MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
KPSC Recruitment Scam
Indian Air Force
Bidadi Township Row
Bengaluru HMT Watch Sales
Karnataka Excise Department
Bengaluru Traffic Police Assault Case
Belagavi Hidakal Reservoir
Dakshina Kannada Vande Bharat Train
Muslim Faces in BJP New Team
Karnataka Food Inspection
  • Home
  • Entertainment
  • Cine World
  • ಪತ್ನಿ ಜೊತೆಗೆ ಪ್ಯಾಚಪ್, ತ್ರಿಶಾ-ವಿಜಯ್ ಬ್ರೇಕಪ್! ಬರ್ತಡೇಗೆ ವಿಶ್ ಬದಲು ಇನ್‌ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ!

ಪತ್ನಿ ಜೊತೆಗೆ ಪ್ಯಾಚಪ್, ತ್ರಿಶಾ-ವಿಜಯ್ ಬ್ರೇಕಪ್! ಬರ್ತಡೇಗೆ ವಿಶ್ ಬದಲು ಇನ್‌ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ!

ತಮಿಳುನಾಡು ಸಿಎಂ ವಿಜಯ್ ತಮ್ಮ ಪತ್ನಿಯೊಂದಿಗೆ ಒಂದಾಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ, ನಟಿ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಪ್ರತಿ ವರ್ಷ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುತ್ತಿದ್ದ ತ್ರಿಶಾ ಈ ಬಾರಿ ಮೌನವಾಗಿದ್ದು,  ಬ್ರೇಕಪ್ ಎನ್ನಲಾಗಿದೆ.

2 Min read
Author : Gowthami K
Published : Jun 23 2026, 03:19 PM IST
Share this Photo Gallery
  • FB
  • TW
  • Linkdin
  • Whatsapp
16
ಇಬ್ಬರ ಬ್ರೇಕಪ್‌!
Image Credit : X

ಇಬ್ಬರ ಬ್ರೇಕಪ್‌!

ಚೆನ್ನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ತ್ರಿಶಾ ಕೃಷ್ಣನ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಗೆಳೆಯ ತಮಿಳುನಾಡಿನ ಸಿಎಂ ವಿಜಯ್ ಜೋಸೆಫ್ ಅವರು ತಮ್ಮ ಪತ್ನಿ ಸಂಗೀತಾ ಜೊತೆಗೆ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ನಟಿ ತ್ರಿಷಾ ಹಾಗೂ ಮಾಜಿ ಸಹನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರ ವೈಯಕ್ತಿಕ ಸಂಬಂಧದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳ ನಡುವೆಯೇ ಈ ಹೊಸ ಬೆಳವಣಿಗೆ ಸಂಭವಿಸಿದ್ದು, ಅಭಿಮಾನಿಗಳು ಹದ್ದಿನ ಕಣ್ಣಿಟ್ಟು ಇಂಟರ್ನೆಟ್‌ನಲ್ಲಿ ತರಹೇವಾರಿ ಚರ್ಚೆಗಳನ್ನು ಆರಂಭಿಸಿದ್ದಾರೆ. ಪತ್ನಿ ಜೊತೆಗೆ ಒಂದಾಗುತ್ತಿರುವ ಸುದ್ದಿ ಬೆನ್ನಲ್ಲೇ, ತ್ರಿಶಾ ಮತ್ತು ವಿಜಯ್ ಸಂಬಂಧ ಮುರಿದುಬಿತ್ತು ಎಂಬ ವದಂತಿಗಳು ಈ ಭಾರೀ ಸುದ್ದಿಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹುಟ್ಟುಹಬ್ಬದ ಬೆನ್ನಲ್ಲೇ ಅನ್‌ಫಾಲೋ ಬಝ್!
Image Credit : ChatGPT

ಹುಟ್ಟುಹಬ್ಬದ ಬೆನ್ನಲ್ಲೇ ಅನ್‌ಫಾಲೋ ಬಝ್!

ನಟ ವಿಜಯ್ ಇತ್ತೀಚೆಗಷ್ಟೇ ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಈ ಸಂಭ್ರಮ ಮುಗಿದ ಕೇವಲ ಒಂದೇ ದಿನದ ಅಂತರದಲ್ಲಿ ನಟಿ ತ್ರಿಷಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ. ಇದು ವಿಜಯ್ ಮತ್ತು ತ್ರಿಷಾ ಅವರ ಒಟ್ಟಾರೆ ಒಡನಾಟ ಹಾಗೂ ಸ್ನೇಹದ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

Related Articles

Related image1
OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!
Related image2
CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!
36
ಮುರಿದುಬಿತ್ತೇ ಇವರಿಬ್ಬರ ಸ್ನೇಹ?
Image Credit : instagram

ಮುರಿದುಬಿತ್ತೇ ಇವರಿಬ್ಬರ ಸ್ನೇಹ?

ಪ್ರತಿ ವರ್ಷ ವಿಜಯ್ ಅವರ ಹುಟ್ಟುಹಬ್ಬದಂದು ಎಲ್ಲರಿಗಿಂತ ಮೊದಲು ವಿಶೇಷ ಪೋಸ್ಟ್ ಮಾಡುವ ನಟಿ ತ್ರಿಶಾ ಈ ಬಾರಿ ವಿಶ್ ಮಾಡಿಲ್ಲ. ವಿಜಯ್ ಅವರ ಸ್ನೇಹ ಮತ್ತು ವೃತ್ತಿಪರ ಸಂಬಂಧವನ್ನು ಆಚರಿಸುವ ಹೃದಯಸ್ಪರ್ಶಿ ಸಂದೇಶಗಳ ಜೊತೆಗೆ, ಶೂಟಿಂಗ್ ಸೆಟ್‌ನ ಅಪರೂಪದ ಹಾಗೂ ಇದುವರೆಗೆ ಯಾರೂ ಕಾಣದ ಫೋಟೋಗಳನ್ನು ಹಂಚಿಕೊಳ್ಳುವುದು ತ್ರಿಷಾ ಅವರ ವಾಡಿಕೆಯಾಗಿತ್ತು. ಆದರೆ, ಈ ವರ್ಷ ವಿಜಯ್ ಜನ್ಮದಿನದಂದು ತ್ರಿಷಾ ಅವರ ಖಾತೆಯಿಂದ ಯಾವುದೇ ಶುಭಾಶಯದ ಪೋಸ್ಟ್‌ಗಳು ಪ್ರಕಟವಾಗದೆ ಸಂಪೂರ್ಣ ಮೌನ ಆವರಿಸಿತ್ತು. ಇದು ಇವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಬದಲಾವಣೆ ಆಗಿದೆಯೇ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಅನ್‌ಫಾಲೋ ಮಾಡುವ ಈ ಮೂಲಕ ತ್ರಿಶಾ ತಮ್ಮ ದೀರ್ಘಕಾಲದ ಸಂಬಂಧಕ್ಕೆ ಪೂರ್ಣವಿರಾಮ ಹಾಕುವುದರೊಂದಿಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ಸಿಕ್ಕಿದಂತಾಗಿದೆ.

46
ಹಿಟ್ ಜೋಡಿಯ ಸಿನಿಮಾ ಇತಿಹಾಸ
Image Credit : Asianet News

ಹಿಟ್ ಜೋಡಿಯ ಸಿನಿಮಾ ಇತಿಹಾಸ

ತಮಿಳು ಚಿತ್ರರಂಗದಲ್ಲಿ ವಿಜಯ್ ಹಾಗೂ ತ್ರಿಷಾ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಆನ್-ಸ್ಕ್ರೀನ್ ಜೋಡಿ ಎನಿಸಿಕೊಂಡಿದ್ದಾರೆ. ಆರಂಭಿಕ ದಿನಗಳ ಬ್ಲಾಕ್‌ಬಸ್ಟರ್ ಸಿನಿಮಾ 'ಗಿಲ್ಲಿ' ಇಂದ ಹಿಡಿದು, ಇತ್ತೀಚಿನ ಸೂಪರ್ ಹಿಟ್ ಚಿತ್ರಗಳಾದ 'ಲಿಯೋ' ಮತ್ತು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ವರೆಗೆ ಈ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಸದಾ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಅವರ ವೈಯಕ್ತಿಕ ಜೀವನದ ಏರುಪೇರುಗಳ ಕುರಿತ ವರದಿಗಳು ಬಿಡುಗಡೆಯಾದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಇವರಿಬ್ಬರ ಸಂಬಂಧದ ಸ್ವರೂಪದ ಬಗ್ಗೆ ಹತ್ತಾರು ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಇಬ್ಬರೂ ತಾರೆಯರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡದೆ ಕಟ್ಟುನಿಟ್ಟಾದ ಮೌನ ಕಾಯ್ದುಕೊಂಡಿದ್ದಾರೆ.

56
ಪ್ರಸ್ತುತ ಇಬ್ಬರ ವೃತ್ತಿಜೀವನ ಹೇಗಿದೆ?
Image Credit : Instagram

ಪ್ರಸ್ತುತ ಇಬ್ಬರ ವೃತ್ತಿಜೀವನ ಹೇಗಿದೆ?

ನಟಿ ತ್ರಿಶಾ ಆರ್‌ಜೆ ಬಾಲಾಜಿ ನಿರ್ದೇಶನದ ಸೂರ್ಯ ಎದುರು ನಟಿಸಿದ 'ಕರುಪ್ಪು' ಚಿತ್ರದಲ್ಲಿ ತ್ರಿಷಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಲ್ಲದೆ ವಿಮರ್ಶಕರಿಂದಲೂ ಅಪಾರ ಮೆಚ್ಚುಗೆ ಗಳಿಸಿತ್ತು. ಆರ್‌ಜೆ ಬಾಲಾಜಿ, ಇಂದ್ರನ್ಸ್, ಅನಘಾ ಮಾಯಾ ರವಿ, ನಾಟಿ ಸುಬ್ರಮಣಿಯಂ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿತ್ತು.

ವಿಜಯ್ ಅವರು ಸದ್ಯ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು, ತಮ್ಮ ರಾಜಕೀಯ ಜವಾಬ್ದಾರಿಗಳ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಕ್ರಿಯ ಸಿನಿಮಾರಂಗದಿಂದ ತಾತ್ಕಾಲಿಕ ವಿರಾಮ ಪಡೆದಿದ್ದಾರೆ. ಆದರೆ ನಾಯಕ ನಟನಾಗಿ ಅವರ ಕೊನೆಯ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ 'ಜನ ನಾಯಗನ್' ಇನ್ನೂ ಸೆನ್ಸಾರ್ ಮಂಡಳಿಯ (CBFC) ಪ್ರಮಾಣೀಕರಣ ಪಡೆಯದೇ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

66
ಅನ್‌ಫಾಲೋ ಚರ್ಚೆ ಬಗ್ಗೆ ಮೌನ
Image Credit : Instagram

ಅನ್‌ಫಾಲೋ ಚರ್ಚೆ ಬಗ್ಗೆ ಮೌನ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ಈ ಅನ್‌ಫಾಲೋ ಚರ್ಚೆಯ ಕುರಿತು ತ್ರಿಷಾ ಅಥವಾ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಇಂಟರ್ನೆಟ್‌ನಲ್ಲಿ ಇವರಿಬ್ಬರ ಹೆಸರು ನಿರಂತರವಾಗಿ ಟ್ರೆಂಡ್ ಆಗುತ್ತಿರುವುದು ಇಬ್ಬರು ತಾರೆಯರ ಮೇಲಿರುವ ಸಾರ್ವಜನಿಕರ ಕ್ರೇಜ್ ಅನ್ನು ತೋರಿಸುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ತ್ರಿಷಾ ಕೃಷ್ಣನ್
ದಳಪತಿ ವಿಜಯ್
ಮನರಂಜನಾ ಸುದ್ದಿ
ಸುದ್ದಿ

Latest Videos
Recommended Stories
Recommended image1
ಟಾಕ್ಸಿಕ್ ಬಿಡುಗಡೆ 7 ದಿನ ಬಾಕಿ ಇರುವಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಅಮೆರಿಕದಲ್ಲಿ ಯಶ್ ಹೊಸ ದಾಖಲೆ
Recommended image2
Toxic Countdown Day 09: 'ಟಾಕ್ಸಿಕ್' ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!
Recommended image3
ನನ್ನನ್ನು ಶಾಂತಿಯಿಂದ ಸಾಯಲು ಬಿಡಿ.. ಮಾಡೆಲ್‌ ಜೀವನದ ಕೊನೆಯ 90 ನಿಮಿಷ
Related Stories
Recommended image1
OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!
Recommended image2
CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved