ರಣಬೀರ್ ಆಲಿಯಾರ ಚೈಲ್ಡ್‌ಹುಡ್ ಕ್ರಶ್ ಹಾಗಾದರೆ ಇವರ ನಡುವಿನ ಏಜ್ ಗ್ಯಾಪ್ ಎಷ್ಟು ?
ಬಾರೀ ವಯಸ್ಸಿನ ವ್ಯತ್ಯಾಸ ಹೊಂದಿರುವ ಜೋಡಿಗಳು ಬಾಲಿವುಡ್‌ನಲ್ಲಿ ಕಾಮನ್ . ಧರ್ಮೇಂದ್ರ-ಹೇಮಾ ಮಾಲಿನಿ (Dharmendra-Hema Malini), ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ (Priyanka Chopra-Nick Jonas), ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ (Aishwarya Rai-Abhishek Bachchan) ಅಥವಾ ಸೈಫ್ ಅಲಿ ಖಾನ್-ಕರೀನ್ ಕಪೂರ್ ಖಾನ್ (S aif Ali Khan – Kareen Kapoor Khan)ಆಗಿರಲಿ, ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ ಯಶಸ್ವಿ ಮದುವೆಯ ಜೀವನ ನೆಡೆಸುತ್ತಿದ್ದಾರೆ. ಈಗ ರಣಬೀರ್ ಕಪೂರ್ ಆಲಿಯಾ ಭಟ್ (Ranbir Kapoor Alia Bhatt) ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂದಿನ ವಾರದಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿಗಳ ನಡುವೆ, ಅವರ ವಯಸ್ಸಿನ ವ್ಯತ್ಯಾಸದ ಬಗ್ಗೆ ಸಖತ್ ಚರ್ಚೆ ಕೂಡ ಆಗುತ್ತಿದೆ.
ಆಲಿಯಾ ಭಟ್ ರಣಬೀರ್ ಕಪೂರ್ ಅವರ ನಡುವೆ ಸಾಕಷ್ಟು ವಯಸ್ಸಿನ ವ್ಯತ್ಯಾಸವಿದೆ. ಎಷ್ಟರಮಟ್ಟಿಗೆಂದರೆ ಆಲಿಯಾ ಒಮ್ಮೆ ತನ್ನ ಬಾಲ್ಯದ ದಿನಗಳಲ್ಲಿ ರಣಬೀರ್ ತನ್ನ ಕ್ರಶ್ ಎಂದು ಬಹಿರಂಗಪಡಿಸಿದರು.
ರಣಬೀರ್ ಕಪೂರ್ ಆಲಿಯಾ ಭಟ್ ಗಿಂತ ಕನಿಷ್ಠ ಒಂದು ದಶಕ ದೊಡ್ಡವರು ಎಂದು ನಿಮಗೆ ಗೊತ್ತಾ? ರಿಷಿ ಕಪೂರ್ ಮತ್ತು ನೀತು ಕಪೂರ್ ದಂಪತಿಗೆ ರಣಬೀರ್ ಸೆಪ್ಟೆಂಬರ್ 28, 1982 ರಂದು ಜನಿಸಿದರು.
ಮತ್ತೊಂದೆಡೆ, ಆಲಿಯಾ ಭಟ್ ಮಾರ್ಚ್ 15, 1993 ರಂದು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ಅವರ ನಟ ಪತ್ನಿ ಸೋನಿ ರಜ್ದಾನ್ ಅವರಿಗೆ ಜನಿಸಿದರು.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ನಡುವೆ 11 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ಮೂಲತಃ, 2007 ರಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ 'ಸಾವರಿಯಾ' ಚಿತ್ರದ ಮೂಲಕ ರಣಬೀರ್ ತನ್ನ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ, ಆಲಿಯಾ 14 ವರ್ಷದವರು.
ಇನ್ನೂ ರಣಬೀರ್ ಅವರ ಸಾವರಿಯಾ ಬಿಡುಗಡೆಯಾದ ಐದು ವರ್ಷಗಳ ನಂತರ ಆಲಿಯಾ ಉದ್ಯಮಕ್ಕೆ ಪ್ರವೇಶಿಸಿದರು. ಆಲಿಯಾ ಬಟ್ ಚೊಚ್ಚಲ ಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್' 2012 ರಲ್ಲಿ ಬಿಡುಗಡೆಯಾಯಿತು.
ಆಲಿಯಾ ಭಟ್ ಅವರ ಚೊಚ್ಚಲ ಚಿತ್ರ 2012 ರಲ್ಲಿ ಬಿಡುಗಡೆಯಾಗಿದ್ದರೂ ಸಹ, ಅವರು ರಣಬೀರ್ ಕಪೂರ್‌ಗೂ ಮೊದಲು ತಮ್ಮ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡರು. 1999 ರಲ್ಲಿ ಬಿಡುಗಡೆಯಾದ 'ಸಂಘರ್ಗ್' ಥ್ರಿಲ್ಲರ್ ಚಿತ್ರದಲ್ಲಿ ಆಲಿಯಾ ಮೊದಲ ಬಾರಿಗೆ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು.
ಈ ನಡುವೆ, ಏಪ್ರಿಲ್ 17 ರಂದು ರಣಬೀರ್ ಕಪೂರ್ ಅವರ ಪೂರ್ವಜರ ಮನೆಯಾದ ಚೆಂಬೂರ್‌ನಲ್ಲಿರುವ ಆರ್ ಕೆ ಹೌಸ್‌ನಲ್ಲಿ ನಟರು ವಿವಾಹವಾಗಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಇನ್ನೂ ಕೆರಿಯರ್‌ಗೆ ಸಂಬಂಧಿಸಿದಂತೆ, ಆಲಿಯಾ ಭಟ್ ಮತ್ತು ರಣಬೀರ್ ಮುಂದಿನ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾದ ರೀಲಿಸ್ ಸೆಪ್ಟೆಂಬರ್ ಎಂದು ನಿರ್ಧರಿಸಲಾಗಿದೆ.