MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಿಡುಗಡೆಯಾಗದಂತೆ ಬರೋಬ್ಬರಿ 34 ಕೋರ್ಟ್ ಕೇಸ್ ಕಂಡ ಸೂಪರ್‌ ಹಿಟ್‌ ಚಿತ್ರ, ರಾತ್ರೋ ರಾತ್ರಿ ಸ್ಟಾರ್ ಆದ ನಟಿ

ಬಿಡುಗಡೆಯಾಗದಂತೆ ಬರೋಬ್ಬರಿ 34 ಕೋರ್ಟ್ ಕೇಸ್ ಕಂಡ ಸೂಪರ್‌ ಹಿಟ್‌ ಚಿತ್ರ, ರಾತ್ರೋ ರಾತ್ರಿ ಸ್ಟಾರ್ ಆದ ನಟಿ

ಸಿನೆಮಾ ಮನೋರಂಜನಾತ್ಮಕ ವಿಷಯವಾಗಿರುವುದರಿಂದ ಪ್ರತಿಯೊಬ್ಬರಿಗೂ ಇಷ್ಟ.  ಹಲವಾರು ಚಿತ್ರಗಳು ಸಾಮಾಜಿಕ ಸಂದೇಶ ನೀಡುತ್ತದೆ. ಆದರೆ ಕೆಲವೊಮ್ಮೆ ಚಲನಚಿತ್ರಗಳು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರುತ್ತವೆ.  ಅಂತಹ ಚಿತ್ರಗಳನ್ನು ನಿಷೇಧಿಸುವಂತೆ ಆಕ್ರೋಶ ಕೂಡ ಕೇಳಿ ಬರುತ್ತದೆ. ಈ ಬಹಿಷ್ಕಾರ ಸಂಸ್ಕೃತಿ ಇತ್ತೀಚಿಗೆ ಶುರುವಾಗಿಲ್ಲ, 42 ವರ್ಷಗಳ ಹಿಂದೆ ಒಂದು ಚಿತ್ರವು ಸಾಕಷ್ಟು ವಿವಾದಗಳನ್ನು ಎದುರಿಸಿತು ಆದರೆ ನಂತರ ಸೂಪರ್‌ ಹಿಟ್ ಆಯ್ತು

2 Min read
Author : Gowthami K
Published : Feb 18 2024, 03:47 PM IST
Share this Photo Gallery
  • FB
  • TW
  • Linkdin
  • Whatsapp
16


ಆ ವಿವಾದಕ್ಕೆ ಗುರಿಯಾಗಿ ಆಕ್ರೋಶಕ್ಕೆ ಒಳಗಾದ ಚಿತ್ರ ನಿಖಾ. ಈ ಚಿತ್ರವನ್ನು ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ನಿರ್ದೇಶಿಸಿದ್ದಾರೆ. ಚಿತ್ರವು ವಿವಾದ ಸೃಷ್ಟಿಸಿದರೂ ಅದು ಇನ್ನೂ ಭಾರಿ ಯಶಸ್ಸನ್ನು ಗಳಿಸಿತು ಮತ್ತು ಚೊಚ್ಚಲ ಚಿತ್ರದಲ್ಲೇ ನಟಿಯನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

BR ಚೋಪ್ರಾ ಅವರು ನಿರ್ದೇಶಿಸಿದ, 1982 ರ ಚಲನಚಿತ್ರ ನಿಖಾದಲ್ಲಿ ರಾಜ್ ಬಬ್ಬರ್, ದೀಪಕ್ ಪರಾಶರ್ ಮತ್ತು ಸಲ್ಮಾ ಅಘಾ ನಟಿಸಿದ್ದಾರೆ. ಈ ಚಿತ್ರ ತ್ರಿವಳಿ ತಲಾಖ್ ಅನ್ನು ಆಧರಿಸಿದೆ.  ಚಿತ್ರಕ್ಕೆ ಮೊದಲು ತಲಾಕ್ ತಲಾಕ್ ತಲಾಕ್ ಎಂದು ಹೆಸರಿಸಲಾಗಿತ್ತು, ಆದರೆ ನಂತರ ತಯಾರಕರು ಹೆಸರನ್ನು ಬದಲಾಯಿಸಿದರು. 

36

ಚಿತ್ರದ ಶೀರ್ಷಿಕೆ ಮತ್ತು ಕಥಾಹಂದರವು ಸಂಪ್ರದಾಯವಾದಿ ಮುಸ್ಲಿಮರ ಭಾವನೆಗಳಿಗೆ ತುಂಬಾ ನೋವುಂಟು ಮಾಡಿತ್ತು. ಅವರು ಬೀದಿಗಿಳಿದಿದ್ದಾರೆ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ 34 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿತ್ತು. ಈ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಚಿತ್ರಮಂದಿರಗಳ ಹೊರಗೆ ಪೋಸ್ಟರ್‌ಗಳನ್ನು ಸಹ ಚಿತ್ರ ವೀಕ್ಷಿಸದಂತೆ ಮನವಿ ಮಾಡಿದರು. 

46

ಅಷ್ಟೇ ಅಲ್ಲ ನಾಯಕ ನಟಿ ಸಲ್ಮಾ ಅಘಾ ಅವರಿಗೂ ಬೆದರಿಕೆ ಹಾಕಿ ಕಿರುಕುಳ ನೀಡಲಾಗಿತ್ತು.  ಅಮೃತಾ ಸಿಂಗ್ ಅವರ ತಾಯಿ ರುಖ್ಸಾನಾ ಸುಲ್ತಾನ್ ಅವರು ಅಮೃತಾ ಸಿಂಗ್ ಅವರನ್ನು ಚಿತ್ರಕ್ಕೆ ಸಹಿ ಹಾಕಲು ಬಿ.ಆರ್.ಚೋಪ್ರಾ ಮೇಲೆ ಪ್ರಭಾವ ಬೀರಲು ತುಂಬಾ ಪ್ರಯತ್ನಿಸಿದರು, ಆದಾಗ್ಯೂ, ಚೋಪ್ರಾ ತಾಜಾ ಮುಖಕ್ಕಾಗಿ ಹುಡುಕಾಟದಲ್ಲಿದ್ದರು ಮತ್ತು ಸಲ್ಮಾ ಅಘಾವನ್ನು ಕಂಡು ಹಿಡಿದು ಚಿತ್ರಕ್ಕೆ ಕರೆತಂದರು.

56

ಹೊಸ ನಾಯಕಿಯನ್ನು ಚಿತ್ರಕ್ಕೆ ಕರೆತಂದದ್ದು ರುಖ್ಸಾನಾಗೆ ಅತೀವ ಕೋಪವನ್ನುಂಟು ಮಾಡಿತು. ಈ ವೇಳೆ ಸಲ್ಮಾ ಅಘಾ ಅವರಿಗೆ ಕಿರುಕುಳ ಮತ್ತು ಬೆದರಿಕೆ ಪತ್ರಗಳು ಮತ್ತು ಫೋನ್ ಕರೆಗಳು ಬರಲಾರಂಭಿಸಿದವು. ಪತ್ರಗಳು ಸಲ್ಮಾರನ್ನು ಲಂಡನ್‌ಗೆ ಹಿಂತಿರುಗಿ ಹೋಗುವಂತೆ ಎಚ್ಚರಿಸಿತ್ತು, ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಯ್ತು. ಆದರೆ  ಸಲ್ಮಾ ಅಘಾ ಅವರು ಎಚ್ಚರಿಕೆಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದರು ಮತ್ತು ಭಾರತದಲ್ಲಿಯೇ ಇದ್ದರು. ಈ ಪತ್ರಗಳ ಹಿಂದೆ ಅಮೃತಾ ಸಿಂಗ್  ಅವರ ಕೈವಾಡ ಇದೆ ಎಂದು ವರದಿಯಾಗಿದೆ. ಆದರೆ ಯಾವುದೂ ಸ್ಪಷ್ಟವಾಗಿಲ್ಲ. 

66

ಇಷ್ಟೆಲ್ಲ ಗಲಾಟೆ, ಆಕ್ರೋಶ ಆದರೂ ಚಿತ್ರ ನೋಡಲು ಜನ ಥಿಯೇಟರ್‌ಗಳ ಹೊರಗೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು  ಟಿಕೆಟ್‌ ಪಡೆಯುತ್ತಿದ್ದರು. ಆ ಸಮಯದಲ್ಲಿ 4 ಕೋಟಿ ರೂಪಾಯಿಗಳಲ್ಲಿ ತಯಾರಾದ ಈ ಚಿತ್ರವು  ಗಲ್ಲಾಪೆಟ್ಟಿಗೆಯಲ್ಲಿ 9 ಕೋಟಿ ರೂಪಾಯಿಗಳನ್ನು ಗಳಿಸಿತು ಮತ್ತು 1982 ರ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಯಿತು. ಅಷ್ಟೇ ಅಲ್ಲ, ಈ ಚಿತ್ರವು ಸಲ್ಮಾ ಅವರನ್ನು ರಾತ್ರೋ ರಾತ್ರಿ ಸ್ಟಾರ್‌ ನಾಯಕಿಯನ್ನಾಗಿ ಮಾಡಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್: ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!
Recommended image2
55ರಲ್ಲಿ ಡಿವೋರ್ಸ್, 60ರಲ್ಲಿ 2ನೇ ಮದುವೆ: ತಮ್ಮ ಜೀವನದ ಕಹಿ ಸತ್ಯ ಬಿಚ್ಚಿಟ್ಟ ಕನ್ನಡದ ಖ್ಯಾತ ವಿಲನ್!
Recommended image3
‘ನಿಜವಾದ ಪ್ರೀತಿ ಬೇಕು, ಒಳ್ಳೆಯ ಹುಡುಗನಿದ್ದರೆ ಇನ್‌ಸ್ಟಾಗ್ರಾಂಗೆ ಮೆಸೇಜ್ ಮಾಡಿ’: ಹುಚ್ಚ ನಟಿ ಓಪನ್ ಆಫರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved