The Kashmir Filesನಂತೆ ಸೂಪರ್ ಹಿಟ್ ಆದ ಕಡಿಮೆ-ಬಜೆಟ್ ಚಿತ್ರಗಳಿವು
ಕಾಶ್ಮೀರಿ ಪಂಡೀತರ ಹತ್ಯಾಕಾಂಡ ಮತ್ತು ವಲಸೆಯ ಮೇಲೆ ತಯಾರಾದ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರ ಗಳಿಕೆಯ ಹೊಸ ದಾಖಲೆಗಳನ್ನು ಮಾಡುತ್ತಿದೆ. ಈ ಚಿತ್ರ ಕೇವಲ 6 ದಿನಗಳಲ್ಲಿ 79 ಕೋಟಿ ಗಳಿಕೆ ಮಾಡಿದೆ. ಕೇವಲ 12 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಗಳಿಕೆಯಲ್ಲಿ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಕಾಶ್ಮೀರ ಫೈಲ್ಸ್ ಸಿನಿಮಾ ಮಾತ್ರವಲ್ಲ, ಈ ಹಿಂದೆ ಬಾಲಿವುಡ್‌ನಲ್ಲಿ ಅನೇಕ ಕಡಿಮೆ ಬಜೆಟ್‌ನ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಆದರೆ ಗಳಿಕೆಯ ವಿಷಯದಲ್ಲಿ ಅವು ಬಹಳ ಮುಂದಿವೆ. ಕೆಲವು ಚಿತ್ರಗಳು ತಮ್ಮ ಬಜೆಟ್‌ಗಿಂತ 5 ಪಟ್ಟು ಹೆಚ್ಚು ಗಳಿಸಿವೆ. ಸಾಕಷ್ಟು ಹಣ ಗಳಿಸಿದ ಅಂತಹ ಕೆಲವು ಕಡಿಮೆ ಬಜೆಟ್‌ನ ಚಿತ್ರಗಳ ಬಗ್ಗೆ ಇಲ್ಲಿದೆ.

2012ರಲ್ಲಿ ಬಿಡುಗಡೆಯಾದ ವಿಕ್ಕಿ ಡೋನರ್ ಚಿತ್ರವನ್ನು ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜೊತೆ ಯಾಮಿ ಗೌತಮ್ ಮತ್ತು ಅನ್ನು ಕಪೂರ್ ನಾಯಕಿಯರಾಗಿ ನಟಿಸಿದ್ದರು.
ಬಜೆಟ್: 10 ಕೋಟಿ
ಗಳಿಕೆ: 41 ಕೋಟಿ
2017 ರಲ್ಲಿ ಬಿಡುಗಡೆಯಾದ ಬರೇಲಿ ಕಿ ಬರ್ಫಿಯನ್ನು ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶಿಸಿದ್ದಾರೆ. ಆಯುಷ್ಮಾನ್ ಖುರಾನಾ ಅವರಲ್ಲದೆ, ರಾಜ್‌ಕುಮಾರ್ ರಾವ್, ಕೃತಿ ಸನೋನ್, ಪಂಕಜ್ ತ್ರಿಪಾಠಿ ಮತ್ತು ಸೀಮಾ ಪಹ್ವಾ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 20 ಕೋಟಿ
ಗಳಿಕೆ: 50 ಕೋಟಿ
2017 ರಲ್ಲಿ ಬಿಡುಗಡೆಯಾದ ಹಿಂದಿ ಮೀಡಿಯಂನ ನಿರ್ದೇಶಕರು ಸಾಕೇತ್ ಚೌಧರಿ. ಇರ್ಫಾನ್ ಖಾನ್ ಮತ್ತು ಸಬಾ ಕಮರ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇರ್ಫಾನ್ ಈಗ ಈ ಜಗತ್ತಿನಲ್ಲಿಲ್ಲ.
ಬಜೆಟ್: 23 ಕೋಟಿ
ಗಳಿಕೆ: 63 ಕೋಟಿ
2018 ರಲ್ಲಿ ಬಿಡುಗಡೆಯಾದ ಸ್ತ್ರೀ ಚಿತ್ರದ ನಿರ್ದೇಶಕರು ಅಮರ್ ಕೌಶಿಕ್. ರಾಜಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಜೊತೆಗೆ ಅಪರಶಕ್ತಿ ಖುರಾನಾ, ಪಂಕಜ್ ತ್ರಿಪಾಠಿ ಮತ್ತು ಅಭಿಷೇಕ್ ಬ್ಯಾನರ್ಜಿ ಇದರಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 24 ಕೋಟಿ
ಗಳಿಕೆ:129 ಕೋಟಿ
ಆರ್ ಎಸ್ ಪ್ರಸನ್ನ ನಿರ್ದೇಶನದ 2017 ರಲ್ಲಿ ಬಿಡುಗಡೆಯಾದ ಶುಭ ಮಂಗಲ್ ಸಾವಧಾನ್. ಆಯುಷ್ಮಾನ್ ಖುರಾನಾ ಅವರಲ್ಲದೆ, ಭೂಮಿ ಪೆಡ್ನೇಕರ್, ಸೀಮಾ ಭಾರ್ಗವ ಮತ್ತು ಚಿತ್ತರಂಜನ್ ತ್ರಿಪಾಠಿ ಇದರಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 25 ಕೋಟಿ
ಗಳಿಕೆ: 41ಕೋಟಿ
2018 ರಲ್ಲಿ ಬಿಡುಗಡೆಯಾದ ಅಂಧಧುನ್ ಸಿನಿಮಾ. ಈ ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆಗೆ ಟಬು ಮತ್ತು ರಾಧಿಕಾ ಆಪ್ಟೆ ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 32 ಕೋಟಿ
ಗಳಿಕೆ: 73 ಕೋಟಿ
2018 ರಲ್ಲಿ ಬಿಡುಗಡೆಯಾದ 'ರಾಝಿ' ಚಿತ್ರ. ಈ ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್. ಆಲಿಯಾ ಭಟ್ ಜೊತೆ ವಿಕ್ಕಿ ಕೌಶಲ್, ಜೈದೀಪ್ ಅಹ್ಲಾವತ್, ರಜಿತ್ ಕಪೂರ್ ಮತ್ತು ಸೋನಿ ರಜ್ದಾನ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 40ಕೋಟಿ
ಗಳಿಕೆ: 123 ಕೋಟಿ
ಅಮಿತ್ ರವೀಂದ್ರನಾಥ್ ಅವರ ಬದಾಯಿ ಹೋ ಚಿತ್ರ 2018 ರಲ್ಲಿ ಬಿಡುಗಡೆಯಾಯಿತು. ಆಯುಷ್ಮಾನ್ ಖುರಾನಾ, ನೀನಾ ಗುಪ್ತಾ, ಗಜರಾಜ್ ರಾವ್, ಸುರೇಖಾ ಸಿಕ್ರಿ ಮತ್ತು ಸನ್ಯಾ ಮಲ್ಹೋತ್ರಾ ಈ ಚಿತ್ರದ ಪ್ರಮುಖ ಸ್ಟಾರ್ರ್ಸ್.
ಬಜೆಟ್: 30ಕೋಟಿ
ಗಳಿಕೆ: 136 ಕೋಟಿ
2019 ರಲ್ಲಿ ಬಿಡುಗಡೆಯಾದ ಡ್ರೀಮ್ ಗರ್ಲ್ ಚಿತ್ರದ ನಿರ್ದೇಶಕರು ರಾಜ್ ಶಾಂಡಿಲ್ಯ. ಆಯುಷ್ಮಾನ್ ಖುರಾನಾ, ನುಶ್ರತ್ ಭರುಚಾ ಮತ್ತು ಅಣ್ಣು ಕಪೂರ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಜೆಟ್: 36 ಕೋಟಿ
ಗಳಿಕೆ:139 ಕೋಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.