2023 ರ ಟಾಪ್ 10 ಬಾಲಿವುಡ್‌ನ ಅತ್ಯಂತ ಸುಂದರ ನಟಿಯರ ಪಟ್ಟಿ ಇದು!
ತಮ್ಮ ದೇಶದ ಸಿನಿಮಾ ನಟಿಯರು ಸುಂದರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಸೌಂದರ್ಯದಿಂದ ಇಡೀ ವಿಶ್ವವೇ ತಮ್ಮ ಕಡೆ ನೋಡುವ ಹಾಗೇ ಮಾಡಿದ್ದಾರೆ. ಬಾಲಿವುಡ್ ನಟಿಯರಂತೂ ತಮ್ಮ ಸೌಂದರ್ಯದ ಮೂಲಕ ದೇಶದ ಕೀರ್ತಿ ಹೆಚ್ಚಿದ್ದಾರೆ. 2023ರ ಟಾಪ್ 10 ಬಾಲಿವುಡ್ ಅತ್ಯಂತ ಸುಂದರ ನಟಿಯರ ಪಟ್ಟಿಯಲ್ಲಿದೆ.
ಪ್ರಸ್ತುತ ಬಾಲಿವುಡ್ ರಾಣಿಯಾಗಿ ಮೆರೆಯುತ್ತಿರುವ ದೀಪಿಕಾ ಪಡುಕೋಣೆ ಆಸ್ಕರ್ 2023ರಲ್ಲಿ ಭಾಗವಹಿಸಿ ದೇಶದ ಕೀರ್ತಿಯನ್ನು ಇನ್ನಷ್ಷೂ ಹರಡಿದ್ದಾರೆ. ಅದರ ಜೊತೆಗೆ ಅವರ ಕೊನೆಯ ಸಿನಿಮಾ ಪಠಾಣ್ ಹಲವು ದಾಖಲೆಗಳನ್ನು ನಿರ್ಮಿಸಿ ಸೂಪರ್‌ಡೂಪರ್ ಹಿಟ್ ಎಂದು ಸಾಬೀತಾಗಿದೆ.
ಒಂದು ಮಗುವಿನ ತಾಯಿಯಾದರೂ ಇನ್ನೂ ಜನಪ್ರಿಯತೆಯನ್ನೂ ಉಳಿಸಿಕೊಂಡಿದ್ದಾರೆ ಅನುಷ್ಕಾ ಶರ್ಮ. ಹಲವು ಉತ್ತಮ ಸಿನಿಮಾಗಳನ್ನು ನೀಡಿರುವ ಅನುಷ್ಕಾ ನಟಿಯ ಜೊತೆಗೆ ಪ್ರೊಡೆಕ್ಷನ್ ಹೌಸ್ ಹೊಂದಿದ್ದಾರೆ.
ಕತ್ರಿನಾ ಕೈಫ್ ಬಾಲಿವುಡ್‌ನ ಚೆಲುವೆಯರಲ್ಲಿ ಒಬ್ಬರು. ವಿದೇಶಿ ಮೂಲದ ಈ ನಟಿ ತಮ್ಮ ಲುಕ್ ಹಾಗೂ ಟ್ಯಾಲೆಂಟ್ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದಾರೆ.
ಬಾಲಿವಡ್‌ನಲ್ಲಿ ಮಾತ್ರವಲ್ಲದೇ ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ಅವರು ಬ್ಯೂಟಿ ವಿಥ್ ಬ್ರೈನ್ ಎನ್ನವುದರಲ್ಲಿ ಅನುಮಾನವೇ ಇಲ್ಲ.
ಬಿ ಟೌನ್‌ನ ನ್ಯೂ ಮಮ್ಮಿ ಆಲಿಯಾ ಭಟ್ ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾಗಳನ್ನು ನೀಡಿ ಬಾಕ್ಸ್ ಆಫೀಸ್‌ನಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.
ನಟಿ, ಮಾಡೆಲ್ , ನರ್ತಕಿ, ಗಾಯಕಿ ಆಗಿರುವ ನಡಾ ಸುಂದರಿ ನೋರಾ ಪತೇಹಿ ತಮ್ಮ ಡ್ಯಾನ್ಸ್‌ಗಾಗಿ ಸಖತ್ ಫೇಮಸ್. ಅವರು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ವಿವಾಹವಾದ ನಟಿ ಕಿಯಾರಾ ಅಡ್ವಾಣಿ ಸುಂದರ ನಟಿಯರಲ್ಲಿ ಒಬ್ಬರು. ಹಿಂದಿ ಸಿನಿಮಾದ ಜೊತೆ ತೆಲಗು ಚಿತ್ರಗಳಲ್ಲೂ ಕೆಲಸ ಮಾಡುತ್ತಾರೆ ಈ ನಟಿ.
ತಮ್ಮ ಚೊಚ್ಚಲ ಸನಿಮಾ ಆಶಿಕಿ 2 ಮೂಲಕ ರಾತ್ರೋರಾತ್ತಿ ಸ್ಟಾರ್ ಆದ ಶ್ರದ್ಧಾ ಕಪೂರ್ ಅವರು ಒಳ್ಳೆಯ ಗಾಯಕಿ ಕೂಡ ಹೌದು.
Kriti Sanon
ಕೃತಿ ಸನೋನ್ ಸುಂದರಿಯ ಜೊತೆಗೆ ಟ್ಯಾಲೆಂಟೆಡ್ ನಟಿ ಕೂಡ ಹೌದು. ಹಿಂದಿ ಜೊತೆಗೆ ತೆಲುಗುವಿನಲ್ಲೂ ಕೆಲಸ ಮಾಡುವ ಕೃತಿ ತಮ್ಮ ಉತ್ತಮ ಅಭಿನಯಕ್ಕಾಗಿ ಹಲವು ಪ್ರಶಸ್ತಿ ಗಳಿಸಿದ್ದಾರೆ.
ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು ಸಾರಾ ಆಲಿ ಖಾನ್. ಸೈಫ್ ಆಲಿ ಖಾನ್ ಮತ್ತು ಅಮೃತಾ ಸಿಂಗ್ ಮಗಳಾದ ಸಾರಾ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ