430 ಕೋಟಿ ರೂ. ಆಸ್ತಿಯ ಮಾಲೀಕ, ಸೂಪರ್‌ಸ್ಟಾರ್ ಪರಿಚಯ ಸಿಗದೆ 10 ರೂ. ಭಿಕ್ಷೆ ಹಾಕಿದ್ದಳು ಮಹಿಳೆ!
ಭಾರತೀಯ ಚಿತ್ರರಂಗದ ಈ ಸೂಪರ್‌ಸ್ಟಾರ್ ಚಲನಚಿತ್ರೋದ್ಯಮಕ್ಕೆ ಸೇರುವ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು ಮತ್ತು ಅವರ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದರು. ಆ ನಟ ಬೇರೆ ಯಾರೂ ಅಲ್ಲ ರಜನಿಕಾಂತ್. ಆದರೆ ಸೂಪರ್‌ಸ್ಟಾರ್ ಆಗಿದ್ದಾಗಲೇ ಮಹಿಳೆಯೊಬ್ಬರು ರಜನೀಕಾಂತ್‌ಗೆ ಭಿಕ್ಷೆಯಾಗಿ 10 ರೂ. ನೀಡಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಸೂಪರ್‌ಸ್ಟಾರ್ ರಜನೀಕಾಂತ್ ನಟನಾಗುವ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಈಗ ಅವರು ನೂರಾರು ಕೋಟಿ ಆಸ್ತಿಗಳ ಒಡೆಯ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರೋ ನಟ. ಆದರೆ ಸೂಪರ್‌ಸ್ಟಾರ್ ಆಗಿದ್ದಾಗಲೇ ಮಹಿಳೆಯೊಬ್ಬರು ರಜನೀಕಾಂತ್‌ಗೆ ಭಿಕ್ಷೆಯಾಗಿ 10 ರೂ. ನೀಡಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಬಸ್ ಕಂಡಕ್ಟರ್ ಆಗಿ ಶುರು ಮಾಡಿದ ಈ ಸೂಪರ್ ಸ್ಟಾರ್ ತಮ್ಮ ಅಭಿನಯದಿಂದ ಮತ್ತೆ ಮತ್ತೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರು ಎಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದರೆ ಅವರು ಒಮ್ಮೆ ದೇವಸ್ಥಾನಕ್ಕೆ ಮಾರುವೇಷದಲ್ಲಿ ಹೋಗಬೇಕಾಗಿತ್ತು ಮತ್ತು ಅವರ ನೋಟದಿಂದಾಗಿ ಭಿಕ್ಷುಕ ಎಂದು ತಪ್ಪಾಗಿ ಗ್ರಹಿಸಲ್ಪಟ್ಟರು.
ರಜನೀಕಾಂತ್ ಡಿಸೆಂಬರ್ 12, 1950 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರಿಗೆ ಶಿವಾಜಿ ರಾವ್ ಗಾಯಕ್ವಾಡ್ ಎಂದು ಹೆಸರಿಡಲಾಗಿತ್ತು. ಸೂಪರ್‌ಸ್ಟಾರ್ ನಗರದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು., ದಿವಂಗತ ತಮಿಳು ನಿರ್ದೇಶಕ ದಿವಂಗತ ಕೆ.ಬಾಲಚಂದರ್ ಇವರನ್ನು ಗುರುತಿಸಿ ರಜನಿಕಾಂತ್ ಎಂದು ನಾಮಕರಣ ಮಾಡಿ ಸಿನಿಮಾದಲ್ಲಿ ಅವಕಾಶ ನೀಡಿದರು. 1975ರಲ್ಲಿ ರಜನೀಕಾಂತ್ ಅಭಿನಯದ ಅಪೂರ್ವ ರಾಗಂಗಲ್ ಎಂಬ ಚಿತ್ರ ಹಿಟ್ ಆಯಿತು. ಅಲ್ಲಿಂದ ರಜನಿ ಹಿಂತಿರುಗಿ ನೋಡಲ್ಲಿಲ್ಲ. ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ಸೂಪರ್‌ಹಿಟ್ ಆದವು. ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ಸ್ಟಾರ್ ಆದರು.
ಒಮ್ಮೆ ಸೂಪರ್‌ಸ್ಟಾರ್ ಮಾರುವೇಷದಲ್ಲಿ ಬೆಂಗಳೂರಿನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮಹಿಳೆಯೊಬ್ಬರು ಭಿಕ್ಷುಕನೆಂದು ತಪ್ಪಾಗಿ ಅವರಿಗೆ 10 ರೂಪಾಯಿ ಭಿಕ್ಷೆಯನ್ನು ನೀಡಿದರು. ಗಾಯತ್ರಿ ಶ್ರೀಕಾಂತ್ ಅವರು ಬರೆದಿರುವ ನಟನ ಜೀವನಚರಿತ್ರೆ 'ದಿ ನೇಮ್ ಈಸ್ ರಜಿನಿಕಾಂತ್' ನಲ್ಲಿ ಈ ವಿನೋದಕರ ಘಟನೆಯನ್ನು ಉಲ್ಲೇಖಿಸಲಾಗಿದೆ.
ಬ್ಲಾಕ್‌ಬಸ್ಟರ್ ಶಿವಾಜಿ-ದಿ ಬಾಸ್ ನಂತರ ಸಿನಿಮಾದ ನಂತರ ರಜನೀಕಾಂತ್ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಬಯಸಿದರು. ಆದರೆ ಆಗ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳದ್ದ ಕಾರಣ, ಗುರುತು ಸಿಗದಿರಲು ಸುಕ್ಕುಗಟ್ಟಿದ ಅಂಗಿ ಮತ್ತು ಸರಳವಾದ ಲುಂಗಿಯನ್ನು ಧರಿಸಿದ್ದರು. ತಲೆಯನ್ನು ಶಾಲಿನಿಂದ ಮುಚ್ಚಿದ್ದರು. ಈ ಸಂದರ್ಭದಲ್ಲಿ ಇವರನ್ನು ಭಿಕ್ಷುಕನೆಂದು ತಿಳಿದ ಮಧ್ಯವಯಸ್ಸಿನ ಗುಜರಾತಿ ಮಹಿಳೆಯೊಬ್ಬರು ನಟನ ಬಳಿಗೆ ಬಂದು 10 ರೂ ನೋಟನ್ನು ನೀಡಿದರು.
ನಟ ನಯವಾಗಿ ಹಣವನ್ನು ತೆಗೆದುಕೊಂಡು ದೇಗುಲಕ್ಕೆ ಕಾಲಿಟ್ಟರು. ಆದರೆ, ದೇವಸ್ಥಾನದ ಹುಂಡಿಯಲ್ಲಿ 100 ರೂಪಾಯಿ ನೋಟು ಹಾಕುವುದನ್ನು ನೋಡಿ ಮಹಿಳೆ ಗೊಂದಲಕ್ಕೊಳಗಾದರು. ನಂತರ, ಮಹಿಳೆ ಅವರು ಐಷಾರಾಮಿ ಕಾರಿನಲ್ಲಿ ಪ್ರವೇಶಿಸುವುದನ್ನು ನೋಡಿದಾಗ, ಅವಳು ತನ್ನ ತಪ್ಪನ್ನು ಅರಿತು ಮುಜುಗರಕ್ಕೊಳಗಾಗಿ ಕ್ಷಮೆಯಾಚಿಸಿದಳು. ಅದಕ್ಕೆ ರಜನೀಕಾಂತ್, 'ನಾವು ಜೀವನದಲ್ಲಿ ಎಲ್ಲವನ್ನೂ ಹೊಂದಿದ್ದರೂ ಯಾವತ್ತಿಗೂ ಭಿಕ್ಷುಕರೇ ಎಂಬುದನ್ನು ದೇವರು ನಮಗೆ ಹೇಳಲು ಬಯಸುತ್ತಾನೆ. ದೇವರು ಹೇಳಲು ಬಯಸಿದ್ದನ್ನು ನಿಮ್ಮ ಮೂಲಕ ಹೇಳಿದ್ದಾನೆ ಅಷ್ಟೆ' ಎಂದು ತಿಳಿಸಿದರು.
ರಜನೀಕಾಂತ್ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು. ನಟ ಇತ್ತೀಚೆಗೆ ಬಿಡುಗಡೆಯಾದ ಜೈಲರ್‌ಗಾಗಿ ರೂ 210 ಕೋಟಿ ಗಳಿಸಿದರು, ಇದು ಯಾವುದೇ ಭಾರತೀಯ ನಟ ಪಡೆದಿರುವ ಮೊತ್ತದಲ್ಲಿ ಅತ್ಯಧಿಕವಾಗಿದೆ. ಇದು ಮಾತ್ರವಲ್ಲದೆ, ನಟ 430 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇತ್ತೀಚಿನ ಬಿಡುಗಡೆಯಾದ ಜೈಲರ್ ಯಶಸ್ಸಿನ ನಂತರ, ಚಿತ್ರದ ನಿರ್ಮಾಪಕರು ಅವರಿಗೆ 1.25 ಕೋಟಿ ಮೌಲ್ಯದ BMW X7 ಅನ್ನು ಉಡುಗೊರೆಯಾಗಿ ನೀಡಿದರು.
ನೆಲ್ಸನ್ ಅವರ ನೇತೃತ್ವದಲ್ಲಿ, ರಜನಿಕಾಂತ್ ಅವರ ಇತ್ತೀಚೆಗೆ ಬಿಡುಗಡೆಯಾದ ಜೈಲರ್, ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್ ಮತ್ತು ಶಿವ ರಾಜ್‌ಕುಮಾರ್ ಇತರರು ನಟಿಸಿದ್ದು ದೊಡ್ಡ ಯಶಸ್ಸನ್ನು ಕಂಡಿತು. ಈ ಚಿತ್ರವು ವಿಶ್ವಾದ್ಯಂತ 604.25 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇದೀಗ, ನಟನ ಮುಂದಿನ ಚಿತ್ರಕ್ಕೆ ತಲೈವರ್ 171 ಎಂದು ಹೆಸರಿಡಲಾಗಿದೆ, ಇದನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಲಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.