- Home
- Entertainment
- Cine World
- ಬಾಲಕೃಷ್ಣ ಲವ್ ಮಾಡಿದ್ದು 'ಆ ನಟಿ'ಯನ್ನು; ಆದ್ರೆ ಮದುವೆಯಾಗಿದ್ದು ವಸುಂಧರಾಳನ್ನು.. ಮಧ್ಯೆ ಏನ್ ನಡೀತು?!
ಬಾಲಕೃಷ್ಣ ಲವ್ ಮಾಡಿದ್ದು 'ಆ ನಟಿ'ಯನ್ನು; ಆದ್ರೆ ಮದುವೆಯಾಗಿದ್ದು ವಸುಂಧರಾಳನ್ನು.. ಮಧ್ಯೆ ಏನ್ ನಡೀತು?!
'ಬಾಲಕೃಷ್ಣ ಯಾವುದೋ ನಟಿಯ ಹಿಂದೆ ಬಿದ್ದಿದ್ದಾನಂತೆ. ತಕ್ಷಣ ಮದುವೆ ಮಾಡಬೇಕು, ಸಂಬಂಧ ನೋಡು' ಎಂದು ಎನ್‌ಟಿಆರ್ ನನ್ನ ಬಳಿ ಹೇಳಿದರು. ಇದಾದ ನಂತರ ನಮ್ಮ ಸಂಬಂಧಿಕರ ಮಗಳಾದ ವಸುಂಧರಾ ಜೊತೆ ಬಾಲಕೃಷ್ಣಗೆ ಮದುವೆ ಆಯ್ತು.. ಆದ್ರೆ ಆ ನಟಿ ಯಾರು?

ನಂದಮೂರಿ ಬಾಲಕೃಷ್ಣ ಅವರ ಜೀವನದಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆದಿತ್ತು. ತಂದೆ ಎನ್‌ಟಿಆರ್ ನಂತರ ಬಾಲಯ್ಯ ನಟನಾ ವಾರಸುದಾರರಾದರು. ಟಾಲಿವುಡ್‌ನ ಅಗ್ರ ನಟರಲ್ಲಿ ಒಬ್ಬರಾಗಿ ಬಾಲಯ್ಯ ಬೆಳೆದರು. ಸಿನಿಮಾಗಳಲ್ಲಿ ನಾಯಕರು ತಾವು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗುತ್ತಾರೆ. ಆದರೆ ಅದು ರೀಲ್ ಲೈಫ್. ರಿಯಲ್ ಲೈಫ್‌ನಲ್ಲಿ ಹಾಗೆಯೇ ಆಗಬೇಕೆಂಬ ನಿಯಮವಿಲ್ಲ.
ಪ್ರೀತಿಸಿದ ವ್ಯಕ್ತಿ ದೂರವಾಗಬಹುದು. ಬಾಲಕೃಷ್ಣ ಅವರ ವೈಯಕ್ತಿಕ ಜೀವನದಲ್ಲೂ ಅದೇ ನಡೆಯಿತು. ನಟನಾಗಿ ಮಿಂಚುತ್ತಿದ್ದ ಸಮಯದಲ್ಲಿ ಬಾಲಯ್ಯ ಒಬ್ಬ ನಟಿಯ ಪ್ರೀತಿಯಲ್ಲಿ ಬಿದ್ದಿದ್ದರು. ಆ ನಟಿಯೊಂದಿಗೆ ಬಾಲಯ್ಯ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಅವರು ಆ ನಟಿಯನ್ನು ಪ್ರೀತಿಸುತ್ತಿರುವ ವಿಚಾರ ಎನ್‌ಟಿಆರ್‌ಗೆ ತಿಳಿದಿತ್ತು ಎನ್ನಲಾಗಿದೆ. ಈ ಎಲ್ಲಾ ವಿಚಾರಗಳನ್ನು ಮಾಜಿ ಸಿಎಂ ನಾಡೆಂಡ್ಲ ಭಾಸ್ಕರ ರಾವ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭಾಸ್ಕರ ರಾವ್, 'ಬಾಲಕೃಷ್ಣ ಯಾವುದೋ ನಟಿಯ ಹಿಂದೆ ಬಿದ್ದಿದ್ದಾನಂತೆ. ತಕ್ಷಣ ಮದುವೆ ಮಾಡಬೇಕು, ಸಂಬಂಧ ನೋಡು' ಎಂದು ಎನ್‌ಟಿಆರ್ ನನ್ನ ಬಳಿ ಹೇಳಿದರು. ಇದಾದ ನಂತರ ನಮ್ಮ ಸಂಬಂಧಿಕರ ಮಗಳಾದ ವಸುಂಧರಾ ಜೊತೆ ಬಾಲಕೃಷ್ಣಗೆ ಸಂಬಂಧ ನಿಶ್ಚಯಿಸಿದೆ' ಎಂದು ಹೇಳಿದ್ದಾರೆ.
ಈ ರೀತಿಯಾಗಿ ಬಾಲಕೃಷ್ಣ ಅವರ ಮದುವೆ ನಡೆಯಿತು ಎಂದು ಭಾಸ್ಕರ ರಾವ್ ಹೇಳಿದರು. ಆದರೆ, ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ತಾವಾಗಲಿ, ಎನ್‌ಟಿಆರ್ ಆಗಲಿ ಆ ಮದುವೆಗೆ ಹೋಗಿರಲಿಲ್ಲ ಎಂದು ಭಾಸ್ಕರ ರಾವ್ ತಿಳಿಸಿದ್ದಾರೆ.
ನಂತರ ಆಶೀರ್ವಾದ ಮಾಡಲೂ ತಾನು ಹೋಗಲಿಲ್ಲ ಎಂದು ನಾಡೆಂಡ್ಲ ಭಾಸ್ಕರ ರಾವ್ ಹೇಳಿದ್ದಾರೆ. ಅಷ್ಟರಲ್ಲಿ ತನಗೂ ಎನ್‌ಟಿಆರ್‌ಗೂ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಎಂದರು. ಏನೇ ಇರಲಿ, ಬಾಲಕೃಷ್ಣ ಅವರ ಮದುವೆ ಅನಿರೀಕ್ಷಿತ ಸನ್ನಿವೇಶಗಳ ನಡುವೆ ನಡೆಯಿತು. ಅಂದಹಾಗೆ, ಬಾಲಯ್ಯ ಪ್ರೀತಿಸಿದ ಆ ನಟಿ ಯಾರು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಹಲವು ಅಭಿಪ್ರಾಯಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

