- Home
- Entertainment
- Cine World
- Urfi Javed Blue Dress: ನೀಲಿ ಡ್ರೆಸ್‌ನಲ್ಲಿ ಉರ್ಫಿ, ಕಟ್ & ಪೇಸ್ಟ್ ಅಂತಿದ್ದಾರೆ ನೆಟ್ಟಿಗರು
Urfi Javed Blue Dress: ನೀಲಿ ಡ್ರೆಸ್‌ನಲ್ಲಿ ಉರ್ಫಿ, ಕಟ್ & ಪೇಸ್ಟ್ ಅಂತಿದ್ದಾರೆ ನೆಟ್ಟಿಗರು
ಬಿಗ್‌ಬಾಸ್ ನಟಿ ಉರ್ಫಿ ಜಾವೇದ್ ಬ್ಲೂ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ನೀಲಿ ಡ್ರೆಸ್‌ನಲ್ಲಿ ಮಿಂಚಿರೋ ನಟಿಯ ಡ್ರೆಸ್ ತುಂಬಾ ವಿಚಿತ್ರವಾಗಿದೆ.

ಕಿರುತೆರೆ ನಟಿ ಉರ್ಫಿ ಜಾವೇದ್ ಈಗ ಲೇಟೆಸ್ಟ್ ಬ್ಲೂ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳ್ಳಿಗಳೂ, ತೂತುಗಳೂ ಇರುವ ನಟಿಯ ಡ್ರೆಸ್ ವಿಚಿತ್ರವಾಗಿದ್ದು ಇದೇನು ಕಟ್ & ಪೇಸ್ಟಾ ಅಂತಿದ್ದಾರೆ ನಟ್ಟಿಗರು
ಗಾಢ ನೀಲಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಟ್ರೋಲ್‌ಗಳನ್ನು ಲೆಕ್ಕಿಸುವುದೇ ಇಲ್ಲ. ಹಲವು ಬಾರಿ ತಮ್ಮ ಫ್ಯಾಷನ್‌ನಿಂದ ಟ್ರೋಲ್ ಆದ ಮೇಲೆಯೂ ನಟಿ ಇದೇ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಲಾಂಗ್ ಪೋನಿಯಲ್ಲಿ ಲ್ಯಾವೆಂಡರ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು ಉರ್ಫಿ. ಬಿಗ್‌ಬಾಸ್ ಒಟಿಟಿಗೆ ಎಂಟ್ರಿ ಕೊಟ್ಟು ನಂತರ ತಮ್ಮ ಡ್ರೆಸ್ ನಿಂದಾಗಿಯೇ ಪೇಮಸ್ ಆಗಿದ್ದಾರೆ ಈಕೆ.
ಕಿರುತೆರೆಯಲ್ಲಿ ಮಿಂಚಿ ಬಿಗ್‌ಬಾಸ್ ಒಟಿಟಿಯಲ್ಲಿ ಸದ್ದು ಮಾಡಿ ನಂತರ ತಮ್ಮ ಡ್ರೆಸ್‌ನಿಂದಲೇ ಫೇಮಸ್ ಆಗಿರುವ ಮುಂಬೈನ ಕಲಾವಿದೆ. ವಿಚಿತ್ರ ಬಟ್ಟೆಗಳನ್ನು ಧರಿಸಿಯೇ ಹೆಡ್‌ಲೈನ್‌ನಲ್ಲಿ ಸ್ಥಾನ ಪಡೆಯುತ್ತಿರುವ ಯುವ ಕಲಾವಿದೆಯ ಫ್ಯಾಷನ್ ಸೆನ್ಸ್ ಬಗ್ಗೆ ಜನ ಎಷ್ಟೇ ಟೀಕಿಸಿದ್ರೂ ಈಕೆ ಮಾತ್ರ ಒಂಚೂರು ಕ್ಯಾರೇ ಅನ್ನಲ್ಲ. ಈಗ ಮದುವೆ ಬಗ್ಗೆ ಮಾತನಾಡಿದ್ದಾರೆ.
ತಾವು ಮದುವೆಯಾಗೋರು ಹೇಗಿರಬೇಕು ಎಂಬುದನ್ನು ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ಮದುವೆಯ ಪ್ಲಾನ್‌ಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದು ಅವಳು ಯಾವ ರೀತಿಯ ವ್ಯಕ್ತಿಯೊಂದಿಗೆ ಸಂತೋಷವಾಗಿರಲು ಬಯಸುತ್ತಾಳೆ ಎಂಬುದನ್ನು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬೋಲ್ಡ್ ಲುಕ್ ಮತ್ತು ಸ್ಟೈಲಿಷ್ ಫೋಟೋಗಳಿಗೆ ನಟಿ ಸ್ವೀಕರಿಸುವ ಟ್ರೋಲಿಂಗ್‌ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ನಾನು ಮುಸ್ಲಿಂ ಹುಡುಗಿ. ನಾನು ಸ್ವೀಕರಿಸುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಮುಸ್ಲಿಂ ಜನರಿಂದ. ನಾನು ಇಸ್ಲಾಮಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಏಕೆಂದರೆ ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ.
ಅವರು ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಈ ಕಾರಣದಿಂದ ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ. ಅವರು ನನ್ನನ್ನು ಟ್ರೋಲ್ ಮಾಡಲು ಕಾರಣವೆಂದರೆ ಅವರ ಧರ್ಮದ ಪ್ರಕಾರ ಅವರು ನಿರೀಕ್ಷಿಸುವ ರೀತಿಯಲ್ಲಿ ನಾನು ನಡೆದುಕೊಳ್ಳುವುದಿಲ್ಲ ಎಂದು ಉರ್ಫಿ ಜಾವೇದ್ ಇಂಡಿಯಾ ಟುಡೇ.ಇನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮದುವೆಯಾದ ಮೇಲೆ ಉರ್ಫಿ, ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ. ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ. ನಾನು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ, ಹಾಗಾಗಿ ನಾನು ಯಾರನ್ನು ಪ್ರೀತಿಸುತ್ತೇನೆ ಎಂದು ನಾನು ಹೆದರುವುದಿಲ್ಲ. ನಾವು ಯಾರನ್ನು ಬಯಸುತ್ತೇವೋ ಅವರನ್ನು ಮದುವೆಯಾಗಬೇಕು ಎಂದಿದ್ದಾರೆ.
ಧರ್ಮದ ಬಗ್ಗೆ ಅವರ ಅಭಿಪ್ರಾಯಗಳ ಬಗ್ಗೆ ಕೇಳಿದಾಗ, ಉರ್ಫಿ, ನನ್ನ ತಂದೆ ತುಂಬಾ ಸಂಪ್ರದಾಯವಾದಿ ವ್ಯಕ್ತಿ. ನಾನು 17 ವರ್ಷ ವಯಸ್ಸಿನವಳಾಗಿದ್ದಾಗ ಅವನು ನನ್ನನ್ನು ಮತ್ತು ನನ್ನ ಒಡಹುಟ್ಟಿದವರನ್ನು ನಮ್ಮ ತಾಯಿಯೊಂದಿಗೆ ಬಿಟ್ಟುಹೋದನು. ನನ್ನ ತಾಯಿ ತುಂಬಾ ಧಾರ್ಮಿಕ ಮಹಿಳೆ. ಆದರೆ ಅವರು ಎಂದಿಗೂ ತಮ್ಮ ಧರ್ಮವನ್ನು ನಮ್ಮ ಮೇಲೆ ಬಲವಂತಪಡಿಸಲಿಲ್ಲ.
ನನ್ನ ಒಡಹುಟ್ಟಿದವರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ. ನಾನು ಅನುಸರಿಸುವುದಿಲ್ಲ, ಆದರೆ ಅವರು ಅದನ್ನು ಎಂದಿಗೂ ನನ್ನ ಮೇಲೆ ಒತ್ತಾಯಿಸುವುದಿಲ್ಲ. ಅದು ಹೇಗಿರಬೇಕು. ನಿಮ್ಮ ಧರ್ಮವನ್ನು ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ಹೇರುವಂತಿಲ್ಲ. ಅದು ಹೃದಯದಿಂದ ಬರಬೇಕು, ಇಲ್ಲದಿದ್ದರೆ ನೀವು ಅಥವಾ ಅಲ್ಲಾ ಸಂತೋಷವಾಗಿರುವುದಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.