- Home
- Entertainment
- Cine World
- 2025’s Biggest Film Stars: ಈ ವರ್ಷ ಅಭಿಮಾನಿಗಳ ಬಾಯಲ್ಲಿ ಇರ್ವದ್ದೇ ಮಾತು, ಇಂಡಸ್ಟ್ರಿ ಆಳಿದ ಆಕ್ಟರ್ ಯಾರು?
2025’s Biggest Film Stars: ಈ ವರ್ಷ ಅಭಿಮಾನಿಗಳ ಬಾಯಲ್ಲಿ ಇರ್ವದ್ದೇ ಮಾತು, ಇಂಡಸ್ಟ್ರಿ ಆಳಿದ ಆಕ್ಟರ್ ಯಾರು?
2025ರಲ್ಲಿ ಚಿತ್ರರಂಗದ ಅಬ್ಬರ ಜೋರಾಗಿತ್ತು. ಒಂದ್ಕಡೆ ಒಟಿಟಿಯಲ್ಲಿ ಸೀರಿಸ್ ಗಳು ಹಣ ಬಾಚಿಕೊಂಡ್ರೆ ಇನ್ನೊಂದ್ಕಡೆ ಥಿಯೇಟರ್ ಗಳಲ್ಲಿ ಸಿನಿಮಾ ಹವಾ ಜೋರಾಗಿತ್ತು. ಸಿನಿಮಾ ಇರ್ಲಿ ಬಿಡ್ಲಿ, 2025ರಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ, ಹಣ ಬಾಚಿಕೊಂಡ ಹಾಗೇ ಟ್ರೆಂಡ್ ಸೆಟ್ ಮಾಡಿದ ನಟರ ಪಟ್ಟಿ ಇಲ್ಲಿದೆ.

ಪುಷ್ಪ 2 ಮೂಲಕ ಅಲ್ಲು ಘರ್ಜನೆ
ಫ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ನಟ ಅಲ್ಲು ಅರ್ಜುನ್ 2025ರಲ್ಲಿ ಮಿಂಚಿದ್ದಾರೆ. ಪುಷ್ಪ ಸಿನಿಮಾ ಮೂಲಕ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಹೆಸರು ಮಾಡಿದ್ದ ಅಲ್ಲು ಅರ್ಜುನ್ ಗೆ ಪುಷ್ಪ 2 ಸಿನಿಮಾ ಕೂಡ ಕೈ ಹಿಡಿದಿದೆ. ಪುಷ್ಪ 2 ಸಿನಿಮಾಕ್ಕಾಗಿ ಅಲ್ಲು ಅರ್ಜುನ್ 250 ರಿಂದ 300 ಕೋಟಿ ಸಂಭಾವನೆ ಪಡೆದಿದ್ದಾರೆ. ಪುಷ್ಪ 2, 2024ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ರೂ, ಪುಷ್ಪ 2 ಸಿನಿಮಾ ನಂತ್ರ ಅಲ್ಲು ಅರ್ಜುನ್ ರೇಂಜ್ ಬದಲಾಗಿದೆ. ಬರೀ ತೆಲುಗು ಮಾತ್ರವಲ್ಲ ಬಾಲಿವುಡ್ ನಿರ್ದೇಶಕರು ಅಲ್ಲು ಹಿಂದೆ ಬಿದ್ದಿದ್ದಾರೆ.
ಛಾವಾ ಮೂಲಕ ಛಾಪು ಮೂಡಿಸಿದ ವಿಕ್ಕಿ
ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದ ಕಲಾವಿದರಲ್ಲಿ ವಿಕ್ಕಿ ಕೌಶಲ್ ಒಬ್ಬರು. ಛಾವಾ ಮೆಗಾ ಸಕ್ಸಸ್ ವಿಕ್ಕಿ ಕೌಶಲ್ ಗೆರೆ ಬದಲಿಸಿದೆ. ಫೆಬ್ರವರಿ 14, 2025 ರಂದು ತೆರೆಗೆ ಬಂದ ಸಿನಿಮಾ ಸೂಪರ್ ಹಿಟ್. ವಿಕ್ಕಿ ಕೌಶಲ್ ಈ ಸಿನಿಮಾಗೆ 20–40 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ವಿಕ್ಕಿ ಹಾಗೂ ರಶ್ಮಿಕಾ ಮಂದಣ್ಣ ಆಕ್ಟಿಂಗ್ ಗೆ ಫ್ಯಾನ್ಸ್ ಕ್ಲೀನ್ ಬೋರ್ಡ್ ಆಗಿದ್ದು, ಈ ಸಿನಿಮಾ ವಿಕ್ಕಿ ಅದೃಷ್ಟ ಬದಲಿಸಿದೆ. ವಿಕ್ಕಿ ಕೌಶಲ್ ಗೆ ಆಫರ್ ಮೇಲೆ ಆಫರ್ ಬರ್ತಿದೆ. ಛಾವಾ, ವಿಕ್ಕಿ ಕೌಶಲ್ ಅವರನ್ನು ವರ್ಷದ ಬಲಿಷ್ಠ ಮತ್ತು ಅತ್ಯಂತ ವಿಶ್ವಾಸಾರ್ಹ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ.
2025ರಲ್ಲಿ ರಿಷಬ್ ಅಬ್ಬರ
ಸ್ಯಾಂಡಲ್ ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಮೂಲಕ ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ. ಕಾಂತಾರ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಕಾಂತಾರಾ ಚಾಪ್ಟರ್ 1 ರ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಆಕಾಶಕ್ಕೇರಿಸಿದ್ದಾರೆ. ಪ್ಯಾನ್ ಇಂಡಿಯಾ ಬಝ್ ರಿಷಬ್ ಶೆಟ್ಟಿ, 2025ರಲ್ಲಿ ಮನೆ ಮಾತಾದ ನಟ. ಅವರ ನಟನೆ, ನಿರ್ದೇಶನ, ಸಮರ್ಪಣೆಗೆ ಇಡೀ ಚಿತ್ರ ರಂಗವೇ ತಲೆದೂಗಿದೆ.
ಸದಾ ಬೇಡಿಕೆಯಲ್ಲಿರುವ ನಟ ಪ್ರಭಾಸ್
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿಮಾನಿಗಳ ಫೆವರೆಟ್ ಕಲಾವಿದ. ಕಲ್ಕಿ 2898 ಎಡಿ ಹಿಂದಿನ ವರ್ಷ ಸೂಪರ್ ಹಿಟ್, ಕೋಟಿ ಕೋಟಿ ಬಾಚಿಕೊಂಡಿದ್ದ ಸಿನಿಮಾದಲ್ಲಿ ಪ್ರಭಾಸ್ ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಿ, ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದ ಪ್ರಭಾಸ್ ಈಗ ಬ್ಯುಸಿ. ಪ್ರಭಾಸ್ ಅವರ ದಿ ರಾಜಾ ಸಾಬ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸ್ಪಿರಿಟ್ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ಕಲ್ಕಿ 2898 ಎಡಿ ಸೀಕ್ವೆಲ್ ಮೇಲೆ ಎಲ್ಲರ ಕಣ್ಣಿದೆ. ಒಂದು ಸಿನಿಮಾಕ್ಕೆ 150 ರಿಂದ 200 ಕೋಟಿ ಸಂಭಾವನೆ ಪಡೆಯುವ ಪ್ರಭಾಸ್, 2025ರಲ್ಲಿ ಇಂಡಿಸ್ಟ್ರಿ ಆಳಿದ ನಟರಲ್ಲಿ ಒಬ್ಬರು.
ಟಾಕ್ಸಿಕ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟರಾದ ಯಶ್ ಸಿನಿಮಾ 2025ರಲ್ಲಿ ತೆರೆ ಕಂಡಿಲ್ಲ. ಆದ್ರೆ ಯಶ್, 2025ರಲ್ಲಿ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ ನಟರಲ್ಲಿ ಒಬ್ಬರು. ಅವರ ಟಾಕ್ಸಿಕ್ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದ್ದು, ದಕ್ಷಿಣದ ಅತ್ಯಂತ ಸ್ಟೈಲಿಶ್ ನಟರ ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

