- Home
- Entertainment
- Cine World
- ಧಾರವಾಡಕ್ಕೆ ಬಂದ ತೆಲುಗು ಖ್ಯಾತ ನಟ, ಕನ್ನಡಿಗ ಶ್ರೀಕಾಂತ: ಗೆಳೆಯನ ಮನೆಯಲ್ಲಿ ಉಪಹಾರ ಸೇವನೆ..!
ಧಾರವಾಡಕ್ಕೆ ಬಂದ ತೆಲುಗು ಖ್ಯಾತ ನಟ, ಕನ್ನಡಿಗ ಶ್ರೀಕಾಂತ: ಗೆಳೆಯನ ಮನೆಯಲ್ಲಿ ಉಪಹಾರ ಸೇವನೆ..!
ಧಾರವಾಡ(ಸೆ.15): ತೆಲುಗು ಚಿತ್ರರಂಗದ ಖ್ಯಾತ ನಟ, ಕನ್ನಡಿಗ ಶ್ರೀಕಾಂತ ಅವರು ಇಂದು(ಭಾನುವಾರ) ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಹೌದು, ಧಾರವಾಡದಲ್ಲಿರವ ತಮ್ಮ ಗೆಳೆಯರನ್ನ ಭೇಟಿ ಮಾಡಲು ಬಂದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರುವ ಶ್ರೀಕಾಂತ ಅವರು ಧಾರವಾಡದ ಸಿಎಸ್‌ಐ ಕಾಲೇಜ್‌ನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಆಗಾಗ ಧಾರವಾಡಕ್ಕೆ ಬಂದು ಹೋಗುತ್ತಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿದ್ದಾರೆ. ತಮ್ಮ ಸ್ವಂತ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ತೆರಳಲು ಆಗಮಿಸಿದ್ದಾರೆ. ಈ ವೇಳೆ ಧಾರವಾಡಕ್ಕೆ ಆಗಮಿಸಿ ಗೆಳೆಯನ ಮನೆಯಲ್ಲು ಉಪಹಾರ ಸೇವಿಸಿದ್ದಾರೆ.
ಧಾರವಾಡದ ಗೆಳೆಯ ದಿನೇಶ ಶೆಟ್ಟಿ ಮನೆಯಲ್ಲಿ ನಟ ಶ್ರೀಕಾಂತ ಅವರು ಉಪಹಾರ ಸೇವನೆ ಮಾಡಿದ್ದಾರೆ. ದಿನೇಶ ಶೆಟ್ಟಿ ಅವರು ಧಾರವಾಡ ನಗರದಲ್ಲಿರುವ ಉಪವನ ಹೊಟೇಲ್ ಮಾಲೀಕರಾಗಿದ್ದಾರೆ.
ಕಾಲೇಜ್ ದಿನಗಳಲ್ಲಿ ನಟ ಶ್ರೀಕಾಂತ ಅವರು ಉಪವನ ಹೊಟೇಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಗಾಗ ಉಪವನ ಹೊಟೇಲ್ ಮತ್ತು ಹೊಟೇಲ್ ಮಾಲೀಕರ ಭೇಟಿಗೆ ಬರುತ್ತಾರೆ ಶ್ರೀಕಾಂತ.
ನಟ ಶ್ರೀಕಾಂತ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲ ನಿವಾಸಿಯಾಗಿದ್ದಾರೆ. ಪದವಿ ಶಿಕ್ಷಣವನ್ನ ಧಾರವಾಡ ನಗರದಲ್ಲಿಯೇ ಪಡೆದಿದ್ದಾರೆ. ಬಳಿಕ ನಟನೆಗೆಂದು ಹೈದ್ರಾಬಾದ್‌ಗೆ ತೆರಳಿ ತೆಲುಗು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದಾರೆ. ಇಷ್ಟು ದೊಡ್ಡ ನಟರಾದರೂ ಕೂಡ ತಮ್ಮ ಹುಟ್ಟೂರು ಗಂಗಾವತಿ ಹಾಗೂ ಪದವಿ ಟೈಂನಲ್ಲಿದ್ದ ಧಾರವಾಡ ನಗರಕ್ಕೂ ಆಗಾಗ ಬಂದು ಹೋಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.