MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Alia Bhatt skin Care - ನಟಿ ಇದನ್ನು ಎಂದಿಗೂ ಮಿಸ್‌ ಮಾಡೊಲ್ಲ!

Alia Bhatt skin Care - ನಟಿ ಇದನ್ನು ಎಂದಿಗೂ ಮಿಸ್‌ ಮಾಡೊಲ್ಲ!

ಆಲಿಯಾ ಭಟ್‌ (Alia Bhatt) ಬಗ್ಗೆ ಯಾರಿಗೆ ಗೊತ್ತಿಲ್ಲ. ತಮ್ಮ  ಆನ್-ಸ್ಕ್ರೀನ್ ಪ್ರದರ್ಶನಗಳ ಹೊರತಾಗಿ, ಅವರು Instagram ನಲ್ಲಿ ತನ್ನ ಕ್ಯಾಂಡಿಡ್ ಫೋಟೋಗಳ ಮೂಲಕ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಇದಲ್ಲದೆ, ಅವರು ಫೋಟೋಗಳ ಮೂಲಕ  ಅಭಿಮಾನಿಗಳು ಮತ್ತು ಫ್ಯಾಷನ್ ವಿಮರ್ಶಕರನ್ನು ಆಕರ್ಷಿಸುತ್ತಿದ್ದಾರೆ. ಹಾಗಾದರೆ  ಆಲಿಯಾ ಭಟ್ ಅವರ ಸುಂದರ ತ್ವಚೆಯ ರಹಸ್ಯಗಳು ಏನು ಗೊತ್ತಾ?ಅವರ ಸ್ಕೀನ್‌ ಕೇರ್‌ ಗುಟ್ಟು ಇಲ್ಲಿದೆ.

2 Min read
Rashmi Rao
Published : Apr 12 2022, 06:54 PM IST
Share this Photo Gallery
  • FB
  • TW
  • Linkdin
  • Whatsapp
17

ಆಲಿಯಾ ಅವರ ಸೌಂದರ್ಯ ಮತ್ತು ತ್ವಚೆಯ ರಹಸ್ಯಗಳನ್ನು ತಿಳಿದುಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ.  ಸೋಶಿಯಲ್‌ ಮೀಡಿಯಾ ಮೂಲಕ ಆಗಾಗ ಅವರು ಟಿಪ್ಸ್ ಮತ್ತು ಟ್ರಿಕ್ಸ್‌ ಹಂಚಿಕೊಳ್ಳುತ್ತಾರೆ. ಇಲ್ಲಿದೆ ನೋಡಿ ಆಲಿಯಾ ಭಟ್ ಅವರ ಸ್ಕೀನ್‌ ಕೇರ್‌ ಸೀಕ್ರೇಟ್‌ಗಳು.

27

ಹೈಡ್ರೇಟೆಡ್, ಮೈಲ್ಡ್‌ ಕ್ಲೆನ್ಸರ್, ಸನ್‌ಸ್ಕ್ರೀನ್, ಸೀರಮ್ ಮತ್ತು ಎಸೆನ್ಸ್, ಹರ್ಬಲ್ ಮೇಕಪ್ ರಿಮ್ಯೂವಲ್‌ ವೈಪ್ಸ್‌ ಆಲಿಯಾ ಭಟ್‌ ಆವರ ಸ್ಕೀನ್‌ ಕೇರ್‌ ಹಾಗೂ ಸೌಂದರ್ಯದ ಬೇಸಿಕ್‌ ಅಂಶಗಳಾಗಿವೆ. 

37

ಹೈಡ್ರೇಟೆಡ್ ಆಗಿರಿ:

ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ನಟಿ ಆಲಿಯಾ ಭಟ್ ಅವರು ಹೈಡ್ರೇಟ್ ಆಗಿರಲು ಮತ್ತು ತನ್ನ ಹೊಳೆಯುವ ಚರ್ಮ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಒಳಗಿನಿಂದ ನಿಮ್ಮನ್ನು ಹೈಡ್ರೀಕರಿಸುವ ಮೂಲಕ, ನಿಮ್ಮ ಮೈಬಣ್ಣವನ್ನು ಸುಧಾರಿಸಬಹುದು ಮತ್ತು ಅನೇಕ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು. ಇದರ ಜೊತೆಗೆ, ನೀವು ದಿನಕ್ಕೆ ಎರಡು ಬಾರಿ ನಿಮ್ಮ ಚರ್ಮಕ್ಕೆ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಹಚ್ಚಬೇಕು.

47

ಮೈಲ್ಡ್‌ ಫೇಸ್‌  ಕ್ಲೆನ್ಸರ್ ಬಳಸಿ:
ಮತ್ತೊಂದು ಸಂದರ್ಶನದಲ್ಲಿ, ಮನೆಗೆ ಹಿಂದಿರುಗಿದ ನಂತರ ತನ್ನ ಮುಖದ ಮೇಲೆ ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸುವುದಾಗಿ ಆಲಿಯಾ ಹಂಚಿಕೊಂಡಿದ್ದಾರೆ. ಧೂಳು, ತೈಲ ಸಂಗ್ರಹ ಮತ್ತು ಮೇಕ್ಅಪ್ ತೊಡೆದುಹಾಕಲು, ಅವರು ತನ್ನ ಚರ್ಮಕ್ಕೆ ಕ್ಲೆನ್ಸರ್‌ ಬಳಸುತ್ತಾರೆ.
 

57

ಯಾವಾಗಲೂ ಸನ್‌ಸ್ಕ್ರೀನ್ ಬಳಸಿ:

ಆಲಿಯಾ ಸನ್‌ಸ್ಕ್ರೀನ್ ಅನ್ನು ಅಪ್ಲೈ ಮಾಡದೆ ತನ್ನ ಮನೆಯಿಂದ ಹೊರಬರುವುದಿಲ್ಲ ಏಕೆಂದರೆ ಅದು  ಚರ್ಮವನ್ನು ಸೂರ್ಯನ ಹಾನಿಕಾರಕ UV ಕಿರಣಗಳ ವಿರುದ್ಧ ರಕ್ಷಿಸುತ್ತದೆ. ಇದು ಚರ್ಮದ ಮೇಲೆ ಯುವಿ ಕಿರಣಗಳ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ವಿವಿಧ ಚರ್ಮದ ಅಸ್ವಸ್ಥತೆಗಳಿಂದ  ದೂರವಿರಿಸುತ್ತದೆ. 

67

ಸೀರಮ್ ಮತ್ತು ಎಸೆನ್ಸ್ ಬಳಸುವುದನ್ನು  ಬಿಡಬೇಡಿ:

ಸೀರಮ್ ಮತ್ತು ಎಸೆನ್ಸ್‌ ಬಳಸಿ ಚರ್ಮಕ್ಕೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ. ಹಾಗೆ ಮಾಡುವುದರಿಂದ, ವಯಸ್ಸಾದ ಚಿಹ್ನೆಗಳನ್ನು ಹಿಮ್ಮೆಟ್ಟಿಸಬಹುದು, ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಮತ್ತು ಮೃದುವಾದ ಚರ್ಮವನ್ನು ಪಡೆಯಬಹುದು. ಅಲ್ಲದೆ, ನಟಿ ತನ್ನ ತ್ವಚೆಗೆ  ಗಿಡಮೂಲಿಕೆ ಮತ್ತು ನೈಸರ್ಗಿಕ ಪದಾರ್ಥಗಳನ್ನು ಬಳಸಲು ಇಷ್ಟಪಡುತ್ತಾರೆ.
 

77

ಹರ್ಬಲ್ ಮೇಕಪ್ ರಿಮ್ಯೂಲ್‌ ವೈಪ್ಸ್‌:
ಆಲಿಯಾ ತನ್ನ ಮೇಕ್ಅಪ್ ತೆಗೆಯದೆ ಎಂದಿಗೂ ಮಲಗುವುದಿಲ್ಲ.  ಅದು  ಚರ್ಮದ ಹಾನಿಗೆ ಕಾರಣವಾಗುವುದು ಮಾತ್ರವಲ್ಲ ದಿಂಬಿನ ಕವರ್‌ಗಳನ್ನು ಸಹ ಹಾಳು ಮಾಡುತ್ತದೆ. ಆದರೆ ಸಾಮಾನ್ಯ ಫೇಸ್‌ ವೈಪ್ಸ್‌ ಬದಲು, ಕ್ಲೀನ್ ಚರ್ಮವನ್ನು ಪಡೆಯಲು ಗಿಡ ಮೂಲಿಕೆಗಳನ್ನು ಬಳಸುತ್ತಾರೆ. ಅವರು ನೈಸರ್ಗಿಕ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಉಪಯೋಗಿಸುವ ಬಗ್ಗೆ ಅವರು ತಮ್ಮ ಪೋಸ್ಟ್‌ಗಳ ಮೂಲಕ ಆಗಾಗ್ಗೆ ಖಚಿತಪಡಿಸುತ್ತಾರೆ.

About the Author

RR
Rashmi Rao
ಆಲಿಯಾ ಭಟ್
ಸೌಂದರ್ಯ ಸಲಹೆಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved