ಈ ಟಾಪ್ 10 ಚಿಕ್ಕ ಬಜೆಟ್ ಸಿನಿಮಾಗಳಿಂದ ಕೋಟ್ಯಾಂತರ ರೂ. ಲಾಭವಾಗಿದೆಯಂತೆ!
ಈ ಸಿನಿಮಾಗಳು ನಿರ್ಮಾಪಕರು ಮತ್ತು ವಿತರಕರ ಭವಿಷ್ಯವನ್ನೇ ಬದಲಾಯಿಸಿಬಿಟ್ಟವು. ಒಂದು ರೂಪಾಯಿ ಹೂಡಿಕೆಗೆ ಹತ್ತು ರೂಪಾಯಿ ಲಾಭ ತಂದುಕೊಟ್ಟವು. ಈ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಚಿಕ್ಕ ಸಿನಿಮಾಗಳು ಉಳಿಯಬೇಕು, ಆಗ ಮಾತ್ರ ಚಿತ್ರರಂಗ ಉಳಿಯುತ್ತದೆ ಅಂತ ದಾಸರಿ ನಾರಾಯಣ ರಾವ್ ಅವರು ಹೇಳಿದ್ದರು. ಅವರ ಮಾತು ಎಷ್ಟು ನಿಜ ಅಂತ ಈಗ ಅರ್ಥ ಆಗ್ತಿದೆ. ದೊಡ್ಡ ಹೀರೋಗಳ ಸಿನಿಮಾಗಳಿಂದ ನಷ್ಟ ಅನುಭವಿಸಿದವರಿಗೆ ಚಿಕ್ಕ ಸಿನಿಮಾಗಳೇ ಆಸರೆಯಾಗಿವೆ. ಕಡಿಮೆ ಬಂಡವಾಳದಲ್ಲಿ ಭಾರಿ ಲಾಭ ತಂದುಕೊಡ್ತಿವೆ. ಬಿಂಬಿಸಾರ, ಕಾರ್ತಿಕೇಯ 2, ಸೀತಾ ರಾಮಂ, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಹೆಚ್ಚು ಲಾಭ ತಂದುಕೊಟ್ಟ ಟಾಪ್ 10 ಚಿಕ್ಕ ಬಜೆಟ್ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳೋಣ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಟಿಸಿರುವ, ಪರಶುರಾಮ್ ನಿರ್ದೇಶನದ ಗೀತಾ ಗೋವಿಂದಂ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಕೇವಲ 15 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿದ್ದ ಈ ಸಿನಿಮಾ 70 ಕೋಟಿ ರೂಪಾಯಿ ಷೇರ್ ತಂದುಕೊಟ್ಟಿತು. ಒಟ್ಟಾರೆ 55.43 ಕೋಟಿ ರೂಪಾಯಿ ಲಾಭ.
ಕಾರ್ತಿಕೇಯ 2 ಸಿನಿಮಾ ಸಕ್ಸಸ್ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆ. ಕೇವಲ 12.8 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿದ್ದ ಈ ಸಿನಿಮಾ ಅದ್ಭುತ ಪ್ರದರ್ಶನ ನೀಡಿತು. ಒಟ್ಟು 58.40 ಕೋಟಿ ರೂಪಾಯಿ ಷೇರ್, 121.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರಿಗೆ 45.10 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು. ನಿಖಿಲ್ ಸಿದ್ಧಾರ್ಥ್ ನಟಿಸಿರುವ ಈ ಸಿನಿಮಾವನ್ನು ಚಂದೂ ಮೊಂಡೇಟಿ ನಿರ್ದೇಶಿಸಿದ್ದಾರೆ. 2021 ರಲ್ಲಿ ಕೆಲವು ಚಿಕ್ಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅವುಗಳಲ್ಲಿ ಉಪ್ಪೆನ ಕೂಡ ಒಂದು. ಕೃತಿ ಶೆಟ್ಟಿ ಮತ್ತು ವೈಷ್ಣವ್ ತೇಜ್ ನಟಿಸಿರುವ ಈ ಸಿನಿಮಾ 20 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. ಆದರೆ 51 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿತು. ಬುಚ್ಚಿಬಾಬು ಸಿನಿಮಾ ನಿರ್ದೇಶಿಸಿದ್ದು, 31.02 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು.
ಶೇಖರ್ ಕಮ್ಮುಲ ನಿರ್ದೇಶನದ ಫಿಧಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಕೇವಲ 18 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿದ್ದ ಈ ಸಿನಿಮಾ 50 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ, 30.5 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು. ವರುಣ್ ತೇಜ್ ಮತ್ತು ಸಾಯಿ ಪಲ್ಲವಿ ನಟಿಸಿದ್ದಾರೆ. ರೊಮ್ಯಾಂಟಿಕ್ ಮತ್ತು ಎಮೋಷನಲ್ ಕಥಾಹಂದರ ಹೊಂದಿರುವ ಸೀತಾ ರಾಮಂ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಮಾಡಿದ ಈ ಸಿನಿಮಾ 16.2 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. 46.50 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ 29.50 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು. ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದಾರೆ.
ಹೊಸ ನಿರ್ದೇಶಕ ಅನುದೀಪ್ ಕೆ.ವಿ. ಜಾತಿ ರತ್ನಾಲು ಸಿನಿಮಾದ ಮೂಲಕ ಮ್ಯಾಜಿಕ್ ಮಾಡಿದ್ರು. ನವೀನ್ ಪೊಲಿಶೆಟ್ಟಿ, ಪ್ರಿಯದರ್ಶಿ ಮತ್ತು ರಾಹುಲ್ ರಾಮಕೃಷ್ಣ ನಟಿಸಿರುವ ಈ ಸಿನಿಮಾ 11 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. ಆದರೆ 39 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ 27.52 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು. ಪೂರಿ ಜಗನ್ನಾಥ್ ಅವರ ಕಮ್ ಬ್ಯಾಕ್ ಸಿನಿಮಾ ಐಸ್ಮಾರ್ಟ್ ಶಂಕರ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. 17.7 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿದ್ದ ಈ ಸಿನಿಮಾ 41 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ 22.78 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು.
ಹಿಟ್ ಸಿನಿಮಾಗಾಗಿ ವರ್ಷಗಳಿಂದ ಕಾಯುತ್ತಿದ್ದ ಕಲ್ಯಾಣ್ ರಾಮ್ ಅವರಿಗೆ ಬಿಂಬಿಸಾರ ಸಿನಿಮಾ ಗೆಲುವು ತಂದುಕೊಟ್ಟಿತು. 15.6 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿದ್ದ ಈ ಸಿನಿಮಾ 40 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ 22 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು. ವಿಜಯ್ ದೇವರಕೊಂಡ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿದ ಸಿನಿಮಾ ಅರ್ಜುನ್ ರೆಡ್ಡಿ. ಸಂದೀಪ್ ವಂಗಾ ನಿರ್ದೇಶನದ ಈ ಸಿನಿಮಾ 5.5 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. ಉತ್ತಮ ಪ್ರತಿಕ್ರಿಯೆ ಪಡೆದು 26 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿ 20.3 ಕೋಟಿ ರೂಪಾಯಿ ಲಾಭ ತಂದುಕೊಟ್ಟಿತು.
ಕಾಂತಾರ ಸಿನಿಮಾ ಸಕ್ಸಸ್ ಬಗ್ಗೆ ಹೇಳೋಕೆ ಪದಗಳೇ ಸಾಲದು. ಕಾಂತಾರ ಸಿನಿಮಾ ತೆಲುಗು ಹಕ್ಕುಗಳನ್ನು ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈಗ 14 ಕೋಟಿ ರೂಪಾಯಿವರೆಗೆ ಲಾಭ ತಂದುಕೊಟ್ಟಿದೆ. ಟ್ರೇಡ್ ವಲಯದ ಪ್ರಕಾರ 16 ಕೋಟಿ ರೂಪಾಯಿ ಷೇರ್ ಸಂಗ್ರಹಿಸಿದೆ. ಅಲ್ಲು ಅರವಿಂದ್ ಭಾರಿ ಲಾಭ ಗಳಿಸಿದ್ದಾರೆ.