ಪಟೌಡಿ ವರಿಸಲು ಶರ್ಮಿಳಾ ಟ್ಯಾಗೋರ್ ಹಾಕಿದ್ದ ಕಂಡೀಷನ್ ನೋಡಿ!
60ರ ದಶಕದ ಬಾಲಿವುಡ್ ದಿವಾ ಶರ್ಮೀಳಾ ಟ್ಯಾಗೂರ್ ಚೆಲುವಿಗೆ ಅಂದಿನ ಟೀಮ್ ಇಂಡಿಯಾದ ನಾಯಕ ಮನ್ಸೂರ್ ಅಲಿ ಖಾನ್ ಪಡೌಟಿ ಗ್ಲೀನ್ ಬೌಲ್ದ್ ಆಗಿದ್ದರು. ಇವರ ಪ್ರೀತಿ ಹಾಗೂ ಮದುವೆಯ ನ್ಯೂಸ್ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಮದುವೆಯಾಗುವ ಮೊದಲು ಶರ್ಮಿಳಾ ಟ್ಯಾಗೋರ್ ಖಾನ್ ಪಟೌಡಿಗೆ ಒಂದು ಯೂನಿಕ್ ಕಂಡೀಷನ್ ಹಾಕಿದ್ದರಂತೆ. ಏನು ಗೊತ್ತಾ ಅದು?
ಬಾಲಿವುಡ್ ಹಾಗೂ ಕ್ರಿಕೆಟ್ ನಂಟು ಮೊದಲಿನಿಂದಲೂ ಇದೆ. ಅವುಗಳಲ್ಲಿ ಶರ್ಮಿಳಾ-ಪಡೌಡಿ ಜೋಡಿ ಸಕತ್ತೂ ಫೇಮಸ್.
ಆ ದಿನಗಳಲ್ಲಿ ಶರ್ಮಿಳಾ ಟ್ಯಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಮದುವೆ ಭಾರಿ ಸುದ್ದಿ ಮಾಡಿತ್ತು.
ಮನ್ಸೂರ್ ಭಾರತೀಯ ಕ್ರಿಕೆಟ್ ತಂಡದ ಕಿರಿಯ ನಾಯಕ ಮತ್ತು ಶರ್ಮಿಳಾ ಬಾಲಿವುಟ್‌ನ ದಿವಾ. ಇವರ ಜೋಡಿ ಸಖತ್ ಸ್ಟನ್ನಿಂಗ್ ಆಗಿತ್ತು
60ರ ದಶಕದಲ್ಲಿ ಅರಳಿದ ಇವರ ಲವ್‌ಸ್ಟೋರಿ ಹೆಡ್‌ಲೈನ್ ನ್ಯೂಸ್ ಆಗಿತ್ತು.
ಇಬ್ಬರೂ ಅನ್ಯ ಧರ್ಮೀಯರಾಗಿದ್ದರೂ, ಪ್ರೀತಿಯಲ್ಲಿ ಬೀಳುವುದನ್ನು ಮತ್ತು ಸುಂದರ ಕುಟುಂಬವನ್ನು ಪ್ರಾರಂಭಿಸುವುದನ್ನು ಯಾರಿಗೂ ತಡೆಯಲೂ ಸಾಧ್ಯವಾಗಲಿಲ್ಲ.
ಈ ಜೋಡಿ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ ಅವರ ಪ್ರೀತಿ ಎಲ್ಲಾ ಅಡೆತಡೆಗಳನ್ನು ದಾಟಿತು ಮತ್ತು ಇಬ್ಬರು 1969 ರಲ್ಲಿ ವಿವಾಹವಾದರು.
ಮದುವೆಯಾಗುವ ಮೊದಲು ಶರ್ಮಿಳಾ ಮನ್ಸೂರ್ ಮುಂದೆ ಒಂದು ಯೂನಿಕ್ ಕಂಡೀಷನ್ ಇಟ್ಟಿದ್ದರು.
ಮಾಧ್ಯಮ ವರದಿಯ ಪ್ರಕಾರ, ಪಂದ್ಯವೊಂದರಲ್ಲಿ ಮನ್ಸೂರ್ ಅಲಿ ಖಾನ್‌ಗೆ ಹ್ಯಾಟ್ರಿಕ್ ಸಿಕ್ಸರ್ಸ್ ಹೊಡೆಯಲು ಶರ್ಮಿಳಾ ಕೇಳಿದ್ದರು ಹಾಗೂ ಪಟೌಡಿ ಅದಕ್ಕೆ ಒಪ್ಪಿಕೊಂಡಿದ್ದರು ಕೂಡ.
ಸುಂದರವಾದ ಮ್ಯಾರೀಡ್ ಲೈಫ್ ಹೊಂದಿದ್ದ ಈ ಕಪಲ್ ಮೂರು ಮಕ್ಕಳಿಗೆ ಜನ್ಮ ನೀಡಿದರು.
ತನ್ನ ಎಲ್ಲಾ ಮಕ್ಕಳು ಯಶಸ್ವಿಯಾಗಿದ್ದಾರೆ ಮತ್ತು ಅವರ ದಾರಿಯಲ್ಲಿ ಬದುಕುತ್ತಾರೆ ಎಂದು ಶರ್ಮಿಳಾ ಒಮ್ಮೆ ತಮ್ಮ ಮಕ್ಕಳ ಬಗ್ಗೆ ಹೇಳಿದ್ದರು.