- Home
- Entertainment
- Cine World
- ಬಾಲಿವುಡ್ ನ ಈ ಸೂಪರ್ ಸ್ಟಾರ್ ನಟಿಯರಿಗೆ ಒಬ್ಬರ ಮುಖ ಇನ್ನೊಬ್ಬರಿಗೆ ಕಂಡ್ರೇನೆ ಆಗಲ್ಲ!
ಬಾಲಿವುಡ್ ನ ಈ ಸೂಪರ್ ಸ್ಟಾರ್ ನಟಿಯರಿಗೆ ಒಬ್ಬರ ಮುಖ ಇನ್ನೊಬ್ಬರಿಗೆ ಕಂಡ್ರೇನೆ ಆಗಲ್ಲ!
ಬಾಲಿವುಡ್‌ನಲ್ಲಿ ಸ್ಟಾರ್‌ಗಳ ನಡುವೆ ಜಗಳ ಸಾಮಾನ್ಯ. ಇಂದು ನಾವು ಒಬ್ಬರನ್ನೊಬ್ಬರು ನೋಡಿದ್ರೆ ಶತ್ರುಗಳಂತೆ ವರ್ತಿಸುವ ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಅವರಲ್ಲಿ ಯಾರೆಲ್ಲಾ ಇದ್ದಾರೆ ನೋಡಿ.

ಬಾಲಿವುಡ್‌ನಲ್ಲಿ ಸ್ಪರ್ಧೆ ಮತ್ತು ಈಗೋ ಫೈಟ್ (ego fight) ಸಾಮಾನ್ಯ. ಅನೇಕ ಬಾರಿ, ಸಹನಟರ ನಡುವಿನ ಜಗಳಗಳು ಮತ್ತು ಪರಸ್ಪರ ಭಿನ್ನಾಭಿಪ್ರಾಯದ ಸುದ್ದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇಂದು ನಾವು ಒಬ್ಬರನ್ನೊಬ್ಬರು ನೋಡಿದ್ರೇನೆ ಶತ್ರುಗಳಂತೆ ವರ್ತಿಸುವ ಕೆಲವು ನಟಿಯರ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ ಅನೇಕ ಪ್ರಸಿದ್ಧ ನಟಿಯರ ಹೆಸರುಗಳು ಸೇರಿವೆ. ಅವರು ಯಾರೆಂದು ನೋಡೋಣ,
ಕರೀನಾ ಕಪೂರ್ ಮತ್ತು ಬಿಪಾಶಾ ಬಸು
ಕರೀನಾ ಕಪೂರ್ ಮತ್ತು ಬಿಪಾಶಾ ಬಸು (Kareena Kapoor and Bipasha Basu) 2001 ರ 'ಅಜ್ನಬೀ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು ಮತ್ತು ಈ ಸಮಯದಲ್ಲಿ, ಇಬ್ಬರ ನಡುವೆ ಆರಂಭವಾದ ಕಲಹ ದೊಡ್ಡ ಜಗಳಕ್ಕೂ ಕಾರಣವಾಗಿತ್ತು. ವರದಿಗಳ ಪ್ರಕಾರ, 'ಅಜ್ನಬೀ' ಚಿತ್ರದ ಸೆಟ್‌ನಲ್ಲಿ, ಕರೀನಾ ಕಪೂರ್ ಮತ್ತು ಬಿಪಾಶಾ ಬಸು ನಡುವೆ ಬಟ್ಟೆಗಾಗಿ ಜಗಳ ನಡೆದಿತ್ತು. ಆ ಚಿತ್ರದ ಸೆಟ್‌ಗಳಲ್ಲಿ ಸಾಕಷ್ಟು ಗದ್ದಲ ಉಂಟಾಯಿತು ಮತ್ತು ಕರೀನಾ ಕಪೂರ್ ಬಿಪಾಶಾ ಬಸುಗೆ ಕಪಾಳಮೋಕ್ಷ ಮಾಡಿದ್ದರು.
ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿ
ರಾಣಿ ಮುಖರ್ಜಿ ಮತ್ತು ಐಶ್ವರ್ಯಾ ರೈ (Rani Mukherjee and Aishwarya Rai) ಇಲ್ಲಿಯವರೆಗೆ ಪರಸ್ಪರ ಮಾತನಾಡದೇ ಇರುವುದಕ್ಕೆ ಹಲವು ಕಾರಣಗಳಿದ್ದವು. ಮೊದಲು ರಾಣಿ ಅಭಿಷೇಕ್ ನನ್ನು ಮದುವೆಯಾಗಲಿದ್ದಳು, ಆದರೆ ಯಾವುದೋ ಕಾರಣದಿಂದ ಈ ಸಂಬಂಧ ಮುರಿದು ಬಿತ್ತು. 'ಬಂಟಿ ಔರ್ ಬಬ್ಲಿ' ಚಿತ್ರದ ಸಮಯದಲ್ಲಿ, ರಾಣಿ ಮತ್ತು ಅಭಿಷೇಕ್ ಪರಸ್ಪರ ಹತ್ತಿರವಾದರು, ಇದರಿಂದಾಗಿ ಐಶ್ವರ್ಯಾ ಕೋಪಗೊಂಡಿದ್ದರು ಎನ್ನಲಾಗುತ್ತೆ.
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್
ದೀಪಿಕಾ ಮತ್ತು ಕತ್ರಿನಾ (Katrina Kaif) ನಡುವಿನ ಮನಸ್ತಾಪಕ್ಕೆ ದೊಡ್ಡ ಕಾರಣ ರಣಬೀರ್ ಕಪೂರ್. ರಣಬೀರ್ ಜೊತೆ ಸಂಬಂಧದಲ್ಲಿರುವಾಗ ದೀಪಿಕಾ ಅವರು ರಣಬೀರ್ ಕತ್ರಿನಾಗೆ ಹತ್ತಿರವಾಗುತ್ತಿದ್ದಾರೆ ಎಂದು ಅನುಮಾನಿಸಿದ್ದರು. ರಣಬೀರ್ ಮತ್ತು ಕತ್ರಿನಾ ಪ್ರೇಮ ಸಂಬಂಧದ ಸುದ್ದಿ ಬಂದಾಗ, ದೀಪಿಕಾ ಕತ್ರಿನಾ ಅವರಿಂದ ದೂರವಾದರು.
ಕಂಗನಾ ರಣಾವತ್ ಮತ್ತು ಆಲಿಯಾ ಭಟ್
ಕಂಗನಾ ನೇರ ನುಡಿಗೆ ಹೆಸರುವಾಸಿ, ಆಕೆ ಆಲಿಯಾಳನ್ನು (Alia Bhatt) ಹಲವು ಬಾರಿ ಗುರಿಯಾಗಿಸಿಕೊಂಡು ಕರಣ್ ಜೋಹರ್ ಅವರ ನೆಪೋ ಕಿಡ್ ಎಂದು ಕರೆದಿದ್ದರು. ಆರಂಭದಲ್ಲಿ ಈ ಬಗ್ಗೆ ಆಲಿಯಾ ಮೌನವಾಗಿದ್ದಳು, ಆದರೆ ನಂತರ ಕಂಗನಾ ಅವರ ತೀಕ್ಷ್ಣ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದಳು.
ಪ್ರಿಯಾಂಕಾ ಚೋಪ್ರಾ ಮತ್ತು ಗೌರಿ ಖಾನ್
ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) 2006 ರಲ್ಲಿ ಬಿಡುಗಡೆಯಾದ 'ಡಾನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅವರ ಜೋಡಿ ತುಂಬಾ ಇಷ್ಟವಾಯಿತು. ಇದಾದ ನಂತರ, ಇಬ್ಬರೂ 'ಡಾನ್ 2' ನಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡರು. 'ಫಿಲ್ಮಿ ಬೀಟ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶಾರುಖ್ ಮತ್ತು ಪ್ರಿಯಾಂಕಾ ಅವರ ಸ್ನೇಹದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಶಾರುಖ್ ಮತ್ತು ಪ್ರಿಯಾಂಕಾ ಲವ್ ಮಾಡ್ತಿದ್ದಾರೆ ಎನ್ನುವ ಗುಸುಗುಸು ಸುದ್ದಿ ಗೌರಿ ಖಾನ್ ಅವರ ಕಿವಿಗೂ ಬಿದ್ದವು. ಈ ಸಂದರ್ಭಾದಲ್ಲಿ ಗೌರಿ (Gouri Khan) ತುಂಬಾನೆ ಕೋಪಗೊಂಡು, ಶಾರುಖ್‌ಗೆ ಬೆದರಿಕೆ ಕೂಡ ಹಾಕಿದ್ದರು. ಇದಾದ ಬಳಿಕ ಗೌರಿ ಮತ್ತು ಪ್ರಿಯಾಂಕಾ ಚೋಪ್ರಾ ಒಬ್ಬರ ಮುಖ ಇನ್ನೊಬ್ಬರು ನೋಡೋದು ಇಲ್ಲ.
ಸೋನಮ್ ಕಪೂರ್ ಮತ್ತು ದೀಪಿಕಾ ಪಡುಕೋಣೆ
'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಸೋನಂ ದೀಪಿಕಾ (Deepika Padukone) ಅವರ ಫ್ಯಾಷನ್ ಸೆನ್ಸ್ ಬಗ್ಗೆ ಅಪಹಾಸ್ಯ ಮಾಡಿದ್ದರಿಂದ ಅವರ ಸಂಬಂಧ ಹಳಸಿತ್ತು. ಆದಾಗ್ಯೂ, ಈಗ ಇಬ್ಬರೂ ತಮ್ಮ ಸಂಬಂಧವನ್ನು ಸ್ವಲ್ಪಮಟ್ಟಿಗೆ ಸರಿ ಪಡಿಸಿದ್ದಾರೆ, ಆದರೆ ಇನ್ನೂ ಅವರ ಬಾಂಧವ್ಯ ಸರಿಯಾಗಿಲ್ಲ.
ತಾಪ್ಸಿ ಪನ್ನು ಮತ್ತು ಕಂಗನಾ ರನೌತ್
ತಾಪ್ಸಿ ಪನ್ನು ಮತ್ತು ಕಂಗನಾ ರನೌತ್ (Kangana Ranaut) ತಮ್ಮ ನೇರ ನುಡಿಗೆ ಹೆಸರುವಾಸಿ. ಇಬ್ಬರೂ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದಾರೆ . ಜೊತೆಗೆ ಪರಸ್ಪರ ವಿರುದ್ಧ ವ್ಯಂಗ್ಯವಾಡುತ್ತಲೇ ಇರುತ್ತಾರೆ.