ಇದ್ದಾರೆ. ವಿಚಿತ್ರ ಬಟ್ಟೆ ಧರಿಸುವುದನ್ನು ಮಾತ್ರ ಮಿಸ್ ಮಾಡಲ್ಲ.
ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಧಾರಾವಾಹಿ ಮಾಡುತ್ತಿಲ್ಲ. ಆದರೂ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಉರ್ಫಿ ಬಳಿಕ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ನಿಂದ.
ಕರಣ್ ಜೋಹರ್ ನಡೆಸಿಕೊಟ್ಟ ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಸ್ಪರ್ಧಿಸಿದ್ದರು. ಬಳಿಕ ಉರ್ಫಿ ತನ್ನ ವಿಚಿತ್ರ ಬಟ್ಟೆ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆದರು. ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ ಹಾಗೂ ಏರ್ಪೋರ್ಟ್‌ಗೂ ಎಂಟ್ರಿ ಕೊಡುತ್ತಾರೆ.