ತಾತನ ತೋಟದಲ್ಲಿ ಸೂರ್ಯಕಾಂತಿ ಅರಳಿಸಿ, ಪ್ರೀತಿಸಿದ ಹುಡುಗನ ಕೈ ಹಿಡಿದ ನಟಿ ಕೀರ್ತಿ; ಫೋಟೋ ವೈರಲ್
ಆಡಂಬರ ಇಲ್ಲ ಪ್ಲಾಸ್ಟಿಕ್ ಇಲ್ಲವೇ ಇಲ್ಲ; ಸೂರ್ಯಕಾಂತಿ ತೋಟದಲ್ಲಿ ನಟಿಯೊಬ್ಬರು ನೆಚ್ಚಿನ ಹುಡುಗನ ಕೈ ಹಿಡಿಡಿದ್ದಾರೆ. ಮಾತ್ರವಲ್ಲ ಮದುವೆಯಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ತಮಿಳು ನಟ ಅಶೋಕ್ ಸೆಲ್ವನ್ ಮತ್ತು ನಟಿ ಕೀರ್ತಿ ಪಾಂಡಿಯನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 13ರಂದು ತಿರುನಲ್ವೇಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅಶೋಕ್ ಸೆಲ್ವನ್ ಮತ್ತು ಕೀರ್ತಿ ಪಾಂಡಿಯನ್ ಮದುವೆಯಾದರು. ಮನೆ ಮಂದಿ ಮತ್ತು ಆತ್ಮೀಯರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕೀರ್ತಿ, ಹಿರಿಯ ನಟ ಮತ್ತು ನಿರ್ಮಾಪಕ ಅರುಣ್ ಪಾಂಡಿಯನ್ ಅವರ ಪುತ್ರಿ. ಕೀರ್ತಿ ಅವರ ಹುಟ್ಟೂರು ತಿರುನೆಲ್ವೇಲಿ ಸಮೀಪದ ಇಟ್ಟೇರಿಯ ಸೂರ್ಯಕಾಂತಿ ತೋಟದಲ್ಲಿ ವಿವಾಹ ನಡೆದಿದೆ. ಚೆನ್ನೈನಲ್ಲಿ ಸೆ.16ರಂದು ಅದ್ಧೂರಿಯಾಗಿ ಆರತಕ್ಷತೆ ಏರ್ಪಡಿಸುವುದಕ್ಕೆ ಕುಟುಂಬಸ್ಥರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ತಮಿಳು ಚಿತ್ರರಂಗದ ಅಶೋಕ್ ಸೆಲ್ವನ್ ಮತ್ತು ಕೀರ್ತಿ ಪಾಂಡಿಯನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಕೆಲ ತಿಂಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು, ಅವರು ಅಧಿಕೃತವಾಗಿ ಮದುವೆಯಾಗಿದ್ದಾರೆ. ವಿವಾಹದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ ನಟಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಟಿ ಮಂಜಿಮಾ ಮೋಹನ್, ನಟಿ ಐಶ್ವರ್ಯಾ ರಾಜೇಶ್ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಕೀರ್ತಿ ಪಾಂಡಿಯನ್ ಅವರ ಸೋದರಸಂಬಂಧಿಯಾಗಿರುವ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ರಮ್ಯಾ ಪಾಂಡಿಯನ್ ಕೂಡ ಮದುವೆಯ ಸಂಭ್ರಮದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಶೋಕ್ ಸೆಲ್ವನ್ ಅಭಿನಯದ ಪೋರ್ ಥೋಜಿಲ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರವು ವೀಕ್ಷಕರು ಮತ್ತು ವಿಮರ್ಶಕರೆರಡರಿಂದಲೂ ಅಪಾರ ಪ್ರಶಂಸೆಯನ್ನು ಗಳಿಸಿತು. ಶರತ್‌ಕುಮಾರ್ ಅವರ ಜೊತೆಯಲ್ಲಿ ಕಾಣಿಸಿಕೊಂಡ ಈ ಚಿತ್ರವು ಬಾಕ್ಸ್ ಆಫೀಸ್ ಗಳಿಕೆಯಲ್ಲಿ 50 ಕೋಟಿ ರೂಪಾಯಿಗಳನ್ನು ಗಳಿಸಿತು. ಪ್ರಸ್ತುತ, ಅಶೋಕ್ ಸೆಲ್ವನ್ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಸಬ ನಾಯಗನ್ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾ
ಮತ್ತೊಂದೆಡೆ, ನಟ, ರಾಜಕಾರಣಿ ಅರುಣ್ ಪಾಂಡಿಯನ್ ಅವರ ಪುತ್ರಿ ಕೀರ್ತಿ ಪಾಂಡಿಯನ್, ಥ್ರಿಲ್ಲರ್ ಅನ್ಬಿರ್ಕಿನಿಯಾಲ್ ಮತ್ತು ಬ್ಲೂ ಸ್ಟಾರ್ ಬಿಡುಗಡೆಯಾದ ನಂತರ ಭಾರಿ ಮನ್ನಣೆಯನ್ನು ಗಳಿಸಿದರು, ಅಲ್ಲಿ ಅವರು ತಮ್ಮ ಪ್ರಸ್ತುತ ಪತಿಯೊಂದಿಗೆ ಸ್ಕ್ರೀನ್‌ಸ್ಪೇಸ್ ಹಂಚಿಕೊಂಡರು. ನಟಿಯ ಮುಂದಿನ ಚಿತ್ರವು ಗಿರಿ ಮರ್ಫಿ ನಿರ್ದೇಶನದ ತಮಿಳಿನ ಕೊಂಜಾಮ್ ಪೆಸಿನಾಲ್ ಯೆನ್ನಾ ಆಗಿದೆ. ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.