- Home
- Entertainment
- Cine World
- 5 ಸಲ ಸರ್ಜರಿಯಾಗಿ ಮುಖವೇ ಹಾಳಾಯ್ತು, ಆದರೂ ಅವನು ನನ್ನ ಬಿಟ್ಟು ಹೋಗಿಲ್ಲ: The Family Man Series ನಟನ ಪತ್ನಿ!
5 ಸಲ ಸರ್ಜರಿಯಾಗಿ ಮುಖವೇ ಹಾಳಾಯ್ತು, ಆದರೂ ಅವನು ನನ್ನ ಬಿಟ್ಟು ಹೋಗಿಲ್ಲ: The Family Man Series ನಟನ ಪತ್ನಿ!
Actor Sharib Hashmi: 'ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಟ ಶಾರಿಬ್ ಹಶ್ಮಿ ಪತ್ನಿ ನಸ್ರೀನ್ 6ನೇ ಬಾರಿಗೆ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸರಣಿ ಶಸ್ತ್ರಚಿಕಿತ್ಸೆಗಳಿಂದ ಮುಖದ ರೂಪ ಬದಲಾದರೂ, ಪತಿ ಶಾರಿಬ್ ಅವರ ಅಚಲ ಪ್ರೀತಿ, ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂದು ನಸ್ರೀನ್ ಹೇಳಿಕೊಂಡಿದ್ದಾರೆ.

ನಸ್ರೀನ್ ಅವರಿಗೆ ಬಾಯಿ ಕ್ಯಾನ್ಸರ್
ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವವರೇ ನಿಜವಾದ ಸಂಗಾತಿ. 'ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್ ಮೂಲಕ ಮನೆಮಾತಾದ ನಟ ಶಾರಿಬ್ ಹಶ್ಮಿ ಮತ್ತು ಅವರ ಪತ್ನಿ ನಸ್ರೀನ್ ಅವರ ಪ್ರೀತಿಯ ಕಥೆ ಇದಕ್ಕೆ ಒಂದು ಉತ್ತಮ ಉದಾಹರಣೆ. ನಸ್ರೀನ್ ಅವರಿಗೆ ಬಾಯಿ ಕ್ಯಾನ್ಸರ್ ಇದ್ದು, ಈಗಾಗಲೇ ಐದು ಬಾರಿ ಅದನ್ನು ಗೆದ್ದು ಬಂದಿದ್ದಾರೆ. ಆದರೆ, ಈಗ ಆರನೇ ಬಾರಿಗೆ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿದೆ.

ನನ್ನ ಮುಖದ ರೂಪ ಬದಲಾದರೂ ಬಿಡಲಿಲ್ಲ
ಕ್ಯಾನ್ಸರ್ ನನ್ನನ್ನು ಕಾಡಿದರೂ, ನನ್ನ ಮುಖದ ರೂಪ ಬದಲಾದರೂ ಹಶ್ಮಿ ನನ್ನನ್ನು ಬಿಟ್ಟು ಹೋಗಲಿಲ್ಲ ಎಂದು ನಸ್ರೀನ್ ಹೇಳಿದ್ದಾರೆ. ಅವರ ಈ ಮಾತಲ್ಲೇ ಇಬ್ಬರ ನಡುವಿನ ಆಳವಾದ ಪ್ರೀತಿ ಎದ್ದು ಕಾಣುತ್ತದೆ. 2018ರಲ್ಲಿ ನಸ್ರೀನ್‌ಗೆ ಮೊದಲ ಬಾರಿಗೆ ಬಾಯಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಂದಿನಿಂದ ಅವರ ಬಾಯಿಗೆ ಐದು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಹಳೆ ಫೋಟೋ ನೋಡಿದ್ರೆ ಬೇಸರ ಆಗುತ್ತೆ
"ಆಗ 'ಫ್ಯಾಮಿಲಿ ಮ್ಯಾನ್' ಸೀರೀಸ್‌ನ ಕೆಲಸಗಳು ನಡೆಯುತ್ತಿದ್ದವು. ಶಾರಿಬ್ ಊಟಕ್ಕೆ ಹೋಗುವಾಗ, ನನ್ನ ಬಯಾಪ್ಸಿ ರಿಪೋರ್ಟ್ ನೆನಪಾಗಿ ಮನೆಗೆ ವಾಪಸ್ ಬಂದರು. ಕ್ಯಾನ್ಸರ್ ಅಂತ ಗೊತ್ತಾದ ತಕ್ಷಣ ಅವರು ಕುಸಿದುಹೋಗಿ, ಜೋರಾಗಿ ಅಳಲು ಶುರುಮಾಡಿದರು. 'ಚಿಂತೆ ಮಾಡಬೇಡಿ, ಎಲ್ಲ ಸರಿಹೋಗುತ್ತೆ' ಅಂತ ನಾನೇ ಅವರಿಗೆ ಸಮಾಧಾನ ಮಾಡಿದ್ದು ಈಗಲೂ ನೆನಪಿದೆ. ಐದು ಸರ್ಜರಿಗಳಿಂದ ನನ್ನ ಮುಖದ ರೂಪವೇ ಬದಲಾಗಿ ಹೋಯ್ತು. ನನ್ನ ಹಳೆಯ ಫೋಟೋ ನೋಡಿದಾಗ, ನಾನು ಎಷ್ಟು ಸುಂದರವಾಗಿದ್ದೆ ಅನಿಸುತ್ತೆ. ಈ ಹೋರಾಟ ಸುಲಭವಾಗಿರಲಿಲ್ಲ. ಆದರೆ ಈಗ ನನ್ನ ಕುಟುಂಬದ ಜೊತೆ ಇರಲು ಸಾಧ್ಯವಾಗುತ್ತಿದೆ," ಎಂದು ನಸ್ರೀನ್ ಹೇಳಿದ್ದಾರೆ.
ಹಶ್ಮಿ ನನ್ನನ್ನು ಬಿಟ್ಟು ಹೋಗಲಿಲ್ಲ
"ಇಷ್ಟೆಲ್ಲಾ ಆದರೂ ಹಶ್ಮಿ ನನ್ನನ್ನು ಬಿಟ್ಟು ಹೋಗಲಿಲ್ಲ. ಶೂಟಿಂಗ್ ಒತ್ತಡದ ನಡುವೆಯೂ ಆಸ್ಪತ್ರೆಗೆ ಬರುತ್ತಿದ್ದರು. ನಾನು ಡಿಸ್ಚಾರ್ಜ್ ಆಗುವವರೆಗೂ ಬ್ಯಾಗ್ ಹಿಡಿದು ನನಗಾಗಿ ಕಾಯುತ್ತಿದ್ದರು. ನನ್ನ ಅತ್ಯಂತ ನೋವಿನ ಕ್ಷಣಗಳಲ್ಲೂ ಹಶ್ಮಿ ನನ್ನ ಜೊತೆಗಿದ್ದರು. ಅದೇ ನನಗೆ ದೊಡ್ಡ ಧೈರ್ಯ ಮತ್ತು ಸಮಾಧಾನ," ಎಂದು ನಸ್ರೀನ್ ಭಾವುಕರಾಗಿ ನುಡಿದರು.
ಕ್ಯಾನ್ಸರ್ ವಿರುದ್ಧ ಹೋರಾಟ
'Hauterrfly'ಗೆ ನೀಡಿದ ಸಂದರ್ಶನದಲ್ಲಿ ಶಾರಿಬ್ ಹಶ್ಮಿ, "ಅವಳಿಗೆ ಐದು ಸರ್ಜರಿಗಳಾಗಿವೆ. ಈಗ ಆರನೇ ಬಾರಿಗೆ ಮತ್ತೆ ಬಂದಿದೆ. ಈ ಬಾರಿ ಕ್ಯಾನ್ಸರ್ ದೇಹದ ಎಲ್ಲಾ ಕಡೆ ಹರಡಿದೆ. ಆದರೆ ಅವಳು ಇದನ್ನೂ ಜಯಿಸುತ್ತಾಳೆ. ಈ ಸಮಯವೂ ಕಳೆದುಹೋಗುತ್ತದೆ. ಚಿಕಿತ್ಸೆ ನಡೆಯುತ್ತಿದೆ. ನಸ್ರೀನ್ ತನ್ನ ಕಾಯಿಲೆಯನ್ನು ನಿಭಾಯಿಸುವ ರೀತಿ ನಮಗೂ ಧೈರ್ಯ ಕೊಡುತ್ತದೆ. ಅವಳು ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡುತ್ತಲೇ ಇದ್ದಾಳೆ" ಎಂದು ಹೇಳಿದ್ದಾರೆ.
ಹಶ್ಮಿಗೆ ಮೆಚ್ಚುಗೆ
ಈ ಸಂದರ್ಶನದ ನಂತರ, ಪತ್ನಿಯ ಕಷ್ಟಕಾಲದಲ್ಲಿ ಜೊತೆ ನಿಂತಿರುವ ಶಾರಿಬ್ ಅವರನ್ನು ಅನೇಕರು ಹೊಗಳುತ್ತಿದ್ದಾರೆ. ಹಾಗೆಯೇ, ನಸ್ರೀನ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

