ಬಾಯ್‌ಫ್ರೆಂಡ್ ಇರ್ಬಾರದು ವರ್ಜಿನ್ ಆಗಿರ್ಬೇಕು: ಚಿತ್ರರಂಗದಲ್ಲಿ ನಟಿಯರಿಗೆ ಸ್ಟ್ಯಾಂಡರ್ಡ್ ಇದೆ ಎಂದ ಮಹಿಮಾ ಚೌಧರಿ
ಪರ್ಸನಲ್ ಲೈಫ್‌ನ ಟಾರ್ಗೇಟ್ ಮಾಡ್ಕೊಂಡು ಸಿನಿಮಾ ಕಥೆ ಕೊಡುತ್ತಿದ್ದರು ಎಂದು ಆರೋಪ ಮಾಡಿದ ನಟಿ ಮಹಿಮಾ ಚೌಧರಿ....
1997ರಲ್ಲಿ Prades ಚಿತ್ರದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಹಿಮಾ ಚೌಧರಿ ಈ ಹಿಂದೆ ನೀಡಿದ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪುರುಷ ಪ್ರಧಾನ ಸಮಾಜದಲ್ಲಿ ನಾಯಕಿಯರಿಗೆ ಅವಕಾಶ ಸಿಗುತ್ತಿರಲಿಲ್ಲ ಹಾಗೂ ಪರ್ಸನಲ್ ಲೈಫ್‌ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಹಿಡಿದುಕೊಂಡು ಸಿನಿಮಾ ಅವಕಾಶಗಳನ್ನು ಕೊಡುತ್ತಿದ್ದರು ಎಂದು.
'ಚಿತ್ರರಂಗದಲ್ಲಿ ಈಗ ಬದಲಾವಣೆ ಆರಂಭವಾಗಿದೆ ಏಕೆಂದರೆ ನಾಯಕಿರು ಶಾಟ್ಸ್ ಕೇಳುವುದಕ್ಕೆ ಶುರು ಮಾಡಿದ್ದಾರೆ. ಈ ಮೂಲಕ ಅವರಿಗೆ ಬೇಕಿರುವ ರೀತಿಯಲ್ಲಿ ಟೇಕ್ ಓಕೆ ಮಾಡಬಹುದು ಚೆನ್ನಾಗಿ ಅಭಿನಯಿಸಿದ್ದಾರೆ ಅಂದ್ರೆ ಹೆಚ್ಚಿಗೆ ಅವಕಾಶ ಸಿಗುತ್ತದೆ ಹೆಚ್ಚಿಗೆ ಸಂಭಾವನೆ ನೀಡುತ್ತಾರೆ ಅನ್ನೋ ಮಾತಿದೆ' ಎಂದು 2021ರಲ್ಲಿ ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಹಿಮಾ ಚೌಧರಿ ಮಾತನಾಡಿದ್ದರು.
ಹಳೆ ನಟಿಯರಿಗಿಂತ ಈಗಿನ ಕಾಲದವರಿಗೆ ಸಿನಿಮಾರಂಗದಲ್ಲಿ ಸಮಯ ಹೆಚ್ಚಿದೆ ಎಂತೆ. 'ಒಂದು ವೇಳೆ ಯಾರನ್ನಾದರೂ ಡೇಟಿಂಗ್ ಮಾಡಲು ಆರಂಭಿಸಿದರೆ ಅವರ ಜೊತೆಗಿರುವ ಫೋಟೋ ಹಂಚಿಕೊಂಡು ಬರೆದು ಬಿಡುತ್ತಾರೆ.'
'ಅವರಿಗೆಲ್ಲಾ ಚಿತ್ರರಂಗದಲ್ಲಿ ವರ್ಜಿನ್ ಹುಡುಗಿಯರು ಬೇಕು ಕಿಸ್ ಕೂಡ ಮಾಡಿರಬಾರದು. ಡೇಟಿಂಗ್ ಗಾಳಿ ಮಾತು ಕೇಳಿದರೆ ಸಾಕು Oh!! She's dating! ಎಂದು ಹೇಳುತ್ತಿದ್ದರು.'
ನೀವು ಮದುವೆ ಮಾಡಿಕೊಂಡರೆ ಅಲ್ಲಿಗೆ ಮುಗಿಯಿತ್ತು ನಿಮ್ಮ ವೃತ್ತಿ ಜೀವನಕ್ಕೆ ಅವರೇ ಬ್ರೇಕ್ ಹಾಕುತ್ತಾರೆ. ಮಗು ಬಂದ್ಮೇಲೆ ನಿಮ್ಮ ಜೀವನ ಅಲ್ಲಿಗೆ ಮುಗಿಯಿತ್ತು' ಎಂದು ಮಹಿಮಾ ಚೌಧರಿ ಹೇಳಿದ್ದಾರೆ.