MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶ್ರೀದೇವಿ ಮಗಳಿಗೆ ಭಾರೀ ಬೇಜಾರು.. ಈ ಚಿತ್ರದ ಪ್ರಚಾರಕ್ಕೆ ಬರುವಷ್ಟು 'ದಡ್ಡಿ' ನಾನಲ್ಲ ಅಂದ ಜಾಹ್ನವಿ ಕಪೂರ್!

ಶ್ರೀದೇವಿ ಮಗಳಿಗೆ ಭಾರೀ ಬೇಜಾರು.. ಈ ಚಿತ್ರದ ಪ್ರಚಾರಕ್ಕೆ ಬರುವಷ್ಟು 'ದಡ್ಡಿ' ನಾನಲ್ಲ ಅಂದ ಜಾಹ್ನವಿ ಕಪೂರ್!

ಸಿನಿಮಾ ಪ್ರಚಾರ ಅಂದ ಮೇಲೆ ನಾಯಕ-ನಾಯಕಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ 'ಪೆದ್ದಿ' ಪ್ರಚಾರದ ಕಾರ್ಯಕ್ರಮಗಳಲ್ಲಿ ಜಾಹ್ನವಿ ಕಪೂರ್ ಸುಳಿವೇ ಇಲ್ಲ! ಇದಕ್ಕೆ ಕೇಳಿಬರುತ್ತಿರುವ ಕಾರಣ ಮಾತ್ರ ಅಚ್ಚರಿ ಮೂಡಿಸುವಂತಿದೆ. ಕಾರಣ ಏನಿರಬಹುದು? ಈ ಸ್ಟೋರಿ ನೋಡಿ ಗೊತ್ತಾಗುತ್ತೆ..!

2 Min read
Author : Shriram Bhat
Published : May 15 2026, 10:46 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ರಾಮ್‌ ಚರಣ್‌ 'ಪೆದ್ದಿ' ಚಿತ್ರಕ್ಕೆ 'ಪ್ರಚಾರ'ದ ಸಂಕಷ್ಟ ಹಾಗೂ 'ಬಾಡಿಗೆ' ಸಮರ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಜಾಹ್ನವಿ ಕಪೂರ್ (Janhvi Kapoor) ಜೋಡಿಯನ್ನ ತೆರೆಯ ಮೇಲೆ ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಆದರೆ, 'ಪೆದ್ದಿ' ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಒಂದರ ಹಿಂದೆ ಒಂದರಂತೆ ವಿವಾದಗಳು ಮತ್ತು ಸಮಸ್ಯೆಗಳು ಚಿತ್ರತಂಡವನ್ನು ಸುತ್ತುವರಿಯುತ್ತಿವೆ. ಒಂದು ಕಡೆ ನಾಯಕಿ ಜಾಹ್ನವಿ ಕಪೂರ್ ಪ್ರಚಾರದಿಂದ ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದ್ದರೆ, ಇನ್ನೊಂದೆಡೆ ನಿರ್ಮಾಪಕರು ಮತ್ತು ಚಿತ್ರಮಂದಿರಗಳ ಮಾಲೀಕರ ನಡುವಿನ ಹಣದ ಕಿತ್ತಾಟ ಸಿನಿಮಾದ ಭವಿಷ್ಯವನ್ನು ಅತಂತ್ರಗೊಳಿಸಿದೆ.

Add Asianetnews Kannada as a Preferred SourcegooglePreferred
26
Image Credit : Instagram

ಜಾನ್ವಿ ಕಪೂರ್ ನಡೆಗೆ ಅಭಿಮಾನಿಗಳ ಅಸಮಾಧಾನ!

ಸಿನಿಮಾ ಪ್ರಚಾರ ಅಂದ ಮೇಲೆ ನಾಯಕ-ನಾಯಕಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ 'ಪೆದ್ದಿ' ಪ್ರಚಾರದ ಕಾರ್ಯಕ್ರಮಗಳಲ್ಲಿ ಜಾಹ್ನವಿ ಕಪೂರ್ ಸುಳಿವೇ ಇಲ್ಲ! ಇದಕ್ಕೆ ಕೇಳಿಬರುತ್ತಿರುವ ಕಾರಣ ಮಾತ್ರ ಅಚ್ಚರಿ ಮೂಡಿಸುವಂತಿದೆ. ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ಜಾಹ್ನವಿಗೆ ಸಿಕ್ಕಿರುವುದು ಕೇವಲ ಒಂದು ಹಾಡು ಮತ್ತು ಕೆಲವೇ ಕೆಲವು ದೃಶ್ಯಗಳ ಅತಿಥಿ ಪಾತ್ರವಂತೆ. ಈ ಹಿಂದೆ ಜೂನಿಯರ್ ಎನ್‌ಟಿಆರ್ ಅವರ 'ದೇವರ' ಚಿತ್ರದಲ್ಲೂ ಜಾಹ್ನವಿ ಕಪೂರ್ ಪಾತ್ರಕ್ಕೆ ಅಷ್ಟೇನೂ ಸ್ಕೋಪ್ ಇರಲಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಅದೇ ಕಹಿ ಅನುಭವ ಇಲ್ಲಿಯೂ ಮರುಕಳಿಸಬಾರದು ಎಂಬ ಕಾರಣಕ್ಕೆ ಜಾಹ್ನವಿ ಕಪೂರ್ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Related Articles

Related image1
ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್
Related image2
ರಶ್ಮಿಕಾ ಅಂತಿಂಥ ಹೆಣ್ಣಲ್ಲ, ಕೇರಳದಲ್ಲಿ ಕಿಚ್ಚು ಹಚ್ಚುವ 'ಗೊಂಡ್' ಯುವತಿಯಾಗಿ ಅಬ್ಬರಿಸಿ ಬಂದಿದ್ದಾರೆ!
36
Image Credit : Instagram

ಅಷ್ಟೇ ಏಕೆ, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಲೈವ್ ಕಾನ್ಸರ್ಟ್ ಮತ್ತು ಪ್ರಮುಖ ಇವೆಂಟ್‌ಗಳಿಗೂ ಜಾಹ್ನವಿ ಕಪೂರ್ ಗೈರಾಗಿದ್ದಾರೆ. ಬಾಲಿವುಡ್‌ನಲ್ಲಿ ದೊಡ್ಡ ದೊಡ್ಡ ರೋಲ್‌ಗಳನ್ನು ಮಾಡುತ್ತಿರುವ ತಮಗೆ, ಇಷ್ಟು ಸಣ್ಣ ಪಾತ್ರಕ್ಕಾಗಿ ಪ್ರಚಾರ ಮಾಡುವುದು ಇಷ್ಟವಿಲ್ಲ ಎಂಬುದು ಅವರ ನಿಲುವಂತೆ. ಆದರೆ, ಸಂಭಾವನೆ ವಿಚಾರಕ್ಕೆ ಬಂದರೆ ಬಾಲಿವುಡ್‌ಗಿಂತ ದುಪ್ಪಟ್ಟು ಹಣವನ್ನು ಈ ಚಿತ್ರಕ್ಕಾಗಿ ಜಾಹ್ನವಿ ಕಪೂರ್ ಪಡೆದಿದ್ದಾರೆ ಎಂಬ ಸುದ್ದಿ ನೆಟ್ಟಿಗರನ್ನು ಕೆರಳಿಸಿದೆ. "ದುಡ್ಡು ಮಾತ್ರ ಡಬಲ್ ಬೇಕು, ಪ್ರಚಾರಕ್ಕೆ ಬರಲು ಮಾತ್ರ ಪಾತ್ರ ಚಿಕ್ಕದಾಯಿತೇ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ.

46
Image Credit : Instagram

350 ಕೋಟಿ ಬಜೆಟ್ ಸಿನಿಮಾಗೆ 'ಥಿಯೇಟರ್' ಸಂಕಷ್ಟ!

ಕೇವಲ ನಾಯಕಿಯ ಸಮಸ್ಯೆಯಷ್ಟೇ ಅಲ್ಲ, 'ಪೆದ್ದಿ' ಚಿತ್ರಕ್ಕೆ ಈಗ ನೈಜಾಂ ಏರಿಯಾದಲ್ಲಿ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಚಿತ್ರಮಂದಿರಗಳ ಬಾಡಿಗೆ ಮತ್ತು ಲಾಭದ ಹಂಚಿಕೆ ವಿಚಾರವಾಗಿ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆ ಭಾರಿ ವಿವಾದ ಉಂಟಾಗಿದೆ. ಈಗಾಗಲೇ ಎರಡು ಬಾರಿ ಬಿಡುಗಡೆ ಮುಂದೂಡಲ್ಪಟ್ಟಿರುವ ಈ ಚಿತ್ರ ಜೂನ್ 4ಕ್ಕೆ ಬರಬೇಕಿದೆ. ಆದರೆ, ಪ್ರದರ್ಶಕರು ತಮ್ಮ ಬೇಡಿಕೆ ಈಡೇರದಿದ್ದರೆ ಸಿನಿಮಾವನ್ನು ಪ್ರದರ್ಶಿಸುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

56
Image Credit : Instagram

ನಿರ್ಮಾಪಕರು ಮಾತ್ರ, "ನಮ್ಮದು 350 ಕೋಟಿ ರೂಪಾಯಿಗಳ ಭಾರಿ ಬಜೆಟ್ ಸಿನಿಮಾ. ಈಗ ಮತ್ತೆ ತಡವಾದರೆ ನಮಗೆ ದೊಡ್ಡ ನಷ್ಟವಾಗುತ್ತದೆ" ಎಂದು ಫಿಲ್ಮ್ ಚೇಂಬರ್ ಮುಂದೆ ಅಳಲು ತೋಡಿಕೊಂಡಿದ್ದಾರೆ. 

66
Image Credit : Instagram

ಒಟ್ಟಿನಲ್ಲಿ ಜಾನ್ವಿ ಕಪೂರ್ ಅವರ ಅಸಹಕಾರ ಮತ್ತು ಚಿತ್ರಮಂದಿರಗಳ ಬಾಡಿಗೆ ಕಿರಿಕಿರಿ ನಡುವೆ ರಾಮ್ ಚರಣ್ ಅವರ ಈ ಬಿಗ್ ಬಜೆಟ್ ಸಿನಿಮಾ ಹೇಗೆ ಪಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮೆಗಾ ಅಭಿಮಾನಿಗಳಂತೂ ಈ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಜಾನ್ವಿ ಕಪೂರ್
ಟಾಲಿವುಡ್
ರಾಮ್ ಚರಣ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ರಶ್ಮಿಕಾ ಅಂತಿಂಥ ಹೆಣ್ಣಲ್ಲ, ಕೇರಳದಲ್ಲಿ ಕಿಚ್ಚು ಹಚ್ಚುವ 'ಗೊಂಡ್' ಯುವತಿಯಾಗಿ ಅಬ್ಬರಿಸಿ ಬಂದಿದ್ದಾರೆ!
Recommended image2
ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್
Recommended image3
ಒಟಿಟಿ ದೈತ್ಯರಿಂದ ಧುರಂಧರ್ 2 ಸಿನಿಮಾಗೆ ಅತೀ ದೊಡ್ಡ ಡೀಲ್, ಹೊಸ ದಾಖಲೆ ಬರೆದ ಅದಿತ್ಯ ಧಾರ್
Related Stories
Recommended image1
ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್
Recommended image2
ರಶ್ಮಿಕಾ ಅಂತಿಂಥ ಹೆಣ್ಣಲ್ಲ, ಕೇರಳದಲ್ಲಿ ಕಿಚ್ಚು ಹಚ್ಚುವ 'ಗೊಂಡ್' ಯುವತಿಯಾಗಿ ಅಬ್ಬರಿಸಿ ಬಂದಿದ್ದಾರೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved