ದಕ್ಷಿಣದ ಈ ಬಿಗ್ ಬಜೆಟ್ ಸಿನಿಮಾಗಳು ಫ್ಲಾಫ್, ಕಲೆಕ್ಷನ್ ಮಾಡಿದ್ದಿಷ್ಟೇ!
2022 ರಲ್ಲಿ ಹೆಚ್ಚಿನ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಈ ವರ್ಷ ಬಾಲಿವುಡ್‌ಗೆ ಉತ್ತಮವಾಗಿಲ್ಲ. ಕೆಲವು ದಕ್ಷಿಣದ ಸಿನಿಮಾಗಳು ಇಡೀ ದೇಶದಲ್ಲಿ ಸಂಚಲನ ಮೂಡಿಸಿದರೂ ಮತ್ತೆ ಅನೇಕ ಸಿನಿಮಾಗಳು ಬಹಳ ಕೆಟ್ಟದಾಗಿ ನೆಲಕಚ್ಚಿವೆ. ಕೆಲವು ದೊಡ್ಡ ಬಜೆಟ್ ಚಿತ್ರಗಳು ಫ್ಲಾಪ್ ಆಗಿವೆ.

ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಈ ವರ್ಷ ತೆರೆಕಂಡಿತ್ತು. ಆದರೆ, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪೂಜಾ ಹೆಗಡೆ ಅಭಿನಯದಈ ಚಿತ್ರ 350 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು ಚಿತ್ರ ಕೇವಲ 150 ಕೋಟಿ ಕಲೆಕ್ಷನ್ ಮಾಡಿತು.
ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಈ ಚಿತ್ರ ಯಾವಾಗ ಬಂದು ಹೋಯ್ತು ಎಂದು ತಿಳಿಯಲೇ ಇಲ್ಲ. 140 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಕೇವಲ 76 ಕೋಟಿ ಬ್ಯುಸಿನೆಸ್ ಮಾಡಿದೆ.
ಸೌತ್‌ನ ಗಳಿಕೆಯ ಸ್ಟಾರ್‌ಗಳಲ್ಲಿ ಒಬ್ಬರಾದ ರವಿತೇಜಾ ಅವರ ಕಿಲಾಡಿ ಚಿತ್ರ ಈ ವರ್ಷ ಬಿಡುಗಡೆಯಾಗಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಾಗಿತ್ತು, ಆದರೆ ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. 60 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 13 ಕೋಟಿ ಬ್ಯುಸಿನೆಸ್ ಮಾಡಿದೆ.
ಸೌತ್‌ನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಗಾಡ್‌ಫಾದರ್ ಚಿತ್ರ ಕೂಡ ಬಾಕ್ಸ್ ಆಫೀಸ್ ಪ್ಲಾಪ್ ಆಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 100 ಕೋಟಿ ಬಜೆಟ್‌ನಲ್ಲಿ ಈ ಚಿತ್ರ 108.9 ಕೋಟಿ ಗಳಿಸಿದೆ. ಚಿತ್ರವು ತನ್ನ ಬಜೆಟ್‌ಗಿಂತ ಸ್ವಲ್ಪ ಹೆಚ್ಚು ಗಳಿಸಿದ್ದರೂ, ಅದು ಇನ್ನೂ ಫ್ಲಾಪ್ ಆಗಿದೆ.
ಸೌತ್ ಸ್ಟಾರ್ ರಾಮ್ ಪೋತಿನೇನಿ ಅವರ ದಿ ವಾರಿಯರ್ ಚಿತ್ರ ಫ್ಲಾಪ್ ಆಗಲು ಅದರ ಟಿಕೆಟ್ ಬೆಲೆಯೇ ಕಾರಣ ಎನ್ನಲಾಗಿದೆ. ಚಿತ್ರದ ಟಿಕೆಟ್‌ಗಳು ದುಬಾರಿ ಬೆಲೆಗೆ ಮಾರಾಟವಾಗಿವೆ. 70 ಕೋಟಿ ಬಜೆಟ್‌ನ ಈ ಚಿತ್ರ 36.90 ಕೋಟಿ ವ್ಯವಹಾರ ಮಾಡಿದೆ.
ನಾಗ ಚೈತನ್ಯ ಅಭಿನಯದ ಥ್ಯಾಂಕ್ ಯೂ ತೋ ಚಿತ್ರವು ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲೇ ಇಲ್ಲ. 40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಕೇವಲ 8.9 ಕೋಟಿ ಬ್ಯುಸಿನೆಸ್ ಮಾಡಿದೆ. ನಾಗಾ ಈ ವರ್ಷ ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಅದು ಫ್ಲಾಪ್ ಆಗಿತ್ತು.
ವರುಣ್ ತೇಜ್ ಅವರ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಗಣಿ ಇನ್ನೂ ದೊಡ್ಡ ಫ್ಲಾಪ್ ಎಂದು ಸಾಬೀತಾಗಿದೆ. ಚಿತ್ರ ಬಿಡುಗಡೆಯಾದ ಕೂಡಲೇ ಪ್ರೇಕ್ಷಕರು ತಿರಸ್ಕರಿಸಿದ್ದರು. 50 ಕೋಟಿ ಬಜೆಟ್‌ನ ಈ ಚಿತ್ರ ಗಳಿಸಿದ್ದು .75 ಕೋಟಿ ಮಾತ್ರ.